Asianet Suvarna News Asianet Suvarna News

IPL ನಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಹರ್ಷ: ವರ್ಷದ ಬಳಿಕ ಕಮ್ ಬ್ಯಾಕ್ ಮಾಡಿದ ಬೋಗ್ಲೆ

ಒಂದು ವರ್ಷದಿಂದ ಭಾರತಿಯ ಕ್ರಿಕೆಟ್​​ ಅಭಿಮಾನಿಗಳು ಮಿಸ್​​​ ಮಾಡಿಕೊಂಡಿದ್ದ ಆ ಒಂದು ಧ್ವನಿ ಮತ್ತೆ ಕೇಳತೊಡಗಿದೆ. ಐಪಿಎಲ್‌ನಲ್ಲಿ ಸಪ್ತ ಸುಂದರಿಯರ ನಿರೂಪಣೆಗೆ ಎಷ್ಟು ಕ್ರೇಜ್ ಇದೆಯೋ, ಇವರ ಕಂಠಕ್ಕೂ ಅಷ್ಟೇ ಕ್ರೇಜ್ ಇದೆ. ಇವರ ಮಾತುಗಳಿಂದ ಕ್ರಿಕೆಟ್ ವಿವರಣೆ ಕೇಳಲು ಎಷ್ಟೋ ಜನರು ಟಿವಿ ಮುಂದೆ ಗಂಟೆಗಟ್ಟಲೆ ಕುಳಿತು ಕ್ರಿಕೆಟ್​​ ನೋಡುತ್ತಾರೆ. ಹೀಗೆ ತಮ್ಮ ಕಂಠ ಸಿರಿಯಿಂದ ಭಾರತದ ಕ್ರಿಕೆಟ್​​ ಅಭಿಮಾನಿಗಳ  ಮನ ಗೆದ್ದವರು ಹರ್ಷ ಭೋಗ್ಲೆ.

The Reason Why Hasha Bhogle Came Back To Give The Commentary

ಮುಂಬೈ(ಎ.08): ಒಂದು ವರ್ಷದಿಂದ ಭಾರತಿಯ ಕ್ರಿಕೆಟ್​​ ಅಭಿಮಾನಿಗಳು ಮಿಸ್​​​ ಮಾಡಿಕೊಂಡಿದ್ದ ಆ ಒಂದು ಧ್ವನಿ ಮತ್ತೆ ಕೇಳತೊಡಗಿದೆ. ಐಪಿಎಲ್‌ನಲ್ಲಿ ಸಪ್ತ ಸುಂದರಿಯರ ನಿರೂಪಣೆಗೆ ಎಷ್ಟು ಕ್ರೇಜ್ ಇದೆಯೋ, ಇವರ ಕಂಠಕ್ಕೂ ಅಷ್ಟೇ ಕ್ರೇಜ್ ಇದೆ. ಇವರ ಮಾತುಗಳಿಂದ ಕ್ರಿಕೆಟ್ ವಿವರಣೆ ಕೇಳಲು ಎಷ್ಟೋ ಜನರು ಟಿವಿ ಮುಂದೆ ಗಂಟೆಗಟ್ಟಲೆ ಕುಳಿತು ಕ್ರಿಕೆಟ್​​ ನೋಡುತ್ತಾರೆ. ಹೀಗೆ ತಮ್ಮ ಕಂಠ ಸಿರಿಯಿಂದ ಭಾರತದ ಕ್ರಿಕೆಟ್​​ ಅಭಿಮಾನಿಗಳ  ಮನ ಗೆದ್ದವರು ಹರ್ಷ ಭೋಗ್ಲೆ.

ತನ್ನ ವಿಭಿನ್ನ ವಿಶ್ಲೇಷಣೆಯೊಂದಿಗೆ ಕ್ರಿಕೆಟ್​​ ಪ್ರೇಮಿಗಳನ್ನು ರಂಜಿಸುತ್ತಿದ್ದ ಹರ್ಷ ಏಕಾಏಕಿ ಮಾಯವಾಗಿಬಿಟ್ಟಿದ್ದರು. ಕಳೆದ ಒಂದು ವರ್ಷದಿಂದ ಯಾವುದೇ ಪಂದ್ಯದಲ್ಲೂ ಅವರ ಕಾಮೆಂಟರಿ ಇರಲಿಲ್ಲ. ಒಂದು ವರ್ಷದಿಂದ ಭಾರತಿಯ ಕ್ರಿಕೆಟ್​​ ಅಭಿಮಾನಿಗಳು ಮಿಸ್​​​ ಮಾಡಿಕೊಂಡಿದ್ದ ಹರ್ಷರ ಧ್ವನಿ ಮತ್ತೆ ಕೇಳಿ ಬಂದಿದೆ. ಐಪಿಎಲ್ 10ನೇ ಆವೃತ್ತಿಯಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆ ನೀಡಿದ್ದಾರೆ.

ಹಿಂದಿಯಲ್ಲಿ ಹರ್ಷ ಬೋಗ್ಲೆ ಕಾಮೆಂಟರಿ

ಟೀಂ ಇಂಡಿಯಾ ವಿರೋಧಿ ಎಂಬ ಹಣೆಪಟ್ಟಿ ಹೊತ್ತು ವಿಶ್ಲೇಷಣೆ ಕಾಯಕದಿಂದ ದೂರ ಉಳಿದಿದ್ದ ಹರ್ಷ ಭೋಗ್ಲೆ ಐಪಿಎಲ್‌ನಲ್ಲಿ ಮತ್ತೆ ಮೈಕ್ ಹಿಡಿದಿದ್ದಾರೆ. ಸೆಟ್ ಮ್ಯಾಕ್ಸ್ ನಲ್ಲಿ ಬೋಗ್ಲೆ ಹಿಂದಿಯಲ್ಲಿ ಐಪಿಎಲ್ 10ನೇ ಆವೃತ್ತಿಯ ಮೊದಲೆರಡು ಪಂದ್ಯಗಳ ವೀಕ್ಷಕ ವಿವರಣೆಯನ್ನು ನೀಡಿ ಕ್ರಿಕೆಟ್ ಅಭಿಮಾನಿಗಳನ್ನು ಮನರಂಜಿಸಿದ್ದಾರೆ. ವರ್ಷ ಬಳಿಕ ಇವರ ಕಂಠ ಸಿರಿಯಿಂದ ಕಾಮೆಂಟರಿ ಕೇಳಿದ ಅಭಿಮಾನಿಗಳು ಕೂಡ ಹರ್ಷಗೊಂಡಿದ್ದಾರೆ.

ಭೋಗ್ಲೆ ಕಮ್ ಬ್ಯಾಕ್‌ಗೆ ಕಾರಣ ಯಾರು ಗೊತ್ತಾ?

ಕ್ರಿಕೆಟ್​​​ ವಿಶ್ಲೇಷಣೆಯೇ ಜೀವ ಎಂದುಕೊಂಡಿರುವ ಹರ್ಷ ಭೋಗ್ಲೆ ಮತ್ತೆ ಕಮ್​ಬ್ಯಾಕ್​​ ಮಾಡಲು ಕಾರಣ ನೂತನ ಬಿಸಿಸಿಐ ದೊರೆಗಳು. ಸುಪ್ರೀಂಕೋರ್ಟ್​ ನೀಯೋಜಿಸಿರುವ ಆಡಳಿತ ಮಂಡಳಿ ಬೋಗ್ಲೆಯವರ ಕಾಮೆಂಟರಿಗಿರುವ ಬೆಲೆಗೆ ಮಣೆಹಾಕಿದೆ. ಒಟ್ಟಾರೆ ವರ್ಷದ ಬಳಿಕ ಹರ್ಷ ಬೋಗ್ಲೆಯವರ ಕಂಠ ಸಿರಿಯಲ್ಲಿ ಕಾಮೆಂಟರಿಕೇಳಿದ ಪ್ರೇಕ್ಷಕರು ಫುಲ್ ಖುಷಿಯಾಗಿದ್ದಾರೆ.

Follow Us:
Download App:
  • android
  • ios