ಅಂಡರ್-19 ವಿಶ್ವಕಪ್: ಸೆಮೀಸ್'ಗೆ ಲಗ್ಗೆಯಿಟ್ಟ ಪೃಥ್ವಿ ಶಾ ಬಳಗ

sports | Friday, January 26th, 2018
Suvarna Web Desk
Highlights

ಇದೀಗ ಜನವರಿ 30ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಸೆಣಸಲಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಸಾಕಷ್ಟು ರೋಚಕತೆಯಿಂದ ಕೂಡಿರುವ ಸಾಧ್ಯತೆಯಿದ್ದು, ಮತ್ತೊಂದು ನೆರೆ ರಾಷ್ಟ್ರವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡುವ ವಿಶ್ವಾಸದಲ್ಲಿದೆ ಪೃಥ್ವಿ ಶಾ ಬಳಗ.

ಕ್ವೀನ್ಸ್‌ಟೌನ್(ಜ.26): ಪೃಥ್ವಿ ಶಾ ಬಳಗದ ಜಯದ ನಾಗಾಲೋಟ ಮುಂದುವರೆದಿದ್ದು, ಅಂಡರ್-19 ಕ್ರಿಕೆಟ್ ವಿಶ್ವಕಪ್‌'ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 131 ರನ್‌'ಗಳಿಂದ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪೃಥ್ವಿ ಶಾ ಬಳಗ ಆರಂಭಿಕ ಆಘಾತದ ಹೊರತಾಗಿಯೂ ಎರಡನೇ ವಿಕೆಟ್'ಗೆ ಉತ್ತಮ ಜತೆಯಾಟವಾಡಿತು. ಪೃಥ್ವಿ ಶಾ (40 ರನ್)ರನ್ನು ಕೂಡಿಕೊಂಡ ಶುಭ್‌'ಮನ್ ಗಿಲ್ (86 ರನ್) ತಂಡಕ್ಕೆ ಚೇತರಿಕೆ ನೀಡಿದರು 2ನೇ ವಿಕೆಟ್‌ಗೆ ಈ ಜೋಡಿ 86 ರನ್ ಕೂಡಿ ಹಾಕಿ ತಂಡಕ್ಕೆ ಆಸರೆಯಾಯಿತು. ಮಧ್ಯಮ ಕ್ರಮಾಂಕದಲ್ಲಿ ಅಭಿಷೇಕ್ ಶರ್ಮಾ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಆದರೆ ಕೆಳಕ್ರಮಾಂಕದಲ್ಲಿ ಬಾಲಂಗೋಚಿಗಳು ಬಾಂಗ್ಲಾ ದಾಳಿಗೆ ತತ್ತರಿಸಿದ ಭಾರತ 265 ರನ್‌'ಗಳಿಗೆ ಸರ್ವಪತನ ಕಂಡಿತು.

ಭಾರತ ನೀಡಿದ ಸವಾಲಿನ ಮೊತ್ತ ಬೆನ್ನಟ್ಟಿದ ಬಾಂಗ್ಲಾ ದಾಂಡಿಗರು ಆರಂಭದಲ್ಲಿ ಪ್ರತಿರೋಧ ತೋರಿದರಾದರೂ ಕಮ್ಲೇಶ್ ನಾಗರಕೋಟಿ ಹಾಗೂ ಶಿವಮ್‌'ಮಾವಿ ದಾಳಿಗೆ ತತ್ತರಿಸಿದರು. ಬಾಂಗ್ಲಾ ಪರ ಪಿನಾಕ್ ಘೋಷ್ 43 ರನ್ ಸಿಡಿಸಿದರು. ಆದರೆ ಉಳಿದ ಬ್ಯಾಟ್ಸ್'ಮನ್'ಗಳು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಕಮಲೇಶ್ ನಾಗರಕೋಟಿ 3 ವಿಕೆಟ್ ಕಬಳಿಸಿದರೆ ಶಿವಂ ಮಾವಿ 2 ವಿಕೆಟ್ ಪಡೆದು ಮಿಂಚಿದರು. ಅಂತಿಮವಾಗಿ ಬಾಂಗ್ಲಾದೇಶ 134  ರನ್‌ಗಳಿಗೆ ಸರ್ವಪತನ ಕಾಣುವುದರೊಂದಿಗೆ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿತು.

ಇದೀಗ ಜನವರಿ 30ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಸೆಣಸಲಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಸಾಕಷ್ಟು ರೋಚಕತೆಯಿಂದ ಕೂಡಿರುವ ಸಾಧ್ಯತೆಯಿದ್ದು, ಮತ್ತೊಂದು ನೆರೆ ರಾಷ್ಟ್ರವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡುವ ವಿಶ್ವಾಸದಲ್ಲಿದೆ ಪೃಥ್ವಿ ಶಾ ಬಳಗ.

 

ಸಂಕ್ಷಿಪ್ತ ಸ್ಕೋರ್:

ಭಾರತ 265/10

ಶುಭಮನ್ ಗಿಲ್ 86, ಅಭಿಷೇಕ್ 50, ಕ್ವಾಜಿ ಓನಿಕ್ 48/3

ಬಾಂಗ್ಲಾ: 134/10

ಪಿನಾಕ್ ಘೋಷ್ 43, ಕಮಲೇಶ್ 18/3

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk