ಹೈದರಾಬಾದ್[ಡಿ.04]  2011ರ ವಿಶ್ವಕಪ್​ ಹಾಗೂ 2007ರ ಟಿ-20 ವಿಶ್ವಕಪ್​  ಫೈನಲ್ ಪಂದ್ಯದ ನಿಜವಾದ ಆಟಗಾರ  ಎರಡು ಬಾರಿಯ ಐಪಿಎಲ್​ ವಿನ್ನರ್​ ಗೌತಮ್​ ಗಂಭೀರ್​ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳುವ ತೀರ್ಮಾನಕ್ಕೆ ಬಂದಿದ್ದಾರೆ.

ಆಂಧ್ರ ಪ್ರದೇಶ ಹಾಗೂ ದೆಹಲಿ ನಡುವೆ ಡಿಸೆಂಬರ್​ 6ರಿಂದ ದೆಹಲಿಯ ಫಿರೋಜ್​ ಶಾ ಕೋಟ್ಲಾದಲ್ಲಿ ನಡೆಯಲಿರುವ ರಣಜಿ ಟ್ರೋಫಿ ಪಂದ್ಯವೇ ಅಂತಿಮ ಪಂದ್ಯ ಎಂಬ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.

ತಮ್ಮ ಫೇಸ್​ಬುಕ್ ಖಾತೆಯಲ್ಲಿ ಹನ್ನೊಂದು ನಿಮಿಷದ ವಿಡಿಯೋವನ್ನು ಪೋಸ್ಟ್ ಮಾಡಿ ಗಂಭೀರ್ ತಮ್ಮ 14 ವರ್ಷದ ಕ್ರಿಕೆಟ್ ಬ್ಯಾಟ್ ಕೆಳಗಿಟ್ಟಿದ್ದಾರೆ. ಎಡಗೈ ದಾಂಡಿಗ ಆರಂಭಿಕರಾಗಿ ವೀರೇಂದ್ರ ಸೆಹ್ವಾಗ್ ಅವರೊಂದಿಗೆ ಅನೇಕ ಇನಿಂಗ್ಸ್ ಕಟ್ಟಿದ್ದರು.

ಅಡಿಲೇಡ್ ಟೆಸ್ಟ್ ಗೆಲ್ಲಲು ಆಸಿಸ್ ಮಾಸ್ಟರ್ ಪ್ಲಾನ್..!

ಗಂಭೀರ್​ 58 ಟೆಸ್ಟ್, 147 ಏಕದಿನ ಹಾಗೂ 37 ಟಿ-20 ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಒಟ್ಟಾರೆ 10,324 ರನ್​ ಬಾರಿಸಿ ಹಲವಾರು ಪಂದ್ಯಗಳಲ್ಲಿ ತಂಡಕ್ಕೆ ಜಯ ತಂದಿತ್ತಿದ್ದಾರೆ. ಗಂಭೀರ್ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ 2012 ಹಾಗೂ 2014ರಲ್ಲಿ ಐಪಿಎಲ್‌ ಪ್ರಶಸ್ತಿಗೆ ಮುತ್ತಿಕ್ಕಿತ್ತು.

ಕಳೆದ ಎರಡು ವರ್ಷದಿಂದ ಹಿರಿಯ ಆಟಗಾರ ಕಡೆಗಣನೆಗೆ ಒಳಗಾಗಿದ್ದರು. ತಂಡಕ್ಕೆ ಮರಳಲು ಸಾಧ್ಯವಾಗದೆ ಇದ್ದದ್ದು ಗೌತಿ ವಿದಾಯಕ್ಕೆ ಕಾರಣವಾಯಿತು ಎನ್ನಬಹುದು. 
2007ರ ಟಿ-20 ವಿಶ್ವಕಪ್​​ನ ಫೈನಲ್​ ಪಂದ್ಯದಲ್ಲಿ ಪಾಕ್‌ವಿರುದ್ಧ 75 ರನ್ ಬಾರಿಸಿ ಮಹೇಂದ್ರ ಸಿಂಗ್ ಧೋನಿ ಟ್ರೋಫಿ ಎತ್ತಿ ಹಿಡಿಯಲು ಕಾರಣವಾಗಿದ್ದರು. ಶ್ರೀಲಂಕಾ ವಿರುದ್ಧ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 97 ರನ್​ ಸಿಡಿಸಿ ಧೋನಿ ಅವರೊಂದಿಗೆ ಭಾಗಿಯಾಗಿದ್ದರು.