Asianet Suvarna News Asianet Suvarna News

INDvSA 1ನೇ ಟೆಸ್ಟ್; ಭಾರತ ಬಿಗಿ ಹಿಡಿತ, 3 ವಿಕೆಟ್ ಕಳೆದುಕೊಂಡ ಆಫ್ರಿಕಾ!

ಸೌತ್ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದ 2ನೇ ದಿನವೂ ಭಾರತ ಆರ್ಭಟಿಸಿದೆ. ದ್ವಿತೀಯ ದಿನ ಬ್ಯಾಟಿಂಗ್ ಬೌಲಿಂಗ್‌ನಲ್ಲಿ ಮಿಂಚಿದ ಟೀಂ ಇಂಡಿಯಾ ಆಂಗ್ಲರನ್ನು ಆಲೌಟ್ ಮಾಡಲು ತುದಿಗಾಲಲ್ಲಿ ನಿಂತಿದೆ.

Team India restrict south Africa by  39 runs on day 2 in vizag test
Author
Bengaluru, First Published Oct 3, 2019, 5:36 PM IST

ವಿಶಾಖಪಟ್ಟಣಂ(ಅ.03): ಸೌತ್ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಬಿಗಿ ಹಿಡಿತ ಸಾಧಿಸಿದೆ. 2ನೇ ದಿನದಾಟದಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಬಳಿಕ ಬೌಲಿಂಗ್‌ನಲ್ಲೂ ಟೀಂ ಇಂಡಿಯಾ ಕಮಾಲ್ ಮಾಡಿದೆ. ದಿನದಾಟದ ಅಂತ್ಯದಲ್ಲಿ ಸೌತ್ ಆಫ್ರಿಕಾ ತಂಡದ 3 ವಿಕೆಟ್ ಕಳೆದುಕೊಂಡು 39 ರನ್ ಸಿಡಿಸಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 463 ರನ್ ಹಿನ್ನಡೆಯಲ್ಲಿದೆ.

ಇದನ್ನೂ ಓದಿ: ವೈಜಾಗ್ ಟೆಸ್ಟ್: ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಟೀಂ ಇಂಡಿಯಾ

ಮೊದಲ ದಿನದಲ್ಲಿ ಅಬ್ಬರಿಸಿದ ಟೀಂ ಇಂಡಿಯಾಗೆ ಮಳೆರಾಯ ಕಾಟಕೊಟ್ಟಿದ್ದ. ಆದರೆ 2ನೇ ದಿನದಾಟದಲ್ಲಿ ಮಳೆ ಯಾವುದೇ ರೀತಿ ಅಡ್ಡಿಯಾಗಲಿಲ್ಲ. ಹೀಗಾಗಿ ಭಾರತ ಅಬ್ಬರದ ಬ್ಯಾಟಿಂಗ್ ಮುಂದುವರಿಸಿತು. ರೋಹಿತ್ ಶರ್ಮಾ ಹಾಗೂ ಮಯಾಂಕ್ ಅಗರ್ವಾಲ್ ಜೊತೆಯಾಟಕ್ಕೆ ಸೌತ್ ಆಫ್ರಿಕಾ ಹೈರಾಣಾಯಿತು. ರೋಹಿತ್ 174 ರನ್ ಸಿಡಿಸಿ ಔಟಾದರು.

ಕನ್ನಡಿಗ ಮಯಾಂಕ್ ಅಗರ್ವಾಲ್ ಅತ್ಯುತ್ತಮ ಪ್ರದರ್ಶನದಿಂದ ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಮಯಾಂಕ್ ಚೊಚ್ಚಲ ದ್ವಿಶತಕ ಸಿಡಿಸಿ ದಾಖಲೆ ಬರೆದರು. 5ನೇ ಟೆಸ್ಟ್ ಪಂದ್ಯದಲ್ಲಿ ಡಬಲ್ ಸೆಂಚುರಿ ಸಿಡಿಸಿದ ಮಯಾಂಕ್ ದಿಗ್ಗಜರ ಸಾಲಿಗೆ ಸೇರಿಕೊಂಡರು. 

ಇದನ್ನೂ ಓದಿ: ವೈಜಾಗ್ ಟೆಸ್ಟ್: ದ್ವಿಶತಕ ಚಚ್ಚಿದ ಮಯಾಂಕ್ ಅಗರ್‌ವಾಲ್

ಮಯಾಂಕ್ 215ರನ್ ಸಿಡಿಸಿ ಔಟಾದರು. ಚೇತೇಶ್ವರ್ ಪೂಜಾರ, ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ವಿಫಲರಾದರು. ಹನುಮಾ ವಿಹಾರಿ 10 ಹಾಗೂ ವೃದ್ದಿಮಾನ್ ಸಾಹ 21 ರನ್ ಸಿಡಿಸಿದರು. ರವೀಂದ್ರ ಜಡೇಜಾ ಅಜೇಯ 30 ರನ್ ಸಿಡಿಸಿದರು. 7 ವಿಕೆಟ್ ನಷ್ಟಕ್ಕೆ 502 ರನ್ ಸಿಡಿಸಿದ ಭಾರತ ಡಿಕ್ಲೇರ್ ಮಾಡಿಕೊಂಡಿತು. 

ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾಗೆ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಶಾಕ್ ನೀಡಿದರು. ಆ್ಯಡಿನ್ ಮಕ್ರಂ ಹಾಗೂ ಥೆಯುನಿಸ್ ಡೆ ಬ್ರುಯನ್ ವಿಕೆಟ್ ಕಬಳಿಸಿದ ಅಶ್ವಿನ್ ಭಾರತಕ್ಕೆ ಭರ್ಜರಿ ಮುನ್ನಡೆ ತಂದುಕೊಟ್ಟರು. ಇನ್ನು ಡೇನ್ ಪೀಡಿಟ್ ಡಕೌಟ್ ಆದರು. ಈ ಮೂಲಕ ಸೌತ್ ಆಫ್ರಿಕಾ 3 ವಿಕೆಟ್ ನಷ್ಟಕ್ಕೆ 39 ರನ್ ಸಿಡಿಸಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 463 ರನ್ ಹಿನ್ನಡೆಯಲ್ಲಿದೆ.

Follow Us:
Download App:
  • android
  • ios