ಲಂಡನ್(ಜು.19): ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಾನು ರೂಪಿಸಿದ ಜಾಗತಿಕ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಜಿಂಬಾಬ್ವೆ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದಲೇ ಅಮಾನತು ಮಾಡಿದೆ. 

ಆಸ್ಪ್ರೇಲಿಯಾ ಸಂಗೀತ ಶೋನಲ್ಲಿ ಹೆನ್ರಿ ಒಲೋಂಗ!

ಈ ತಕ್ಷಣದಿಂದಲೇ ಇದು ಜಾರಿಗೆ ಬರಲಿದೆ ಎಂದು ಐಸಿಸಿ ಗುರುವಾರ ತಿಳಿಸಿದೆ. ಇದರಿಂದಾಗಿ ಜಿಂಬಾಬ್ವೆ ಐಸಿಸಿ ಮಾನ್ಯತೆಯ ಯಾವುದೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದೆ.

ಮತ್ತೆ ಭುಗಿಲೆದ್ದ ಫಿಕ್ಸಿಂಗ್ - ಮಂಡಳಿ ಅಧ್ಯಕ್ಷನಿಗೆ 10 ವರ್ಷ ನಿಷೇಧ ಶಿಕ್ಷೆ!

ಐಸಿಸಿಯ ಈ ನಿರ್ಧಾರಕ್ಕೆ ಜಿಂಬಾಬ್ವೆಯ ಕ್ರಿಕೆಟಿಗರಾದ ಸಿಕಂದರ್ ರಾಜಾ, ಬ್ರೆಂಡನ್ ಟೇಲರ್ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಟ್ವಿಟರ್ ಮೂಲಕವೇ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್ ಬೈ ಹೇಳಿದ್ದಾರೆ.