ಚಹಾ ವಿರಾಮದ ವೇಳೆಗೆ ಟೀಂ ಇಂಡಿಯಾ 114/4

Team India Score 114 for 4 After Tea Break
Highlights

ಕೇವಲ 13 ರನ್'ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಪೂಜಾರ ಆಸರೆಯಾದರು. ಈ ಜೋಡಿ ಮೂರನೇ ವಿಕೆಟ್'ಗೆ 84 ರನ್'ಗಳ ಜತೆಯಾಟವಾಡಿತು. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್'ನ 16ನೇ ಅರ್ಧಶತಕ ಬಾರಿಸಿ ಎನ್'ಜಿಡಿಗೆ ವಿಕೆಟ್ ಒಪ್ಪಿಸಿದರು.

ಜೊಹಾನ್ಸ್'ಬರ್ಗ್(ಜ.24): ಆರಂಭಿಕ ಬ್ಯಾಟ್ಸ್'ಮನ್'ಗಳ ವೈಫಲ್ಯದ ಹೊರತಾಗಿಯೂ ನಾಯಕ ವಿರಾಟ್ ಕೊಹ್ಲಿ(54) ಅರ್ಧಶತಕ ಹಾಗೂ ಟೆಸ್ಟ್ ಪರಿಣಿತ ಚೇತೇಶ್ವರ ಪೂಜಾರ(27*ರನ್, 145 ಎಸೆತ) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಚಹಾ ವಿರಾಮದ ವೇಳೆಗೆ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 114 ರನ್ ಬಾರಿಸಿದೆ.

ಜೋಹಾನ್ಸ್'ಬರ್ಗ್'ನಲ್ಲಿ ಆರಂಭವಾದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾಗೆ ಆರಂಭಿಕ ಬ್ಯಾಟ್ಸ್'ಮನ್'ಗಳು ಮತ್ತೆ ನಿರಾಸೆ ಮೂಡಿಸಿದರು. ಕೆ.ಎಲ್ ರಾಹುಲ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರೆ, ವಿಜಯ್ ಆಟ 8 ರನ್'ಗಳಿಗೆ ಸೀಮಿತವಾಯಿತು.

ಕೊಹ್ಲಿ-ಪೂಜಾರ ಜುಗಲ್'ಬಂದಿ:

ಕೇವಲ 13 ರನ್'ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಪೂಜಾರ ಆಸರೆಯಾದರು. ಈ ಜೋಡಿ ಮೂರನೇ ವಿಕೆಟ್'ಗೆ 84 ರನ್'ಗಳ ಜತೆಯಾಟವಾಡಿತು. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್'ನ 16ನೇ ಅರ್ಧಶತಕ ಬಾರಿಸಿ ಎನ್'ಜಿಡಿಗೆ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಮಂದಗತಿಯ ಮೂಲಕ ಆಫ್ರಿಕಾ ಬೌಲರ್'ಗಳನ್ನು ಕಾಡಿದ ಪೂಜಾರ 54ನೇ ಎಸೆತದಲ್ಲಿ ರನ್ ಖಾತೆ ತೆರೆದರು. ಚಹಾ ವಿರಾಮದ ವೇಳೆಗೆ 145 ಎಸೆತಗಳನ್ನು ಎದುರಿಸಿರುವ ಪೂಜಾರ 4 ಬೌಂಡರಿಗಳ ನೆರವಿನಿಂದ 27 ರನ್ ಬಾರಿಸಿದ್ದಾರೆ.

ಕೈಕೊಟ್ಟ ರಹಾನೆ:

ರೋಹಿತ್ ಶರ್ಮಾ ಬದಲು ಸ್ಥಾನಗಿಟ್ಟಿಸಿಕೊಂಡಿರುವ ರಹಾನೆ ಕೇವಲ 9 ರನ್ ಬಾರಿಸಿ ಮಾರ್ಕೆಲ್'ಗೆ ವಿಕೆಟ್ ಒಪ್ಪಿಸಿ ನಿರಾಸೆ  ಮೂಡಿಸಿದರು.

ಇನ್ನು ಪಾರ್ಥಿವ್ ಪಟೇಲ್ ಖಾತೆ ತೆರೆದಿಲ್ಲ.

ಸಂಕ್ಷಿಪ್ತ ಸ್ಕೋರ್: 114/4

ಕೊಹ್ಲಿ: 54

ಎನ್'ಜಿಡಿ:7/1

(*ಚಹಾ ವಿರಾಮದ ಅಂತ್ಯಕ್ಕೆ)

loader