ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು ಈಗಾಗಲೇ ತಲಾ ಒಂದೊಂದು ಪಂದ್ಯಗಳನ್ನು ಗೆದ್ದುಕೊಂಡಿವೆ. ಇದೀಗ ಅಂತಿಮ ಪಂದ್ಯವನ್ನು ಗೆದ್ದವರು ಸರಣಿ ಎತ್ತಿಹಿಡಿಯಲಿದ್ದಾರೆ.
ವೈಜಾಗ್(ಡಿ.17): ಭಾರತ-ಶ್ರೀಲಂಕಾ ನಡುವಿನ ಫೈನಲ್ ಫೈಟ್'ನಲ್ಲಿ ಟಾಸ್ ಗೆದ್ದ ಹಂಗಾಮಿ ನಾಯಕ ರೋಹಿತ್ ಶರ್ಮಾ ಕ್ಷೇತ್ರ ರಕ್ಷಣೆ ಆಯ್ದುಕೊಂಡಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು ಈಗಾಗಲೇ ತಲಾ ಒಂದೊಂದು ಪಂದ್ಯಗಳನ್ನು ಗೆದ್ದುಕೊಂಡಿವೆ. ಇದೀಗ ಅಂತಿಮ ಪಂದ್ಯವನ್ನು ಗೆದ್ದವರು ಸರಣಿ ಎತ್ತಿಹಿಡಿಯಲಿದ್ದಾರೆ.
ಇನ್ನು ಉಭಯ ತಂಡಗಳಲ್ಲಿ ಒಂದೊಂದು ಬದಲಾವಣೆ ಮಾಡಲಾಗಿದ್ದ, ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ವಾಷಿಂಗ್ಟನ್ ಸುಂದರ್ ಬದಲಿಗೆ ಕುಲ್ದೀಪ್ ಯಾದವ್ ಸ್ಥಾನ ಪಡೆದಿದ್ದಾರೆ. ಶ್ರೀಲಂಕಾ ಲಹೀರು ತಿರುಮನ್ನೆ ಬದಲಿಗೆ ಸದೀರ ಸಮರವಿಕ್ರಮ ಸ್ಥಾನ ಪಡೆದಿದ್ದಾರೆ.
ತಂಡಗಳು ಹೀಗಿವೆ:
ಭಾರತ: ರೋಹಿತ್, ಧವನ್, ಅಯ್ಯರ್, ಧೋನಿ, ಪಾಂಡ್ಯ, ಪಾಂಡೆ, ಕಾರ್ತಿಕ್, ಭುವನೇಶ್ವರ್ ಕುಮಾರ್, ಬುಮ್ರಾ, ಕುಲ್ದೀಪ್, ಚಾಹಲ್.
ಶ್ರೀಲಂಕಾ: ಗುಣತಿಲಕ, ತರಂಗಾ, ಸಮರವಿಕ್ರಮ, ಮ್ಯಾಥ್ಯೂಸ್, ಡಿಕ್'ವೆಲ್ಲಾ, ಗುಣರತ್ನೆ, ಪೆರೇರಾ, ಪತಿರಣ, ಧನಂಜಯ, ಲಕ್ಮಲ್, ಪ್ರದೀಪ್.