ಇಂದು ಅಧ್ಯಕ್ಷ ಇಲೆವೆನ್ ಮತ್ತು ನ್ಯೂಜಿಲೆಂಡ್ ನಡ್ವೆ 2ನೇ ಅಭ್ಯಾಸ ಪಂದ್ಯ ನಡೆಯುತ್ತಿದೆ. ಫಸ್ಟ್ ಮ್ಯಾಚ್ನಲ್ಲಿ ಸೋತಿರುವ ಕಿವೀಸ್, ಇಂದಾದ್ರೂ ಗೆಲ್ಲಲು ಎದುರು ನೋಡ್ತಿದೆ. ಆದ್ರೆ ಭಾರತೀಯ ಯುವ ಆಟಗಾರರು ಇದಕ್ಕೆ ಅವಕಾಶ ಕೊಡ್ತಾರಾ ಅನ್ನೋದು ಸಹ ಪ್ರಶ್ನೆ. ಅಭ್ಯಾಸ ಪಂದ್ಯ ಗೆಲ್ಲೋದೋರು ಟೀಂ ಇಂಡಿಯಾ ವಿರುದ್ಧ ಗೆಲ್ತಾರಾ ಅಂತ ಕ್ರಿಕೆಟ್ ಫ್ಯಾನ್ಸ್ ಕೇಳ್ತಿದ್ದಾರೆ.
ಭಾರತವನ್ನ ಭಾರತದ ನೆಲದಲ್ಲೇ ಸೋಲಿಸ್ತೀವಿ ಅಂತ ಹಠಕ್ಕೆ ಬಿದ್ದು ಬಂದಿದೆ ನ್ಯೂಜಿಲೆಂಡ್ ತಂಡ. ಕಳೆದ ವರ್ಷ ಭಾರತದಲ್ಲೇ ಸರಣಿ ಸೋತು ಹೋಗಿದ್ದ ಕಿವೀಸ್, ಈ ಸಲ ಏನಾದ್ರೂ ಮಾಡಿ ಸರಣಿ ಗೆದ್ದು ಸೇಡು ತೀರಿಸಿಕೊಳ್ಳೋ ಪ್ಲಾನ್ ಮಾಡ್ತಿದೆ. ಅದಕ್ಕಾಗಿ ವಿಶೇಷ ತಯಾರಿ ಸಹ ಮಾಡಿಕೊಂಡಿದೆ. 6 ಆಟಗಾರರನ್ನ ಒಂದು ತಿಂಗಳ ಮುಂಚಿತವಾಗಿಯೇ ಭಾರತಕ್ಕೆ ಕಳುಹಿಸಿತ್ತು. ಆದರೆ ಕಿವೀಸ್ ಪ್ಲಾನ್ ವರ್ಕ್ ಔಟ್ ಆಗೋ ಚಾನ್ಸಸ್ ತೀರ ಕಮ್ಮಿಯಿದೆ. ಸರಣಿ ಗೆಲ್ಲೋದಿರಲಿ, ಟೀಂ ಇಂಡಿಯಾಗೆ ಫೈಟ್ ಕೊಟ್ರೆ ಸಾಕು ಅಂತಿದ್ದಾರೆ ಭಾರತೀಯ ಕ್ರಿಕೆಟ್ ಫ್ಯಾನ್ಸ್.
ನ್ಯೂಜಿಲೆಂಡ್ ಆಟ ಭಾರತೀಯರ ಮುಂದೆ ನಡೆಯಲ್ಲ. ಮೊದಲ ಅಭ್ಯಾಸ ಪಂದ್ಯದಲ್ಲೇ ನ್ಯೂಜಿಲೆಂಡ್ ಸೋತು ಹೋಗಿದೆ. ಈಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್'ನಲ್ಲಿ ಕಣ್ಣು ಬಿಡುತ್ತಿರುವ ಹಾಗೂ ಡೊಮೆಸ್ಟಿಕ್ ಆಟಗಾರರ ಎದುರು ಕಿವೀಸರ ಆಟ ನಡೆಯಲಿಲ್ಲ. ಕೆಎಲ್ ರಾಹುಲ್, ಕರುಣ್ ನಾಯರ್ ಮತ್ತು ಪೃಥ್ವಿ ಶಾ ಬ್ಯಾಟಿಂಗ್'ನಲ್ಲಿ ಕಮಾಲ್ ಮಾಡಿದ್ರು.
ಇಂದು 2ನೇ ಅಭ್ಯಾಸ ಪಂದ್ಯದಲ್ಲಾದ್ರೂ ಗೆಲ್ಲುತ್ತಾ ಕಿವೀಸ್..?
ಇಂದು ಮುಂಬೈನಲ್ಲಿ ನ್ಯೂಜಿಲೆಂಡ್ ಮತ್ತು ಅಧ್ಯಕ್ಷ-11 ತಂಡಗಳ ನಡ್ವೆ ಸೆಕೆಂಡ್ ಪ್ರಾಕ್ಟೀಸ್ ಮ್ಯಾಚ್ ನಡೀತಿದೆ. ಮೊದಲ ಪಂದ್ಯದಲ್ಲಿ ಮುಖಭಂಗ ಅನುಭವಿಸಿರುವ ಕಿವೀಸ್, 2ನೇ ಪಂದ್ಯದಲ್ಲಾದ್ರೂ ಗೆಲ್ಲುತ್ತಾ ಅನ್ನೋದು ಸದ್ಯಕ್ಕಿರುವ ಪ್ರಶ್ನೆ. ಈ ಮ್ಯಾಚ್ ಗೆದ್ರೆ ನ್ಯೂಜಿಲೆಂಡ್ ತಂಡ ಭಾರತಕ್ಕೆ ಫೈಟ್ ಕೊಡಲಿದೆ. ಈ ಪಂದ್ಯವನ್ನೂ ಸೋತ್ರೆ ಕಿವೀಸ್ ಕಥೆ ಮುಗಿಯಿತು. ವೈಟ್ವಾಶ್ ಆಗಿ ತವರಿಗೆ ವಾಪಾಸ್ ಹೋಗಲಿದೆ.
ಪೃಥ್ವಿ ಶಾ ಹೊಗಳಿದ ಬೋಲ್ಟ್
ಇನ್ನು ಮೊದಲ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದ 17 ವರ್ಷದ ಪೃಥ್ವಿ ಶಾ ಅವರನ್ನ ಕಿವೀಸ್ ಫಾಸ್ಟ್ ಬೌಲರ್ ಟ್ರೆಂಟ್ ಬೋಲ್ಟ್ ಹೊಗಳಿದ್ದಾರೆ. ಭವಿಷ್ಯದ ಟೀಂ ಇಂಡಿಯಾ ಆಟಗಾರ ಎಂದಿದ್ದಾರೆ. ಪೃಥ್ವಿ ಶಾ ಬ್ಯಾಟಿಂಗ್ ಕಂಟ್ರೋಲ್ ಮಾಡೋಕ ಆಗದವರು ವಿರಾಟ್ ಕೊಹ್ಲಿ ಸೇರಿದಂತೆ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಅನ್ನ ಕಂಟ್ರೋಲ್ ಮಾಡ್ತಾರಾ ಅನ್ನೋ ಪ್ರಶ್ನೆ ಎದ್ದಿದೆ.
ಇನ್ನು ಫಸ್ಟ್ ಪ್ರಾಕ್ಟೀಸ್ ಮ್ಯಾಚ್ನಲ್ಲಿ 5 ವಿಕೆಟ್ ಪಡೆದಿದ್ದ ಟ್ರೆಂಟ್ ಬೋಲ್ಟ್ ಅವರೇ ಈ ಸರಣಿಯಲ್ಲಿ ಟ್ರಂಪ್ಕಾರ್ಡ್. ಅವರು ಇಂದು ಸಹ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಒಟ್ನಲ್ಲಿ ಟೀಂ ಇಂಡಿಯಾ ವಿರುದ್ಧ ಯುದ್ಧ ಸಾರೋಕು ಮುನ್ನ ನ್ಯೂಜಿಲೆಂಡ್ಗೆ ಇವತ್ತು ಇನ್ನೊಂದು ಅಭ್ಯಾಸ ಪಂದ್ಯ. ಇದರಲ್ಲಿ ಪಾಸಾಗುತ್ತಾ ಅನ್ನೋದು ಇನ್ನು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.
