Asianet Suvarna News Asianet Suvarna News

ಸ್ಪೇನ್ ವಿರುದ್ದಧ ಹಾಕಿ ಸರಣಿಗೆ ಭಾರತೀಯ ಮಹಿಳಾ ತಂಡ ಪ್ರಕಟ


ಸ್ಪೇನ್ ವಿರುದ್ಧದ 5 ಪಂದ್ಯಗಳ ಹಾಕಿ ಸರಣಿಗೆ ಭಾರತೀಯ ಹಾಕಿ ತಂಡವನ್ನ ಪ್ರಕಟಿಸಲಾಗಿದೆ. ನಾಯಕಿ ರಾಣಿ ರಾಮ್‌ಪಾಲ್ ತಂಡಕ್ಕೆ ವಾಪಾಸ್ಸಾಗಿದ್ದಾರೆ.

The India women’s hockey team will play a five-match series against Spain later this month

ನವದೆಹಲಿ(ಜೂನ್.1): ಸ್ಪೇನ್ ವಿರುದ್ದದ 5 ಪಂದ್ಯಗಳ ಹಾಕಿ ಸರಣಿಗಾಗಿ ಭಾರತೀಯ ಮಹಿಳಾ ತಂಡವನ್ನ ಪ್ರಕಟಿಸಲಾಗಿದೆ. ಜೂನ್ 12ರಿಂದ ಸ್ಪೇನ್‌ನಲ್ಲಿ ನಡೆಯಲಿರುವ ಹಾಕಿ ಟೂರ್ನಿಗಾಗಿ 20 ಆಟಗಾರರನ್ನೊಳಗೊಂಡ ಮಹಿಳಾ ಹಾಕಿ ತಂಡ ಮುಂದಿನ ವಾರ ‌ಸ್ಪೇನ್‌ಗೆ ಪ್ರಯಾಣ ಬೆಳೆಸಲಿದೆ . 

ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಿಂದ ವಿಶ್ರಾಂತಿ ಪಡೆದಿದ್ದ ನಾಯಕಿ ರಾಣಿ ರಾಮ್‌ಪಾಲ್ ತಂಡಕ್ಕೆ ವಾಪಾಸ್ಸಾಗಿದ್ದಾರೆ. ಜುಲೈನಿಂದ ಲಂಡನ್‌ನಲ್ಲಿ ಆರಂಭವಾಗಲಿರುವ ವಿಶ್ವಕಪ್ ಹಾಕಿ ಟೂರ್ನಿಗೆ ಪೂರ್ವಭಾವಿಯಾಗಿ ಈ ಸರಣಿ ಆಯೋಜಿಸಲಾಗಿದೆ.  ರಾಣಿ ರಾಮ್‌ಪಾಲ್ ತಂಡವನ್ನ ಮುನ್ನಡೆಸಿದರೆ, ಗೋಲುಕೀಪರ್ ಸವಿತ ಉಪನಾಯಕಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಅನುಭವಿ ಡಿಫೆಂಡರ್ ಸುಶೀಲಾ ಚಾನು ಪುಖ್ರಾಂಬಮ್ ತಂಡಕ್ಕೆ ವಾಪಾಸ್ಸಾಗಿದ್ದಾರೆ. 

ಮಹಿಳಾ ಹಾಕಿ ತಂಡ: 
ಗೋಲುಕೀಪರ್ : ಸವಿತಾ(ಉಪನಾಯಕಿ)
ಡಿಫೆಂಡರ್ಸ್ : ಸುನೀತಾ ಲಕ್ರಾ, ದೀಪ್ ಗ್ರೇಸ್ ಎಕ್ಕಾ, ಸುಮನಾ ದೇವಿ ತೌಡಮ್, ದೀಪಿಕಾ, ಗುರ್ಜಿತ್ ಕೌರ್, ಸುಶೀಲಾ ಚಾನು ಪುಖ್ರಾಂಬಮ್ 
ಮಿಡ್‌ಫೀಲ್ಡರ್ಸ್ : ನಮಿತ ಟೊಪ್ಪೋ, ಲಿಲಿಮಾ ಮಿನ್ಜ್, ಮೋನಿಕಾ, ನೇಹಾ ಗೋಯಲ್, ನವಜೋತ್ ಕೌರ್, ನಿಕ್ಕಿ ಪ್ರಧಾನ್
ಫಾರ್ವಡ್ಸ್  : ರಾಣಿ ರಾಮ್‌ಪಾಲ್(ನಾಯಕಿ), ವಂದನಾ ಕಠಾರಿಯಾ, ನವನೀತ್ ಕೌರ್, ಲಾಲ್‌ರೆಮ್ಸಿಯಾಮಿ, ಉದಿತಾ, ಅನೂಪ್ ಬಾರ್ಲ

Follow Us:
Download App:
  • android
  • ios