Asianet Suvarna News Asianet Suvarna News

ಡೇವಿಸ್ ಕಪ್ ವಿದಾಯ ಪಂದ್ಯಕ್ಕೆ ರೋಹನ್ ಬೋಪಣ್ಣ ಸಜ್ಜು

ಕಳೆದ ಮಾರ್ಚ್‌ನಲ್ಲಿ ಭಾರತ ತಂಡ ಡೆನ್ಮಾರ್ಕ್‌ ವಿರುದ್ಧ ಸೋತು ವಿಶ್ವ ಗುಂಪು-2ಕ್ಕೆ ಹಿಂಬಡ್ತಿ ಪಡೆದಿತ್ತು. ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ-ಯೂಕಿ ಬಾಂಬ್ರಿ ಆಡಲಿದ್ದು, ಶಶಿಕುಮಾರ್‌ ಮುಕುಂದ್‌, ಸುಮಿತ್‌ ನಗಾಲ್‌ ಸಿಂಗಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

Tennis Legend Rohan Bopanna to retire from Davis Cup after 21 years kvn
Author
First Published Sep 16, 2023, 7:58 AM IST

ಲಖನೌ(ಸೆ.16): ಭಾರತದ ದಿಗ್ಗಜ ಟೆನಿಸಿಗ, ಇತ್ತೀಚೆಗಷ್ಟೇ ಯುಎಸ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೂರ್ನಯಲ್ಲಿ ರನ್ನರ್‌-ಅಪ್‌ ಆದ ಕನ್ನಡಿಗ ರೋಹನ್‌ ಬೋಪಣ್ಣ ಡೇವಿಸ್‌ ಕಪ್‌ನಲ್ಲಿ ತಮ್ಮ ವಿದಾಯದ ಪಂದ್ಯವಾಡಲು ಅಣಿಯಾಗಿದ್ದಾರೆ. ಶನಿವಾರ ಹಾಗೂ ಭಾನುವಾರ ಇಲ್ಲಿ, ಮೊರಾಕ್ಕೊ ವಿರುದ್ಧ ವಿಶ್ವ ಗುಂಪು-2 ಪಂದ್ಯ ನಡೆಯಲಿದ್ದು, ಭಾರತ ಸುಲಭದ ಜಯದೊಂದಿಗೆ ವಿಶ್ವ ಗುಂಪು-1ರ ಪ್ಲೇ-ಆಫ್‌ ಪಂದ್ಯಕ್ಕೆ ಅರ್ಹತೆ ಪಡೆಯಲು ಎದುರು ನೋಡುತ್ತಿದೆ. 

ಕಳೆದ ಮಾರ್ಚ್‌ನಲ್ಲಿ ಭಾರತ ತಂಡ ಡೆನ್ಮಾರ್ಕ್‌ ವಿರುದ್ಧ ಸೋತು ವಿಶ್ವ ಗುಂಪು-2ಕ್ಕೆ ಹಿಂಬಡ್ತಿ ಪಡೆದಿತ್ತು. ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ-ಯೂಕಿ ಬಾಂಬ್ರಿ ಆಡಲಿದ್ದು, ಶಶಿಕುಮಾರ್‌ ಮುಕುಂದ್‌, ಸುಮಿತ್‌ ನಗಾಲ್‌ ಸಿಂಗಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

2 ದಶಕಗಳಿಂದಲೂ ಡೇವಿಸ್‌ ಕಪ್‌ನಲ್ಲಿ ಆಡುತ್ತಿರುವ 43 ವರ್ಷದ, ಬೋಪಣ್ಣಗೆ ಈವರೆಗೆ 32 ಡೇವಿಸ್‌ ಕಪ್‌ ಪಂದ್ಯಗಳಲ್ಲಿ 22ರಲ್ಲಿ ಗೆಲುವು ಕಂಡಿದ್ದಾರೆ. ಇದರಲ್ಲಿ 10 ಸಿಂಗಲ್ಸ್‌ ವಿಭಾಗದಲ್ಲಿ ದೊರೆತ ಗೆಲುವುಗಳಾಗಿವೆ ಎನ್ನುವುದು ವಿಶೇಷ.

ಬೆಳಗಾವಿಯಲ್ಲಿ ರಾಷ್ಟ್ರೀಯ ಕಿರಿಯರ ಫುಟ್ಬಾಲ್‌ ಟೂರ್ನಿ

ಬೆಂಗಳೂರು: ಅಂಡರ್‌-13 ಸಬ್ ಜೂನಿಯರ್ ಬಾಲಕಿಯರ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಶ್ರೇಣಿ -2ರ ಪಂದ್ಯಗಳಿಗೆ ಈ ಬಾರಿ ಬೆಳಗಾವಿ ಆತಿಥ್ಯ ವಹಿಸುತ್ತಿದೆ. ಟೂರ್ನಿಯ ಪಂದ್ಯಗಳು ಶುಕ್ರವಾರ ಆರಂಭಗೊಂಡಿದ್ದು, ಸೆ.24ರ ವರೆಗೂ ನಡೆಯಲಿದೆ. ಕರ್ನಾಟಕ ತನ್ನ ಮೊದಲ ಪಂದ್ಯವನ್ನು ಸೆ.18ಕ್ಕೆ ಮಧ್ಯಪ್ರದೇಶ ವಿರುದ್ಧ, 2ನೇ ಪಂದ್ಯವನ್ನು ಸೆ.20ಕ್ಕೆ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಆಡಲಿದೆ.

ಮಗುವಾದ್ಮೇಲೆ ಚಾರ್ಮ್ ಕಳೆದುಕೊಂಡ್ರಾ ಮಯಾಂತಿ ಲ್ಯಾಂಗರ್? ನೆಟ್‌ವರ್ಥ್ ಮಾತ್ರ ಹೆಚ್ಚಾಗಿದೆ, ಏಷ್ಟಿದೆ ಆಸ್ತಿ?

ಏಷ್ಯಾಡ್‌: ಭಾರತ ಫುಟ್ಬಾಲ್‌ ತಂಡಕ್ಕೆ ಝಿಂಗನ್ ಸೇರ್ಪಡೆ

ನವದೆಹಲಿ: ಮುಂಬರುವ 19ನೇ ಆವೃತ್ತಿ ಏಷ್ಯನ್‌ ಗೇಮ್ಸ್‌ನ ಭಾರತದ ಫುಟ್ಬಾಲ್‌ ತಂಡಕ್ಕೆ ತಾರಾ ಡಿಫೆಂಡರ್‌ ಸಂದೇಶ್‌ ಝಿಂಗನ್‌ ಸೇರ್ಪಡೆಗೊಂಡಿದ್ದಾರೆ. ಈಗಾಗಲೇ ಎರಡೆರಡು ಬಾರಿ ಆಟಗಾರರ ಪಟ್ಟಿ ಪ್ರಕಟಗೊಂಡಿದ್ದು, 3ನೇ ಬಾರಿ ಶುಕ್ರವಾರ ಮತ್ತೆ ಕೆಲ ಬದಲಾವಣೆಗಳೊಂದಿಗೆ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಝಿಂಗನ್‌ ಜೊತೆ ಚಿಂಗ್ಲೆನ್‌ಸಾನ ಸಿಂಗ್‌ ಹಾಗೂ ಲಾಲ್‌ಚುಂಗ್ನುಂಗ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಸತತ 2ನೇ ಡೈಮಂಡ್ ಲೀಗ್‌ ಗೆಲ್ತಾರಾ ನೀರಜ್‌?

ಯೂಜಿನ್‌(ಅಮೆರಿಕ): ಪ್ರತಿಷ್ಠಿತ ಡೈಮಂಡ್‌ ಲೀಗ್‌ ಫೈನಲ್ಸ್‌ ಅಥ್ಲೆಟಿಕ್ಸ್‌ ಕೂಟ ಶನಿವಾರ ಹಾಗೂ ಭಾನುವಾರ ಅಮೆರಿಕದ ಯೂಜಿನ್‌ನಲ್ಲಿ ನಡೆಯಲಿದೆ. ತಾರಾ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಈ ಬಾರಿ ಭಾರತದ ಏಕೈಕ ಸ್ಪರ್ಧಿ ಎನಿಸಿಕೊಂಡಿದ್ದು, ಚಾಂಪಿಯನ್‌ ಪಟ್ಟ ಉಳಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

Davis Cup 2023 ಬಿಸಿಲಿನ ಬೇಗೆ; ಡೇವಿಸ್ ಕಪ್ ಪಂದ್ಯದ ಸಮಯ ಬದಲಾವಣೆ

ಇತ್ತೀಚೆಗಷ್ಟೇ ವಿಶ್ವ ಚಾಂಪಿಯನ್‌ ಆಗಿರುವ ನೀರಜ್‌ ಸತತ 2ನೇ ಬಾರಿ ಡೈಮಂಡ್‌ ಲೀಗ್‌ ಪಟ್ಟ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿ ಜ್ಯುರಿಚ್‌ನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಅವರು 88.44 ಮೀ. ದೂರ ದಾಖಲಿಸಿದ್ದರು. ಇದೇ ವೇಳೆ ಫೈನಲ್‌ಗೆ ಅರ್ಹತೆ ಪಡೆದಿದ್ದರೂ ಏಷ್ಯನ್‌ ಗೇಮ್ಸ್‌ ದೃಷ್ಟಿಯಿಂದ ಈ ಬಾರಿ ಕೂಟಕ್ಕೆ 3000 ಮೀ. ಸ್ಟೀಪಲ್‌ಚೇಸ್‌ ಪಟು ಅವಿನಾಶ್ ಸಾಬ್ಳೆ ಹಾಗೂ ಲಾಂಗ್‌ಜಂಪ್‌ ಸ್ಪರ್ಧಿ ಮುರಳಿ ಶ್ರೀಶಂಕರ್ ಗೈರಾಗಲು ನಿರ್ಧರಿಸಿದ್ದಾರೆ.

ಇಂದಿನಿಂದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ ಶುರು

ಬೆಲ್ಗ್ರೇಡ್‌(ಸರ್ಬಿಯಾ): 2023ರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ ಶನಿವಾರದಿಂದ ಸರ್ಬಿಯಾದ ಬೆಲ್ಗ್ರೇಡ್‌ನಲ್ಲಿ ಆರಂಭಗೊಳ್ಳಲಿದ್ದು, 30 ಮಂದಿ ಭಾರತೀಯರು ಪದಕ ಬೇಟೆಗೆ ಇಳಿಯಲಿದ್ದಾರೆ. ಕೂಟ ಸೆ.24ರ ವರೆಗೂ ನಡೆಯಲಿದೆ.

ಭಾರತದಿಂದ ಗ್ರೀಕೊ-ರೋಮನ್‌, ಪುರುಷ ಹಾಗೂ ಮಹಿಳೆಯರ ಫ್ರೀಸ್ಟೈಲ್‌ ವಿಭಾಗಗಳಲ್ಲಿ ತಲಾ 10 ಮಂದಿ ಸ್ಪರ್ಧಿಸಲಿದ್ದಾರೆ. ಕೂಟದ ಇತಿಹಾಸದಲ್ಲಿ ಭಾರತ 1 ಚಿನ್ನ, 5 ಬೆಳ್ಳಿ ಸೇರಿ ಒಟ್ಟು 22 ಪದಕ ಗೆದ್ದಿದೆ. ಕಳೆದ ಬಾರಿ ಭಜರಂಗ್‌, ವಿನೇಶ್‌ ಫೋಗಟ್‌ ಕಂಚು ಜಯಿಸಿದ್ದರು. 2019ರಲ್ಲಿ ಭಾರತ 1 ಬೆಳ್ಳಿ ಸೇರಿ 5 ಪದಕ ಗೆದ್ದಿದ್ದು, ಈ ವರೆಗಿನ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿದೆ. ಈ ಬಾರಿ ಅಂತಿಮ್‌ ಪಂಘಲ್‌, ಅಮನ್‌ ಶೆಹ್ರಾವತ್‌ ಪ್ರಮುಖ ಆಕರ್ಷಣೆ ಎನಿಸಿದ್ದಾರೆ.

'ಅದೃಷ್ಟವಂತ' ಯುವ ಕ್ರಿಕೆಟಿಗನಿಗೆ Yamaha RD350 ಬೈಕ್‌ನಲ್ಲಿ ಲಿಫ್ಟ್‌ ಕೊಟ್ಟ ಧೋನಿ..! ವಿಡಿಯೋ ವೈರಲ್

ಭಾರತದ ಧ್ವಜವಿಲ್ಲ: ಚುನಾವಣೆ ವಿಳಂಬ ಹಿನ್ನೆಲೆಯಲ್ಲಿ ಭಾರತ ಕುಸ್ತಿ ಒಕ್ಕೂಟವನ್ನು ಈಗಾಗಲೇ ವಿಶ್ವ ಕುಸ್ತಿ ಸಂಸ್ಥೆ ಅಮಾನತುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯರು ಈ ಬಾರಿ ತ್ರಿವರ್ಣ ಧ್ವಜದಡಿ ಸ್ಪರ್ಧಿಸುವಂತಿಲ್ಲ. ತಟಸ್ಥ ಸ್ಪರ್ಧಿಗಳಾಗಿ ಕಣಕ್ಕಿಳಿಯಲಿದ್ದಾರೆ.
 

Follow Us:
Download App:
  • android
  • ios