ಬಿಗ್ ಬಾಸ್ ರಿಯಾಲಿಟಿ ಶೋಗೆ ಟೀಂ ಇಂಡಿಯಾ ಕ್ರಿಕೆಟಿಗ ಎಂಟ್ರಿ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 5, Sep 2018, 9:14 PM IST
Team India player take part in Hindi Big boss
Highlights

ಟೀಂ ಇಂಡಿಯಾ ಕ್ರಿಕೆಟಿಗರು ಡ್ಯಾನ್ಸ್, ಹಾಡು ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಕ್ರಿಕೆಟಿಗ ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಎಂಟ್ರಿಕೊಡುತ್ತಿದ್ದಾರೆ. 

ಮಂಬೈ(ಸೆ.05): ಖ್ಯಾತ ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್ ತೆರೆಗೆ ಅಪ್ಪಳಿಸಲು ಇನ್ನು ಕೆಲದಿನಗಳು ಮಾತ್ರ. 12ನೇ ಆವೃತ್ತಿ ಹಿಂದಿ ಬಿಗ್ ಬಾಸ್ ಕಾರ್ಯಕ್ರಮ ಸೆಪ್ಟೆಂಬರ್ 16 ರಿಂದ ಆರಂಭಗೊಳ್ಳಲಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವು ಈ ರಿಯಾಲಿಟಿ ಶೋಗೆ ಈ ಬಾರಿ ಹಲವು ಸೆಲೆಬ್ರೆಟಿಗಳು ಎಂಟ್ರಿ ಕೊಡಲಿದ್ದಾರೆ.

12ನೇ ಆವೃತ್ತಿ ಬಿಗ್ ಬಾಸ್ ರಿಯಾಲಿಟಿ ಶೋಗೆ ಟೀಂ ಇಂಡಿಯಾ ಕ್ರಿಕೆಟಿಗ, ವೇಗಿ ಎಸ್ ಶ್ರೀಶಾಂತ್ ಎಂಟ್ರಿ ಕೊಡಲಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ. 2005ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಶ್ರೀಶಾಂತ್, 2013ರ ಐಪಿಎಲ್ ಸ್ಫಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಜೈಲು ಸೇರಿದ್ದರು.

ಶ್ರೀಶಾಂತ್‌ಗೆ ಕೋರ್ಟ್ ಕ್ಲೀನ್ ಚಿಟ್ ನೀಡಿದ್ದರೂ, ಬಿಸಿಸಿಐ ಅಜೀವ ನಿಷೇಧ ಮಾತ್ರ ತೆರುವುಗೊಳಿಸಿಲ್ಲ. ಜೈಲಿನಿಂದ ಬಿಡುಗಡೆಯಾದ ಬಳಿಕ ಶ್ರೀಶಾಂತ್, ಸಿನಿಮಾ, ಡ್ಯಾನ್ಸ್, ರಾಜಕೀಯ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರದಲ್ಲೂ ಅಗ್ನಿಪರೀಕ್ಷೆ ನಡೆಸಿದ್ದಾರೆ.

ಇದೀಗ ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋಗೆ ಶ್ರೀಶಾಂತ್ ಕರೆ ತರಲು ಎಲ್ಲಾ ಸಿದ್ದತೆ ನಡೆದಿದೆ.  2017ರಲ್ಲಿ ಶ್ರೀಶಾಂತ್ ಜರೀನ್ ಖಾನ್ ಜೊತೆಗೆ  ಅಕ್ಸರ್ 2 ಚಿತ್ರದ ಮೂಲಕ ಬಾಲಿವುಡ್‌ಗೂ ಪಾದಾರ್ಪಣೆ ಮಾಡಿದ್ದರು. ಕೆಲ ದಿನಗಳಲ್ಲೇ ಆರಂಭಗೊಳ್ಳಲಿರುವ ಬಿಗ್ ಬಾಸ್ ರಿಯಾಲಿಟಿ ಶೋಗಾಗಿ 21 ಸ್ಪರ್ಧಿಗಳನ್ನ ಆಯ್ಕೆ ಮಾಡಲಾಗಿದೆ. ಇದರಲ್ಲಿ ಶ್ರೀಶಾಂತ್ ಕೂಡ ಸೇರಿದ್ದಾರೆ.
 

loader