ಮುಂಬೈ(ಆ.29): ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಕೋಚ್ ಅವಶ್ಯಕತೆ ಇಲ್ಲ. ಕೇವಲ ಮ್ಯಾನೇಜರ್ ಸಾಕು ಎಂದು ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ ಹೇಳಿದ್ದಾರೆ. ಈ ಮೂಲಕ ದಿಲೀಪ್ ಹೊಸ ಚರ್ಚೆ ಶುರುಮಾಡಿದ್ದಾರೆ. 

ಟೀಂ ಇಂಡಿಯಾಗೆ ಕೋಚ್ ಅವಶ್ಯಕತೆ ಇಲ್ಲ. ಸದ್ಯ ಕೋಚ್ ಆಗಿರುವ ರವಿ ಶಾಸ್ತ್ರಿ ಕೂಡ ಕ್ರಿಕೆಟಿಗ. ಹೀಗಾಗಿ ಶಾಸ್ತ್ರಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಬಹುದು. ಈ ಹಿಂದೆ ಡಾನ್ ಬ್ರಾಡ್ಮನ್ ನೇತೃತ್ವದ ಆಸ್ಟ್ರೇಲಿಯಾ ತಂಡ, ಸತತ 2 ಬಾರಿ ವಿಶ್ವಕಪ್ ಗೆದ್ದ ವೆಸ್ಟ್ಇಂಡೀಸ್ ತಂಡ ಹಾಗೂ ಆರಂಭಿಕ ಹಂತದಲ್ಲಿ ಭಾರತ ತಂಡಕ್ಕೂ ಕೋಚ್ ಇರಲಿಲ್ಲ ಎಂದು ದಿಲೀಪ್ ಹೇಳಿದ್ದಾರೆ.

ಸದ್ಯ ಹಲವರು ಕ್ರಿಕೆಟ್ ಮ್ಯಾನೇಜ್ಮೆಂಟ್ ಸೇರಿಕೊಂಡ ಕ್ರೆಕೆಟ್ ಆಳುತ್ತಿದ್ದಾರೆ. ಕ್ರಿಕೆಟ್ ಈಗ ಕರ್ಮಶಿಯಲ್ ಆಗಿದೆ. ಇಲ್ಲಿ ಕ್ರೀಡೆಯೇ ಇಲ್ಲವಾಗಿದೆ ಎಂದು ದಿಲೀಪ್ ಹೇಳಿದ್ದಾರೆ. ದಿಲೀಪ್ ಭಾರತದ ಪರ 33 ಟೆಸ್ಟ್ ಪಂದ್ಯದಲ್ಲಿ 114 ವಿಕೆಟ್ ಕಬಳಿಸಿದ್ದಾರೆ. ಇಷ್ಟೇ ಅಲ್ಲ ಟೀಂ ಇಂಡಿಯಾ ಕಂಡ ಯಶಸ್ವಿ ಸ್ಪಿನ್ನರ್ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.