Asianet Suvarna News Asianet Suvarna News

ಡೇವಿಸ್‌ ಕಪ್‌: ಪಾಕ್‌ಗೆ ತೆರಳಲಿರುವ ಭಾರತ ತಂಡ?

ಭಾರತ ಟೆನಿಸ್ ತಂಡ ಡೇವಿಸ್ ಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ತೆರಳುವುದು ಬಹುತೇಕ ಖಚಿತವಾಗಿದೆ. ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಬೆನ್ನಲ್ಲೇ ಭಾರತ ಟೆನಿಸ್ ಭದ್ರತಾ ಪರಿಶೀಲನೆ ನಡೆಸುವಂತೆ ತಿಳಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Tennis ITF satisfied with security plans for Pakistan vs India Davis Cup tie in Islamabad
Author
New Delhi, First Published Aug 13, 2019, 3:32 PM IST

ನವದೆಹಲಿ(ಆ.13): ರಾಜಕೀಯ ಉದ್ವಿಗ್ನತೆ ತೀವ್ರಗೊಂಡ ನಡುವೆಯೂ ಡೇವಿಸ್‌ ಕಪ್‌ ಏಷ್ಯಾ/ಓಷಿಯಾನಿಯಾ ಗುಂಪು 1ರ ಪಂದ್ಯವನ್ನಾಡಲು ಭಾರತ ಟೆನಿಸ್‌ ತಂಡ ಪಾಕಿಸ್ತಾನಕ್ಕೆ ತೆರಳಲು ಸಿದ್ಧತೆ ಆರಂಭಿಸಿದಂತಿದೆ. 

ಡೇವಿಸ್‌ ಕಪ್‌: ಭಾರತದ ಪಾಕ್‌ ಪ್ರವಾಸ ರದ್ದು?

ಸೋಮವಾರ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ‘ಪಾಕಿಸ್ತಾನಕ್ಕೆ ತೆರಳುವ ನಿರ್ಧಾರದಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ. ಇದು ದ್ವಿಪಕ್ಷೀಯ ಸರಣಿಯಲ್ಲ. ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ (ಐಟಿಎಫ್‌) ಆಯೋಜಿಸುತ್ತಿರುವ ಟೂರ್ನಿ’ ಎಂದಿದ್ದಾರೆ. 

ಡೇವಿಸ್ ಕಪ್: 55 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಭಾರತ, ಭದ್ರತೆ ಭರವಸೆ!

ಇನ್ನು ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಪ್ರಧಾನ ಕಾರ್ಯದರ್ಶಿ ಹಿರನ್ಮೋಯ್‌ ಚಟ್ಟರ್ಜಿ, ಪಾಕಿಸ್ತಾನದಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಐಟಿಎಫ್‌ಗೆ ಮನವಿ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು. ಸೆ.14 ಹಾಗೂ ಸೆ.15ರಂದು ಭಾರತ-ಪಾಕ್‌ ಪಂದ್ಯ ಇಸ್ಲಾಮಾಬಾದ್‌ನಲ್ಲಿ ನಿಗದಿಯಾಗಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us:
Download App:
  • android
  • ios