ಅಕ್ಕ ತಮ್ಮನ ಪವಿತ್ರ ಪ್ರೀತಿಯ ಪ್ರತೀಕ ರಕ್ಷಾಬಂಧನದಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಭಾರತೀಯರೆಲ್ಲರಿಗೂ ಶುಭಾಷಯ ಕೋರಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ವಿಚಾರವೊಂದರ ಕುರಿತಾಗಿ ಅವರು ನಿರಾಸೆಯನ್ನೂ ವ್ಯಕ್ತಪಡಿಸಿದ್ದಾರೆ.

ನವದೆಹಲಿ(ಆ.08): ಅಕ್ಕ ತಮ್ಮನ ಪವಿತ್ರ ಪ್ರೀತಿಯ ಪ್ರತೀಕ ರಕ್ಷಾಬಂಧನದಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಭಾರತೀಯರೆಲ್ಲರಿಗೂ ಶುಭಾಷಯ ಕೋರಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ವಿಚಾರವೊಂದರ ಕುರಿತಾಗಿ ಅವರು ನಿರಾಸೆಯನ್ನೂ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಮವಾರದಂದು ತನ್ನ ಸಹೋದರಿಯೊಂದಿಗಿನ ಫೋಟೋವನ್ನು ಟ್ವಿಟರ್'ನಲ್ಲಿ ಪೋಸ್ಟ್ ಮಾಡಿದ ಕೊಹ್ಲಿ ಕೇವಲ ರಕ್ಷಾಬಂಧನಕ್ಕೆ ಶುಭಕೋರಿದ್ದಾರೆ ಮಾತ್ರವಲ್ಲದೆ ಈ ಸಂದರ್ಭದಲ್ಲಿ ತನ್ನ ಕುಟುಂಬ ಅದರಲ್ಲೂ ವಿಶೇಷವಾಗಿ ತನ್ನ ಸಹೋದರಿ ತನ್ನ ತಂಗಿ ತನ್ನೊಂದಿಗಿಲ್ಲದಿರುವುದಕ್ಕಾಗಿ ನಿರಾಸೆ ವ್ಯಕ್ತಪಡಿಸಿದ್ದಾರೆ.

ಈ ಕುರಿತಾಗಿ ತನ್ನ ಟ್ವಿಟರ್'ನಲ್ಲಿ ಬರೆದುಕೊಂಡಿರುವ ಕೊಹ್ಲಿ 'ಪ್ರತಿಯೊಬ್ಬರಿಗೂ ರಕ್ಷಾಬಂಧನದ ಹಾರ್ದಿಕ ಶುಭಾಷಯಗಳು. ಅಕ್ಕ ಹಾಗೂ ಕುಟುಂಬಸ್ಥರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದಿದ್ದಾರೆ.

Scroll to load tweet…

ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈವರೆಗೂ ಅದ್ಭುತ ಪ್ರದರ್ಶನದ ಮೂಲಕ ಆರಂಭದ ಎರಡು ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚಿನ ಅಂತರದಿಂದ ಜಯಗಳಿಸಿದೆ. ಸದ್ಯ ತಂಡದ ಚಿತ್ತ ಮೂರನೇ ಪಂದ್ಯದಲ್ಲೂ ಜಯಗಳಿಸಿ ಸೀರೀಸ್'ನ್ಲಲಿ ಕ್ಲೀನ್ ಸ್ವೀಪ್ ಮಾಡುವ ಮೇಲಿದೆ.