35 ವರ್ಷದ ಸೆರೆನಾ, ಹಳದಿ ಬಣ್ಣದ ಸ್ವಿಮ್'ಸೂಟ್'ನಲ್ಲಿ ಸೆಲ್ಫಿತೆಗೆದು ಅದರೊಂದಿಗೆ 20 ವಾರಗಳು ಎಂದು ಬರೆದುಕೊಂಡಿದ್ದಾರೆ.

ನ್ಯೂಯಾರ್ಕ್(ಏ.20): ಟೆನಿಸ್ ಸೂಪರ್'ಸ್ಟಾರ್ ಸೆರೆನಾ ವಿಲಿಯಮ್ಸ್ ತಮ್ಮ ಸ್ನ್ಯಾಪ್'ಚಾಟ್'ನಲ್ಲಿ ಪೋಸ್ಟ್ ಮಾಡಿರುವ ಚಿತ್ರವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ.

35 ವರ್ಷದ ಸೆರೆನಾ, ಹಳದಿ ಬಣ್ಣದ ಸ್ವಿಮ್'ಸೂಟ್'ನಲ್ಲಿ ಸೆಲ್ಫಿತೆಗೆದು ಅದರೊಂದಿಗೆ 20 ವಾರಗಳು ಎಂದು ಬರೆದುಕೊಂಡಿದ್ದಾರೆ. ಇದನ್ನು ಗಮನಿಸಿದರೆ ಸೆರೆನಾ ಗರ್ಭಿಣಿಯಾಗಿದ್ದಾರಾ ಎನ್ನುವ ಅನುಮಾನ ಮೂಡಿಸಿದೆ.

ಸೆಲ್ಫಿ ಪೋಸ್ಟ್ ಮಾಡಿದ ಸ್ವಲ್ಪ ಹೊತ್ತಿನ ಬಳಿಕ ಸೆರೆನಾ ಅದನ್ನು ಡಿಲಿಟ್ ಮಾಡಿದ್ದಾರೆ.

ಈ ಬಗ್ಗೆ ಸೆರೆನಾ ಆಗಲಿ, ಅಥವಾ ಅವರ ಮ್ಯಾನೇಜರ್ ಆಗಲಿ ಯಾವುದೇ ಅಧಿಕೃತ ಮಾಹಿತಿ ತಿಳಿಸಿಲ್ಲ. ಡಿಸೆಂಬರ್'ನಲ್ಲಿ ಅಲೆಕ್ಸಿ ಓಹಾನಿಯನ್ ಜೊತೆಗೆ ಸೆರೆನಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು.