ನೆಟ್ಸ್‌ನಲ್ಲಿ ಈ ಮೂವರು ಸ್ಥಳೀಯ ವಾತಾವರಣಕ್ಕೆ ಸರಿಹೊಂದುವ ರೀತಿಯಲ್ಲಿ ಅಭ್ಯಾಸ ನಡೆಸುತ್ತಿರುವುದಾಗಿ ತಂಡದ ಮೂಲಗಳು ತಿಳಿಸಿದ್ದು, ಮೊದಲ ಟೆಸ್ಟ್‌ನಲ್ಲಿ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸುವ ಬಗ್ಗೆ ತಂಡ ನಿರ್ಧರಿಸುತ್ತಿದೆ ಎನ್ನಲಾಗಿದೆ. 

ಲಂಡನ್[ಜು.28]: ಎಸೆಕ್ಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ತಮ್ಮ ಸ್ಪಿನ್ನರ್‌ಗಳನ್ನು ಹೆಚ್ಚಾಗಿ ಬಳಸಿಕೊಳ್ಳಲಿಲ್ಲ. ಎಸೆಕ್ಸ್‌ನ 94 ಓವರ್‌ಗಳ ಇನ್ನಿಂಗ್ಸ್‌ನಲ್ಲಿ ಭಾರತದ ತ್ರಿವಳಿ ಸ್ಪಿನ್ನರ್‌ಗಳಾದ ಆರ್.ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ ಒಟ್ಟು ಬೌಲ್ ಮಾಡಿದ್ದು ಕೇವಲ 11 ಓವರ್‌ಗಳು ಮಾತ್ರ. 

ಗುರುವಾರ ಕೈಬೆರಳಿಗೆ ಗಾಯ ಮಾಡಿಕೊಂಡಿದ್ದ ಅಶ್ವಿನ್, ಶುಕ್ರವಾರ ತಮ್ಮ ಫಿಟ್‌ನೆಸ್ ಪರೀಕ್ಷಿಸುವ ದೃಷ್ಟಿಯಿಂದ 5 ಓವರ್ ಬೌಲ್ ಮಾಡಿದರು. ಕುಲ್ದೀಪ್ 4 ಹಾಗೂ ಜಡೇಜಾ 2 ಓವರ್'ಗಳನ್ನಷ್ಟೇ ಎಸೆದರು. ಸ್ಪಿನ್ನರ್‌ಗಳೇ ಭಾರತದ ಟ್ರಂಪ್‌ಕಾರ್ಡ್‌ಗಳೆಂದು ನಂಬಿರುವ ವಿರಾಟ್, ತಮ್ಮ ತಂತ್ರಗಳನ್ನು ಇಂಗ್ಲೆಂಡ್‌ಗೆ ಬಿಟ್ಟುಕೊಡಲಿಲ್ಲ. 

ನೆಟ್ಸ್‌ನಲ್ಲಿ ಈ ಮೂವರು ಸ್ಥಳೀಯ ವಾತಾವರಣಕ್ಕೆ ಸರಿಹೊಂದುವ ರೀತಿಯಲ್ಲಿ ಅಭ್ಯಾಸ ನಡೆಸುತ್ತಿರುವುದಾಗಿ ತಂಡದ ಮೂಲಗಳು ತಿಳಿಸಿದ್ದು, ಮೊದಲ ಟೆಸ್ಟ್‌ನಲ್ಲಿ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸುವ ಬಗ್ಗೆ ತಂಡ ನಿರ್ಧರಿಸುತ್ತಿದೆ ಎನ್ನಲಾಗಿದೆ. ಅಶ್ವಿನ್, ಈ ವರ್ಷ ಇಂಗ್ಲೆಂಡ್ ಕೌಂಟಿಯಲ್ಲಿ ಆಡಿದ ಅನುಭವ ಹೊಂದಿರುವ ಕಾರಣ ಅವರೇ ಮೊದಲ ಆಯ್ಕೆಯಾಗಲಿದ್ದಾರೆ. ಸೀಮಿತ ಓವರ್ ಸರಣಿಯಲ್ಲಿ ಮಿಂಚಿದ ಕುಲ್ದೀಪ್ 2ನೇ ಸ್ಪಿನ್ನರ್ ಆಗಿ ಆಡುವ ಸಾಧ್ಯತೆ ಇದೆ.