ಪೇಸ್ ಜೋಡಿಗೆ 2018ರಲ್ಲಿ ಇದು 2ನೇ ಚಾಲೆಂಜರ್ ಪ್ರಶಸ್ತಿಯಾಗಿದೆ. ಭಾನುವಾರ ನಡೆದ ಪುರುಷರ ಡಬಲ್ಸ್‌ನ ಫೈನಲ್‌ನಲ್ಲಿ ಇಂಡೋ-ಮೆಕ್ಸಿಕೋ ಜೋಡಿ, ಉರುಗ್ವೆಯ ಐರಲ್ ಮತ್ತು ಈಕ್ವೆಡಾರ್‌ನ ರೊಬೆರ್ಟ್ ಜೋಡಿ ವಿರುದ್ಧ 4-6, 6-3, 10-05 ಸೆಟ್ ಗಳಲ್ಲಿ ಜಯ ಸಾಧಿಸಿತು.
ನವದೆಹಲಿ(ಅ.15): ಭಾರತದ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಮತ್ತು ಮೆಕ್ಸಿಕೋದ ಮಿಗ್ಯುಲ್ ಆಂಜೆಲ್ ರೀಸ್ ಜೋಡಿ, ಸ್ಯಾಂಟೊ ಡೊಮಿಂಗೊ ಓಪನ್ ಟ್ರೋಫಿ
ಜಯಿಸಿದೆ.
ಪೇಸ್ ಜೋಡಿಗೆ 2018ರಲ್ಲಿ ಇದು 2ನೇ ಚಾಲೆಂಜರ್ ಪ್ರಶಸ್ತಿಯಾಗಿದೆ. ಭಾನುವಾರ ನಡೆದ ಪುರುಷರ ಡಬಲ್ಸ್‌ನ ಫೈನಲ್‌ನಲ್ಲಿ ಇಂಡೋ-ಮೆಕ್ಸಿಕೋ ಜೋಡಿ, ಉರುಗ್ವೆಯ ಐರಲ್ ಮತ್ತು ಈಕ್ವೆಡಾರ್‌ನ ರೊಬೆರ್ಟ್ ಜೋಡಿ ವಿರುದ್ಧ 4-6, 6-3, 10-05 ಸೆಟ್ ಗಳಲ್ಲಿ ಜಯ ಸಾಧಿಸಿತು.
1 ಗಂಟೆ 26 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪೇಸ್ ಜೋಡಿ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿತು. ಆದರೆ ಉಳಿದ 2 ಸೆಟ್‌ಗಳಲ್ಲಿ ಪ್ರಾಬಲ್ಯ ಮೆರೆದು ಪಂದ್ಯ ಗೆದ್ದಿತು.