ಈಗಾಗಲೇ ವಿರೇಂದ್ರ ಸೆಹ್ವಾಗ್, ದೊಡ್ಡ ಗಣೇಶ್, ಟಾಮ್ ಮೂಡಿ ಸೇರಿದಂತೆ ಒಟ್ಟು ಆರು ಮಂದಿ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅರ್ಜಿಸಲ್ಲಿಸಿದ್ದಾರೆ.
ಬೆಂಗಳೂರು(ಜೂ.08): ಭಾರತೀಯ ಕ್ರಿಕೆಟ್ ಮಂಡಳಿ ಮೂಲಗಳ ಪ್ರಕಾರ ಕನಿಷ್ಠ 10 ಆಟಗಾರರಿಗೆ ಕುಂಬ್ಳೆ ಕೋಚ್ ಆಗಿ ಮುಂದುವರಿಯುವುದು ಇಷ್ಟವಿಲ್ಲ ಎನ್ನಲಾಗಿದೆ.
ಕುಂಬ್ಳೆ ಸದಾ ಅಧಿಕಾರ ಚಲಾಯಿಸುತ್ತಾರೆ. ಅಲ್ಲದೇ ಆಟಗಾರರ ಒಳಿತಿಗೆ ಪ್ರಾಮುಖ್ಯತೆ ನೀಡುವುದಿಲ್ಲ. ಆಟಗಾರರ ಸಲಹೆಗಳಿಗೆ ಕಿವಿಗೊಡುವುದಿಲ್ಲ ಎಂಬ ಆರೋಪ ಕೇಳಿಬಂದಿದೆ.
‘ಬಳಲಿಕೆ ಹಾಗೂ ಗಾಯದ ಸಮಸ್ಯೆಯಿದ್ದಾಗಲೂ ಕುಂಬ್ಳೆ ಆಟಗಾರರನ್ನು ಆಡುವಂತೆ ಒತ್ತಾಯಿಸುತ್ತಾರೆ. ಅವರ ಒತ್ತಾಯದಿಂದ ಕಣಕ್ಕಿಳಿದು ಒಬ್ಬ ಆಟಗಾರ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು' ಎಂದು ಬಿಸಿಸಿಐ ಮೂಲ ವೊಂದು ತಿಳಿಸಿದೆ.
ತಂಡದಲ್ಲಿರುವ ಕೇವಲ ಒಬ್ಬ ಆಟಗಾರ ಮಾತ್ರ ಕುಂಬ್ಳೆಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಅನಿಲ್ ಕುಂಬ್ಳೆ ಮತ್ತೊಮ್ಮೆ ಕೋಚ್ ಹುದ್ದೆಯಲ್ಲಿ ಮುಂದುವರೆಯಲು ಅರ್ಜಿಸಲ್ಲಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಬಳಿಕ ಅನಿಲ್ ಕುಂಬ್ಳೆ ಕೋಚ್ ಅಧಿಕಾರವಧಿ ಮುಕ್ತಾಯವಾಗಲಿದ್ದು, ಆ ಬಳಿಕ ಬಿಸಿಸಿಐ ನೂತನ ಕೋಚ್ ಆಯ್ಕೆ ಮಾಡಲಿದೆ. ಈಗಾಗಲೇ ವಿರೇಂದ್ರ ಸೆಹ್ವಾಗ್, ದೊಡ್ಡ ಗಣೇಶ್, ಟಾಮ್ ಮೂಡಿ ಸೇರಿದಂತೆ ಒಟ್ಟು ಆರು ಮಂದಿ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅರ್ಜಿಸಲ್ಲಿಸಿದ್ದಾರೆ.
