ಇನ್'ಸ್ಟಾಗ್ರಾಂನಲ್ಲಿ 10.4 ಕೋಟಿ ಹಿಂಬಾಲಕರನ್ನು ಹೊಂದಿರುವ ರೊನಾಲ್ಡೊ ಪ್ರತಿ ಪೋಸ್ಟ್'ಗೆ ಕನಿಷ್ಠ 30 ಲಕ್ಷ ಲೈಕ್'ಗಳು ಬರುತ್ತವೆ ಎಂದು ಅಂದಾಜಿಸಲಾಗಿದೆ.
ನವದೆಹಲಿ(ಜು.08): ವಿಶ್ವದ ಶ್ರೀಮಂತ ಫುಟ್ಬಾಲಿಗರ ಪೈಕಿ ಒಬ್ಬರಾದ ಕ್ರಿಸ್ಟಿಯಾನೊ ರೊನಾಲ್ಡೊ ಇನ್'ಸ್ಟಾಗ್ರಾಂನಲ್ಲೂ ಗಳಿಕೆ ಮಾಡುತ್ತಿದ್ದಾರೆ.
ಹೌದು ರೊನಾಲ್ಡೊ ಸಾಮಾಜಿಕ ಜಾಲತಾಣವಾದ ಇನ್'ಸ್ಟಾಗ್ರಾಂನಲ್ಲಿ ತಾವು ಹಾಕುವ ಪ್ರತಿ ಪೋಸ್ಟ್'ಗೆ 310000 (ಅಂದಾಜು 2.58 ಕೋಟಿ ರುಪಾಯಿ) ಪೌಂಡ್ ಸಂಪಾದಿಸುತ್ತಾರೆ ಎಂದು ಸಮೀಕ್ಷೆಯೊಂದರಿಂದ ಬಹಿರಂಗಗೊಂಡಿದೆ.
ಇನ್'ಸ್ಟಾಗ್ರಾಂನಲ್ಲಿ 10.4 ಕೋಟಿ ಹಿಂಬಾಲಕರನ್ನು ಹೊಂದಿರುವ ರೊನಾಲ್ಡೊ ಪ್ರತಿ ಪೋಸ್ಟ್'ಗೆ ಕನಿಷ್ಠ 30 ಲಕ್ಷ ಲೈಕ್'ಗಳು ಬರುತ್ತವೆ ಎಂದು ಅಂದಾಜಿಸಲಾಗಿದೆ.
'ಇನ್'ಸ್ಟಾಗ್ರಾಂ ಶ್ರೀಮಂತರ ಲಿಸ್ಟ್' ಪಟ್ಟಿಯಲ್ಲಿ ಮೂರನೇ ಸ್ಥಾನಪಡೆದಿದ್ದಾರೆ. ಗಾಯಕಿ ಸೆಲೆನಾ ಗೊಮೆಜ್ ಮೊದಲ ಸ್ಥಾನದಲ್ಲಿದ್ದಾರೆ.