ಥಾಯ್ಲೆಂಡ್ ಓಪನ್: ಕ್ವಾರ್ಟರ್’ಫೈನಲ್’ಗೆ ಲಗ್ಗೆಯಿಟ್ಟ ಸಿಂಧು

First Published 13, Jul 2018, 12:05 PM IST
Thailand Open PV Sindhu saves India blushes
Highlights

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಿ ಕ್ವಾರ್ಟರ್‌ನಲ್ಲಿ ವಿಶ್ವದ 3ನೇ ರ‍್ಯಾಂಕಿಂಗ್ ಶಟ್ಲರ್ ಸಿಂಧು 21-16, 21-14 ಗೇಮ್‌ಗಳಲ್ಲಿ ಹಾಂಕಾಂಗ್‌ನ ಪುಯಿ ಯಿನ್ ಯಿಪ್ ಎದುರು ಗೆಲುವು ಸಾಧಿಸಿದರು. ಎಂಟರಘಟ್ಟದಲ್ಲಿ ಸಿಂಧು, ಮಲೇಷ್ಯಾದ ಸೊನಿಯ ಚೆಹ್ ಸು ಯಾ ಎದುರು ಸೆಣಸಲಿದ್ದಾರೆ.

ಬ್ಯಾಂಕಾಕ್[ಜು.13]: ಭಾರತದ ತಾರಾ ಶಟ್ಲರ್ ಪಿ.ವಿ. ಸಿಂಧು ಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.

ಉಳಿದಂತೆ ಪರುಪಲ್ಲಿ ಕಶ್ಯಪ್ ಮತ್ತು ಎಚ್.ಎಸ್. ಪ್ರಣಯ್ ಪ್ರಿಕ್ವಾರ್ಟರ್‌ನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ. ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಿ ಕ್ವಾರ್ಟರ್‌ನಲ್ಲಿ ವಿಶ್ವದ 3ನೇ ರ‍್ಯಾಂಕಿಂಗ್ ಶಟ್ಲರ್ ಸಿಂಧು 21-16, 21-14 ಗೇಮ್‌ಗಳಲ್ಲಿ ಹಾಂಕಾಂಗ್‌ನ ಪುಯಿ ಯಿನ್ ಯಿಪ್ ಎದುರು ಗೆಲುವು ಸಾಧಿಸಿದರು. ಎಂಟರಘಟ್ಟದಲ್ಲಿ ಸಿಂಧು, ಮಲೇಷ್ಯಾದ ಸೊನಿಯ ಚೆಹ್ ಸು
ಯಾ ಎದುರು ಸೆಣಸಲಿದ್ದಾರೆ.

ಕಶ್ಯಪ್, ಪ್ರಣಯ್‌ಗೆ ಸೋಲು: 2014ರ ಕಾಮನ್‌ವೆಲ್ತ್ ಚಾಂಪಿಯನ್ ಪಾರುಪಲ್ಲಿ ಕಶ್ಯಪ್ 18-21, 21-18, 19-21 ಗೇಮ್‌ಗಳಲ್ಲಿ ಜಪಾನ್‌ನ ಕನಟಾ ತ್ಸುನೆಯಮಾ ಎದುರು ಪರಾಭವ ಹೊಂದಿದರು.
ಮತೊಂದು ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಪ್ರಣಯ್ 18-21, 14-21 ಗೇಮ್‌ಗಳಲ್ಲಿ ಇಂಡೋನೇಷ್ಯಾದ ಸೋನಿ ದ್ವಿಕುನ್‌ಕೊರೊ ವಿರುದ್ಧ ಸೋತರು. ಇನ್ನುಳಿದಂತೆ ಮನು ಅತ್ರಿ, ಬಿ. ಸುಮಿತ್ ರೆಡ್ಡಿ ಜೋಡಿ, ಸಾತ್ವಿಕ್, ಅಶ್ವಿನಿ ಜೋಡಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತು. 

loader