ಬೆಂಗಳೂರು(ಸೆ.02): ಟೀಂ ಇಂಡಿಯಾ ಮುಖ್ಯ  ಕೋಚ್ ಆಗಿ ರವಿ ಶಾಸ್ತ್ರಿ ಪುನರ್ ಆಯ್ಕೆಯಲ್ಲಿ ನಾಯಕ ವಿರಾಟ್ ಕೊಹ್ಲಿ ಪಾತ್ರ ಪ್ರಮುಖವಾಗಿದೆ. ಬಹಿರಂಗವಾಗಿ ಶಾಸ್ತ್ರಿ ಕೋಚ್ ಆದರೆ ಉತ್ತಮ ಎಂದಿದ್ದ ಕೊಹ್ಲಿ, ಇತರ ಕೋಚ್‌ ಆಯ್ಕೆಗೆ ಕೊಹ್ಲಿ ಒಲವು ತೋರಿಲಿಲ್ಲ. ಇದೀಗ 2ನೇ ಬಾರಿಗೆ ಕೋಚ್ ಜವಾಬ್ದಾರಿ ವಹಿಸಿಕೊಂಡಿರುವ ಶಾಸ್ತ್ರಿ ಹಾಗೂ ಕೊಹ್ಲಿ ನಡುವೆ ಒಮ್ಮತ ಅಭಿಪ್ರಾಯ ವ್ಯಕ್ತವಾಗುತ್ತಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದು ಸ್ಟ್ರೆಂಥ್ ಹಾಗೂ ಕಂಡೀಷನ್ ಸ್ಟಾಫ್ ಆಯ್ಕೆ ವಿಚಾರದಲ್ಲೂ ಮತ್ತೆ ಕಾಣಿಸಿಕೊಂಡಿದೆ.

ಇದನ್ನೂ ಓದಿ: ಕೆರಿಬಿಯನ್ ಬೀಚ್‌ನಲ್ಲಿ ಶಾಸ್ತ್ರಿ ರಿಲ್ಯಾಕ್ಸ್; ಮತ್ತೆ ಟ್ರೋಲ್ ಮಾಡಿದ ಫ್ಯಾನ್ಸ್!

ತಂಡದ ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲಿ ಕೊಹ್ಲಿ ನಿರ್ಧಾರವೇ ಅಂತಿಮವಾಗುತ್ತಿದೆ. ಕೋಚ್ ಶಾಸ್ತ್ರಿ ಹೆಸರಿಗೆ ಮಾತ್ರ ಅನ್ನೋ ವರದಿಗಳು ಚರ್ಚೆಯಲ್ಲಿವೆ. ಆದರೆ ಟೀಂ ಇಂಡಿಯಾಗೆ ಸ್ಟ್ರೆಂಥ್ ಹಾಗೂ ಕಂಡೀಷನ್ ಕೋಚ್ ಆಯ್ಕೆ ವಿಚಾರದಲ್ಲಿ ಕೊಹ್ಲಿ ಹಾಗೂ ಶಾಸ್ತ್ರಿ ಅಭಿಪ್ರಾಯ ಬೇರೆ ಬೇರೆಯಾಗಿದೆ. ಆಯ್ಕೆ ಸಮಿತಿ ಸ್ಟಾಫ್ ಆಯ್ಕೆ ರೇಸ್‌ನಲ್ಲಿ ನಿಕ್ ವೆಬ್, ಲ್ಯುಕ್ ವುಡ್‌ಹೌಸ್ ಹಾಗೂ ರಜನಿಕಾಂತ್ ಶಿವಗ್ನಾನಂ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸಲಹಾ ಸಮಿತಿ ಮುಂದೆ ಹೊಸ ಬೇಡಿಕೆಯಿಟ್ಟ ರವಿಶಾಸ್ತ್ರಿ..!

ಈ ಮೂವರ ಪೈಕಿ ಯಾರು ಸ್ಟಾಫ್ ಆಗಬೇಕು ಅನ್ನೋ ಅಭಿಪ್ರಾಯ ತಿಳಿಸಲು ಕೊಹ್ಲಿ ಹಾಗೂ ಶಾಸ್ತ್ರಿಗೆ ಸೂಚಿಸಲಾಗಿತ್ತು.  ನಾಯಕ ವಿರಾಟ್ ಕೊಹ್ಲಿ ನಿಕ್ ವೆಬ್ಬರ್ ಸೂಚಿಸಿದರೆ, ಶಾಸ್ತ್ರಿ ರಜನಿಕಾಂತ್ ಶಿವಗ್ನಾನಂ ಆಯ್ಕೆಗೆ ಸೂಚಿಸಿದ್ದಾರೆ. ಇದು ಸ್ಟ್ರೆಂಥ್ ಹಾಗೂ ಕಂಡೀಷನ್ ಸ್ಟಾಫ್ ಆಯ್ಕೆ ಸಮಿತಿಯಲ್ಲಿ ಗೊಂದಲ ಮೂಡಿಸಿದೆ.