ಬಾಂಗ್ಲಾ ಸ್ಪಿನ್ ಬೌಲರ್'ಗಳು ಟೀಂ ಇಂಡಿಯಾ ಬ್ಯಾಟ್ಸ್ ಮನ್ಗ'ಳನ್ನ ಖೆಡ್ಡಾಗೆ ಕೆಡವಲು ರೆಡಿಯಾಗಿದ್ದಾರೆ. ಆದ್ರೆ ಟೀಂ ಇಂಡಿಯಾ ಸ್ಪಿನ್ ತ್ರಿವಳಿಗಳು ಮಾತ್ರ ಈ ಟೆಸ್ಟ್ಗಾಗಿ ಕೊಂಚವೂ ತಲೆ ಕೆಡಸಿಕೊಂಡಿಲ್ಲ. ನಮ್ಮ ಸ್ಪಿನ್ನರ್ಗಳ ಕಣ್ಣು ನೆಟ್ಟಿರೋದು ಮುಂಬರುವ ಪಂದ್ಯದ ಮೇಲೆ
ನವದೆಹಲಿ(ಫೆ.08): ಬಾಂಗ್ಲಾ ಸ್ಪಿನ್ ಬೌಲರ್'ಗಳು ಟೀಂ ಇಂಡಿಯಾ ಬ್ಯಾಟ್ಸ್ ಮನ್ಗ'ಳನ್ನ ಖೆಡ್ಡಾಗೆ ಕೆಡವಲು ರೆಡಿಯಾಗಿದ್ದಾರೆ. ಆದ್ರೆ ಟೀಂ ಇಂಡಿಯಾ ಸ್ಪಿನ್ ತ್ರಿವಳಿಗಳು ಮಾತ್ರ ಈ ಟೆಸ್ಟ್ಗಾಗಿ ಕೊಂಚವೂ ತಲೆ ಕೆಡಸಿಕೊಂಡಿಲ್ಲ. ನಮ್ಮ ಸ್ಪಿನ್ನರ್ಗಳ ಕಣ್ಣು ನೆಟ್ಟಿರೋದು ಮುಂಬರುವ ಪಂದ್ಯದ ಮೇಲೆ
ಟೀಂ ಇಂಡಿಯಾ ಮಣಿಸಲು ಬಾಂಗ್ಲಾ ತಯಾರಿ: ಬಾಂಗ್ಲಾರನ್ನ ಲೆಕ್ಕಕ್ಕಿಟ್ಟಿಲ್ಲ ಕೊಹ್ಲಿ ಬಾಯ್ಸ್
ನಾಳೆ ಆರಂಭವಾಗುವ ಟೆಸ್ಟ್ನಲ್ಲಿ ಸ್ಪಿನ್ನರ್'ಗಳೇ ಟ್ರಂಪ್ ಕಾರ್ಡ್. ಅದಕ್ಕಾಗಿ ಬಾಂಗ್ಲಾ ಹೆಚ್ಚು ನಂಬಿರುವುದು ಅವರ ಸ್ಪಿನ್ನರ್'ಗಳನ್ನೇ. ಹೀಗಾಗಿ ಬಾಂಗ್ಲಾ ಸ್ಪಿನ್ನರ್ಸ್ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ ಟೀಂ ಇಂಡಿಯಾ ಮಾತ್ರ ಬಾಂಗ್ಲರನ್ನ ಸಿರೀಯಸ್ ಆಗಿ ತಗೆದುಕೊಳ್ಳಲು ಮನಸ್ಸೇ ಮಾಡುತ್ತಿಲ್ಲ. ಅದರಲ್ಲೂ ನಮ್ಮ ಸ್ಪಿನ್ನರ್ಸ್ ಈ ಟೆಸ್ಟ್ ಅನ್ನ ಇದೇ ತಿಂಗಳ ಕೊನೆಯಲ್ಲಿ ಆರಂಭವಾಗುವ ಬಿಗ್ ಫೈಟ್'ಗೆ ಅಭ್ಯಾಸ ಪಂದ್ಯ ಎಂದೇ ತಿಳಿದಿದ್ದಾರೆ.
ಆಸೀಸ್ ಸರಣಿ ಮೇಲೆ ಸ್ಪಿನ್ನೡೞ ಕಣ್ಣು: ಕಾಂಗರೂಗಳ ತಂತ್ರಕ್ಕೆ ಭಾರತೀಯರು ಪ್ರತಿತಂತ್ರ
23ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗಾಗಿ ದೂರದ ಆಸ್ಟ್ರೇಲಿಯಾದಲ್ಲಿ ಕಾಂಗರೂಗಳು ಫುಲ್ ತಲೆ ಕೆಡಸಿಕೊಂಡಿದ್ದಾರೆ. ಆದರೆ ಬಾಂಗ್ಲಾ ವಿರುದ್ಧದ ಟೆಸ್ಟ್'ನಲ್ಲಿ ಬ್ಯೂಸಿಯಿರುವ ಟೀಂ ಇಂಡಿಯಾ ಆಸ್ಟ್ರೆಲಿಯವನ್ನ ಮರೆತಿಲ್ಲ. ಈಗಾಗಲೇ ಟೀಂ ಇಂಡಿಯಾವನ್ನ ಮಣಿಸಲು ಷಢ್ಯಂತ್ರ ರೂಪಿಸಿರುವ ಆಸೀಸ್ ಸ್ಪಿನ್ನರ್ಗಳ ಮಹತ್ವ ಅರಿತು 4 ಸ್ಪಿನ್ನರ್ಗಳಿಗೆ ಅವಕಾಶ ನೀಡಿದೆ. ಅದೇ ರೀತಿ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಸ್ಪಿನ್ನರ್ಗಳಿಗೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ಕೈಬಿಟ್ಟು ಆಸ್ಟ್ರೇಲಿಯಾ ಸರಣಿಗೆ ಸಜ್ಜುಗೊಳ್ಳಲು ಸೂಚಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಧೀರ್ಘ ಕಾಲದ ಸರಣಿಯಿಂದ ಬಳಲಿದ್ದ ಟೀಂ ಇಂಡಿಯಾ ಸ್ಪಿನ್ನರ್ಗಳಾದ ಅಶ್ವಿನ್, ರವೀಂದ್ರ ಜಡೇಜಾಗೆ ಟಿ20 ಸರಣಿಯಿಂದ ಮುಕ್ತಿ ನೀಡಲಾಗಿತ್ತು. ಕಾರಣ ಮನೆಯಲ್ಲಿ ಮಜಾಮಾಡಲು ಅಲ್ಲ, ಬದಲಿಗೆ ಮುಂಬರುವ ಆಸೀಸ್ ಸರಣಿಗೆ ತಯಾರಿ ನಡೆಸಲು.
ಆಸ್ಟ್ರೇಲಿಯಾ ತಂಡ ಬಲಿಷ್ಠ ಭಾರತವನ್ನ ಸೋಲಿಸಲು ಏನೆಲ್ಲಾ ಮಾಸ್ಟರ್ ಪ್ಲಾನ್ ಮಾಡುತ್ತಿದೆ ಎಂದು ಈ ಹಿಂದೆ ಹೇಳಿದ್ವಿ. ಆದ್ರೆ ಟೀಂ ಇಂಡಿಯಾ ಕೊಂಚವೂ ತಲೆಕೆಡಿಸಿಕೊಂಡಿಲ್ಲ ಎಂದು ಸಹ ದೂರಿದ್ದೆವು ಆದರೆ ಟೀಂ ಇಂಡಿಯಾ ಸೈಲೆಂಟಾಗಿ ಕೆಲಸ ಮಾಡುತ್ತಿದೆ. ಆಸ್ಟ್ರೆಲಿಯಾ ತನ್ನ ಪ್ಲಾನ್ಗಳನ್ನ ಜಗಜ್ಜಾಹಿರು ಮಾಡುತ್ತಿದೆ ಟೀಂ ಇಂಡಿಯಾ ಮಾತ್ರ ಸೈಲೆಂಟಾಗಿ ಕೆಲಸ ಮುಗಿಸುತ್ತಿದೆ.
ಬಾಂಗ್ಲಾ ಟೆಸ್ಟ್ ಸ್ಪಿನ್ನರ್ಗಳಿಗೆ ಅಭ್ಯಾಸ ಪಂದ್ಯ
ಸದ್ಯ ಕೊಂಚ ರೀಲೀಫ್ ಆಗಿರುವ ಟೀಂ ಇಂಡಿಯಾ ಸ್ಪಿನ್ನರ್'ಗಳಾದ ಅಶ್ವಿನ್, ಜಡೇಜಾ ಹಾಗೂ ಜಯಂತ್ ಯಾದವ್ ನಾಳೆ ಬಾಂಗ್ಲಾ ವಿರುದ್ಧ ಕಣಕಿಳಿಯುತ್ತಿದ್ದಾರೆ. ಒಂದು ಕಡೆ ಬಾಂಗ್ಲಾದೇಶ ಸ್ಪಿನ್ನರ್ಗಳು ಟೀಂ ಇಂಡಿಯಾವನ್ನ ಮಣಿಸಲು ಹೋರಾಡಿದರೆ ಇತ್ತ ಕೊಹ್ಲಿ ಸ್ಪಿನ್ನರ್ಸ್ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಹೇಗೆ ಬೌಲಿಂಗ್ ಮಾಡಬೇಕು ಅಂತ ಪ್ರಾಕ್ಟೀಸ್ ಮಾಡಲಿದ್ದಾರೆ.
