ಕ್ರಿಕೆಟ್'ನಲ್ಲಿ ಸದ್ಯ ಆಟಗಾರರಿಗೆ ಹಣದ ಕೊರತೆ ಇಲ್ಲ. ವಿಶೇಷವಾಗಿ IPL ಆರಂಭವಾದಂದಿನಿಂದಲೂ ವಿದೇಶೀ ಕ್ರಿಕೆಟಿಗರೊಂದಿಗೆ, ಸ್ವದೇಶೀ ಕ್ರಿಕೆಟಿಗರ ಅದೃಷ್ಟವೂ ಬದಲಾಗಿದೆ. ಇವರಲ್ಲಿ ಹಲವಾರು ಮಂದಿ ಲಕ್ಷಾಧಿಪತಿ ಇಲ್ಲವೇ ಕೋಟ್ಯಾಧಿಪತಿಗಳಾಗಿದ್ದಾರೆ. ಹೀಗಿದ್ದರೂ ಇವರು ತಮ್ಮ ಕುಟುಂಬಸ್ಥರನ್ನು ಹೇಗೆ ನೋಡಿಕೊಳ್ಳುತ್ತಿದ್ದಾರೆ, ಅವರಿಗೆಷ್ಟು ನೆರವು ನೀಡುತ್ತಿದ್ದಾರೆ ಎಂಬುವುದು ಬೇರೆ ವಿಚಾರ. ಅದರಲ್ಲೂ ತಮ್ಮ ಅಜ್ಜ-ಅಜ್ಜಿ, ಅಪ್ಪ- ಅಮ್ಮನ ವಿಚಾರದಲ್ಲಿ. ಸದ್ಯ ಟೀಂ ಇಂಡಿಯಾದ ಕೋಟ್ಯಾಧಿಪತಿ, ಸ್ಟಾರ್, ಫಾಸ್ಟ್ ಬೌಲರ್ ಬಡತನದಲ್ಲಿ ಜೀವನ ಕಳೆಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಉತ್ತರಾಖಂಡ್(ಜು.04): ಕ್ರಿಕೆಟ್'ನಲ್ಲಿ ಸದ್ಯ ಆಟಗಾರರಿಗೆ ಹಣದ ಕೊರತೆ ಇಲ್ಲ. ವಿಶೇಷವಾಗಿ IPL ಆರಂಭವಾದಂದಿನಿಂದಲೂ ವಿದೇಶೀ ಕ್ರಿಕೆಟಿಗರೊಂದಿಗೆ, ಸ್ವದೇಶೀ ಕ್ರಿಕೆಟಿಗರ ಅದೃಷ್ಟವೂ ಬದಲಾಗಿದೆ. ಇವರಲ್ಲಿ ಹಲವಾರು ಮಂದಿ ಲಕ್ಷಾಧಿಪತಿ ಇಲ್ಲವೇ ಕೋಟ್ಯಾಧಿಪತಿಗಳಾಗಿದ್ದಾರೆ. ಹೀಗಿದ್ದರೂ ಇವರು ತಮ್ಮ ಕುಟುಂಬಸ್ಥರನ್ನು ಹೇಗೆ ನೋಡಿಕೊಳ್ಳುತ್ತಿದ್ದಾರೆ, ಅವರಿಗೆಷ್ಟು ನೆರವು ನೀಡುತ್ತಿದ್ದಾರೆ ಎಂಬುವುದು ಬೇರೆ ವಿಚಾರ. ಅದರಲ್ಲೂ ತಮ್ಮ ಅಜ್ಜ-ಅಜ್ಜಿ, ಅಪ್ಪ- ಅಮ್ಮನ ವಿಚಾರದಲ್ಲಿ. ಸದ್ಯ ಟೀಂ ಇಂಡಿಯಾದ ಕೋಟ್ಯಾಧಿಪತಿ, ಸ್ಟಾರ್, ಫಾಸ್ಟ್ ಬೌಲರ್ ಬಡತನದಲ್ಲಿ ಜೀವನ ಕಳೆಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಈ ಸುದ್ದಿಯನ್ನು ನಂಬುವುದು ಅಷ್ಟು ಸುಲಭವಲ್ಲ. ಆದರೂ ಟೀಂ ಇಂಡಿಯಾದ ಫಾಸ್ಟ್ ಬೌಲರ್, ಕೋಟ್ಯಾಧಿಪತಿ ಜಸ್ಪ್ರೀತ್ ಬುಮ್ರಾನ ಅಜ್ಜ ಚಿಕ್ಕದಾದ ಓಣಿಯೊಂದರಲ್ಲಿ ಹಳೆಯ ಬಾಡಿಗೆ ಕೋಣೆಯೊಂದರಲ್ಲಿ ಕಷ್ಟದಿಂದ ದಿನಗಳೆಯುತ್ತಿದ್ದಾರೆ ಎಂಬುವುದು ನಿಜ. ಇನ್ನು ಅವರು ಮೊದಲಿನಿಂದಲೂ ಬಡವರಾಗಿರಲಿಲ್ಲ ಆದರೆ ಅದೃಷ್ಟ ಅವರ ಕೈ ಹಿಡಿಯಲಿಲ್ಲ. ಯಾಕೆಂದರೆ ಒಂದು ಕಾಲದಲ್ಲಿ ಇವರು ಅಹಮದಾಬಾದ್'ನ ಅತಿ ದೊಡ್ಡ ಉದ್ಯೋಗಪತಿಗಳಲ್ಲಿ ಒಬ್ಬರಾಗಿ ಹೆಸರುವಾಸಿಯಾಗಿದ್ದರು. ಜಸ್ಪ್ರೀತ್ ಅಜ್ಜನ ಹೆಸರು ಸಂತೋಖ್ ಸಿಂಹ ಬುಮ್ರಾ, ಕೋಟ್ಯಾಧಿಪತಿಯಾಗಿದ್ದ ಅವರು ಇಂದು ಒಂದು ದಿನದ ಊಟಕ್ಕಾಗಿ ಪರದಾಡುತ್ತಿದ್ದಾರೆ.

 ಇತ್ತೀಚೆಗೆ ವೃದ್ಧ ಸಂತೋಖ್ ಸಿಂಹ ತನ್ನ ಪೋಲಿಯೋಗ್ರಸ್ಥ ಕಿರಿಯ ಪುತ್ರ ಜಸ್ವಿಂದರ್ ಸಿಂಗ್'ನೊಂದಿಗೆ ಹಳೆಯ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಟೆಂಪೋ ಒಂದರಲ್ಲಿ ಚಾಲಕನಾಗಿ ತನ್ನ ಜೀವನ ನಡೆಸುತ್ತಿದ್ದಾರೆ. ಗುಜರಾತ್'ನ ಬಟ್ವಾ ಇಂಡಸ್ಟ್ರಿಯಲ್ ಸ್ಟೇಟ್'ನಲ್ಲಿ ತನ್ನದೇ ಛಾಪು ಮೂಡಿಸಿದ್ದ ಇವರು ಐಷಾರಾಮಿ ಕಾರು, ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದರು. ಮೂರು ಅತಿ ದೊಡ್ಡ ಫ್ಯಾಕ್ಟರಿಗಳನ್ನು ಹೊಂದಿದ್ದಲ್ಲದೆ ಇದರ ಎರಡು ಶಾಖೆಗಳೂ ಇದ್ದವು.

ಈ ಎಲ್ಲಾ ಉದ್ಯಮವನ್ನು ಕ್ರಿಕೆಟರ್ ಜಸ್ಪ್ರೀತ್ ತಂದೆ ಜಸ್ವೀರ್ ಸಿಂಗ್ ನೀಡಿಕೊಳ್ಳುತ್ತಿದ್ದರು. ಆದರೆ 2001ರಲ್ಲಿ ಜಸ್ವೀರ್ ನಿಧನರಾಗಿದ್ದು, ಇದರಿಂದ ಅಜ್ಜ ಸಂತೋಖ್ ಸಂಪೂರ್ಣವಾಗಿ ಕುಗ್ಗಿ ಹೋದರು. ಇತ್ತ ಫ್ಯಾಕ್ಟರಿಗಳು ಕೂಡಾ ಆರ್ಥಿಕ ಸಂಕಷ್ಟಕ್ಕೀಡಾದವು. ಬ್ಯಾಂಕ್ ಲೋನ್ ತೀರಿಸಲು ತನ್ನ ಫ್ಯಾಕ್ಟರಿಗಳನ್ನೇ ಮಾರಿದರು ಇದರಿಂದ ಕೋಟ್ಯಾಧಿಪತಿ ತೀರಾ ಬಡವರಾದರು. ಇಂದಿಗೂ ಕಳೆದು ಹೋದ ಸ್ವರ್ಣ ದಿನಗಳನ್ನು ನೆನೆಸಿ ಆ ಹಿರಿ ಕಣ್ಣುಗಳಲ್ಲಿ ಎಂದು ಕಣ್ಣೀರು ಜಿನುಗುತ್ತದೆ. ಇಂದಿಗೂ 84ರ ಹರೆಯದ ಸಂತೋಖ್ ತನ್ನ ಬಡತನದಿಂದ ಯಾವುದೇ ಬೇಜಾರಿಲ್ಲ.

ಇಂದು ಅವರ ಮೊಮ್ಮಗ ದೇಶದ ಅತಿ ದೊಡ್ಡ ಕ್ರಿಕೆಟರ್ ಆಗಿದ್ದಾರೆ. ಜಸ್ಪ್ರೀತ್ ಆಟವನ್ನು ಇಂದಿಗೂ ಅವರು ಟಿವಿಯಲ್ಲಿ ನೋಡಿ ತನ್ನ ಯೌವ್ವನವನ್ನು ನೆನೆಸಿಕೊಳ್ಳುತ್ತಾರೆ. 'ಅಂದು ತನ್ನ ಮಡಿಲಲ್ಲಿ ಆಡುತ್ತಿದ್ದ ತನ್ನ ಮೊಮ್ಮಗ ಇಂದು ದೇಶಕ್ಕಾಗಿ ಆಡುತ್ತಿದ್ದಾನೆ. ಅಲ್ಲದೇ ಟೀಂ ಇಂಡಿಯಾದ ಮಿನುಗುವ ತಾರೆಯಾಗಿದ್ದಾನೆ' ಎಂದು ಹೇಳುತ್ತಾರೆ.

ಮೊಮ್ಮಗನ ಫೋಟೋವನ್ನು ಇಂದಿಗೂ ಕಾಪಾಡಿಕೊಂಡಿರುವ ಈ ಅಜ್ಜ ತನ್ನ ಮೊಮ್ಮಗನನ್ನು ನೋಡಲು ಹಾತೊರೆಯುತ್ತಿದ್ದಾರೆ. ತನ್ನ ಮೊಮ್ಮಗನನ್ನು ಅಪ್ಪಕೊಂಡು ಆತನಿಗೆ ಆಶೀರ್ವಾದ ನೀಡುವುದೇ ಅವರ ಇಚ್ಛೆಯಂತೆ. ತನ್ನ ೀ ಇಚ್ಛೆ ಈಡೇರಿದೆ ಅದು ತನ್ನ ಜೀವನದ ಅತಿ ಅಮೂಲ್ಯ ಕ್ಷಣವಾಗಲಿದೆ ಎನ್ನುತ್ತಾರೆ.