ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ.ಇದೀಗ ಇದೇ ಅಭಿಮಾನಿಗಳು ಕೊಹ್ಲಿಗಾಗಿ ಹೊಸ ಹಾಡು ರಚಿಸಿದ್ದಾರೆ. ಹೇಗಿದೆ ಈ ಹಾಡು? ಇಲ್ಲಿದೆ.

ಲಂಡನ್(ಜು.22): ಟೀಂ ಇಂಡಿಯಾಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ಪ್ರತಿ ಪಂದ್ಯದಲ್ಲಿ ಈ ಅಭಿಮಾನಿಗಳು ತಂಡವನ್ನ ಬೆಂಬಲಿಸುತ್ತಾರೆ. ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗಾಗಿ ಭಾರತ ಆರ್ಮಿ ಫ್ಯಾನ್ಸ್ ಹೊಸ ಹಾಡು ರಚಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ವೇಳೆ ಭಾರತ್ ಆರ್ಮಿ ಫ್ಯಾನ್ಸ್, ಕೊಹ್ಲಿ ಹಾಡಿನ ಸ್ಯಾಂಪಲ್ ಹಾಡಿದ್ದರು. ಇದೀಗ ಮುಂಬರುವ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಸಂಪೂರ್ಣ ಹಾಡನ್ನ ಕ್ರೀಡಾಂಗಣದಲ್ಲಿ ಹಾಡಲು ಅಭಿಮಾನಿಗಳು ಸಜ್ಜಾಗಿದ್ದಾರೆ.

View post on Instagram

ಭಾರತ್ ಆರ್ಮಿ ಅಭಿಮಾನಿ ಬಳಕ ಈ ರೀತಿ ಹಾಡು ರಚಿಸುತ್ತಿರೋದು ಇದೇ ಮೊದಲಲ್ಲ. ಈ ಹಿಂದೆ ಹಲವು ಬಾರಿ ಟೀಂ ಇಂಡಿಯಾ ಹಾಗೂ ಕ್ರಿಕೆಟಿಗರ ಕುರಿತು ಹಾಡು ರಚಿಸಿದ್ದಾರೆ. ಇದೀಗ ಕೊಹ್ಲಿಗಾಗಿ ನೂತನ ಹಾಡು ರಚಿಸಿದ್ದಾರೆ.