Asianet Suvarna News Asianet Suvarna News

ವೀರೂ ಸಾಧನೆಗೆ ಮತ್ತೊಂದು ಗರಿ; ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಲಿದೆ ಡಿಡಿಸಿಎಯ ಈ ನಡೆ

ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದ ಗೇಟ್ ನಂ.2ಕ್ಕೆ ಲೋಕಲ್ ಹೀರೋ ವಿರೇಂದ್ರ ಸೆಹ್ವಾಗ್ ಹೆಸರಿಡಲಾಗಿದ್ದು, ಸ್ವತಃ ಸೆಹ್ವಾಗ್ ಅದನ್ನು ಉದ್ಘಾಟಿಸಿದರು.

The Kotla gets a Virender Sehwag gate

ನವದೆಹಲಿ(ಅ.31): ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಾಧನೆಗೆ ಮತ್ತೊಂದು ಗರಿ ಸಿಕ್ಕಂತಾಗಿದೆ.

ಹೌದು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದ ಗೇಟ್ ನಂ.2ಕ್ಕೆ ಲೋಕಲ್ ಹೀರೋ ವಿರೇಂದ್ರ ಸೆಹ್ವಾಗ್ ಹೆಸರಿಡಲಾಗಿದ್ದು, ಸ್ವತಃ ಸೆಹ್ವಾಗ್ ಅದನ್ನು ಉದ್ಘಾಟಿಸಿದರು. ಡೆಲ್ಲಿ ಕ್ರಿಕೆಟ್ ಅಸೋಸಿಯೇಶನ್(ಡಿಡಿಸಿಎ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸೆಹ್ವಾಗ್, ಕ್ರೀಡಾಂಗಣದ ಗೇಟ್, ಡ್ರೆಸ್ಸಿಂಗ್ ಕೊಠಡಿ, ಸ್ಟ್ಯಾಂಡ್ಸ್'ಗಳಿಗೆ ನನ್ನಂತಹ ಮಾಜಿ ಕ್ರಿಕೆಟಿಗರ ಹೆಸರಿಡುವುದು ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಲಿದೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಸಂದರ್ಭದಲ್ಲಿ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಸೇರಿದಂತೆ, ಭಾರತ ತಂಡದ ಮಾಜಿ ಹಾಗೂ ಹಾಲಿ ಆಟಗಾರರು ಹಾಜರಿದ್ದರು.

ವಿರೇಂದ್ರ ಸೆಹ್ವಾಗ್ ಭಾರತ ಪರ ಟೆಸ್ಟ್ ಕ್ರಿಕೆಟ್'ನಲ್ಲಿ 2 ತ್ರಿಶತಕ ಸಿಡಿಸಿದ ಆಟಗಾರ ಎನ್ನುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಆದರೆ ಡೆಲ್ಲಿ ಕ್ರಿಕೆಟ್ ಸಂಸ್ಥೆ ಟೆಸ್ಟ್ ಕ್ರಿಕೆಟ್'ನಲ್ಲಿ ತ್ರಿಶತಕ ಸಿಡಿಸಿದ ಏಕೈಕ ಭಾರತೀಯ ಬ್ಯಾಟ್ಸ್'ಮನ್ ಎಂದು ಬರೆಯುವ ಮೂಲಕ ಕನ್ನಡಿಗ ಕರುಣ್ ನಾಯರ್ ಸಾಧನೆಯನ್ನು ಮರೆತಿದೆ.

ಆದರೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಆಟಗಾರ ಕರುಣ್ ನಾಯರ್ ತ್ರಿಶತಕ ಬಾರಿಸಿದ್ದನ್ನು ಡಿಡಿಸಿಎ ಮರೆತಿದೆ.

Follow Us:
Download App:
  • android
  • ios