ವೈಜಾಗ್[ಅ.03]: ಕನ್ನಡಿಗ ಮಯಾಂಕ್ ಅಗರ್‌ವಾಲ್ ನಿರೀಕ್ಷೆಯಂತೆಯೇ ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ್ದಾರೆ. ಇದರೊಂದಿಗೆ 4 ಟೆಸ್ಟ್ ಪಂದ್ಯಗಳ ಬಳಿಕ ಕೊನೆಗೂ ಮಯಾಂಕ್ ಮೂರಂಕಿ ಮೊತ್ತ ದಾಖಲಿಸುವಲ್ಲಿ ಸಫಲರಾಗಿದ್ದಾರೆ.

ಮೊದಲ ದಿನದಾಟದಲ್ಲಿ 84 ರನ್ ಬಾರಿಸಿದ್ದ ಮಯಾಂಕ್ ಅಗರ್‌ವಾಲ್ ಎರಡನೇ ದಿನದಾಟದ ಆರಂಭದಲ್ಲೇ ಕೇಶವ್ ಮಹರಾಜ್ ಒಂದು ರನ್ ಗಳಿಸುತ್ತಿದ್ದಂತೆ ಶತಕ ಸಿಡಿಸಿ ಸಂಭ್ರಮಿಸಿದರು.  204 ಎಸೆತಗಳಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದರು. 

ರೋಹಿತ್ ಒಂದು ಶತಕ; ಹಲವಾರು ದಾಖಲೆ ನಿರ್ಮಾಣ..!

ಇದುವರೆಗೂ ವಿದೇಶದಲ್ಲೇ 4 ಟೆಸ್ಟ್ ಪಂದ್ಯವನ್ನಾಡಿದ್ದ ಮಯಾಂಕ್ ಅಗರ್‌ವಾಲ್ಗಿದು ಮೊದಲ ತವರಿನ ಟೆಸ್ಟ್ ಪಂದ್ಯವಾಗಿದೆ. ತವರಿನಲ್ಲಾಡುತ್ತಿರುವ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಪರ ಟೆಸ್ಟ್ ಶತಕ ಸಿಡಿಸುವ ಮೂಲಕ ಸ್ಮರಣೀಯವಾಗಿಸಿಕೊಳ್ಳುವಲ್ಲಿ ಮಯಾಂಕ್ ಯಶಸ್ವಿಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೆಲ್ಬರ್ನ್ ಟೆಸ್ಟ್’ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮಯಾಂಕ್ ಚೊಚ್ಚಲ ಪಂದ್ಯದಲ್ಲೇ[76] ಅರ್ಧಶತಕ ಸಿಡಿಸಿದ್ದರು. ಇನ್ನು ಸಿಡ್ನಿ ಟೆಸ್ಟ್ ನಲ್ಲೂ [77] ರನ್ ಬಾರಿಸಿದ್ದರಾದರೂ ಶತಕ ಬಾರಿಸಲು ವಿಫಲರಾಗಿದ್ದರು.  

ಮಯಾಂಕ್ ಸಂದರ್ಶನ: ಮಯಾಂಕ್ ಅಗರ್‌ವಾಲ್ ಜತೆ 10 ಮಾತು ನೂರು ದನಿ..!.

ಇದೀಗ 75.1 ಓವರ್ ಗಳಲ್ಲಿ ಟೀಂ ಇಂಡಿಯಾ 265 ರನ್ ಬಾರಿಸಿದ್ದು, ರೋಹಿತ್ ಶರ್ಮಾ 150 ಹಾಗೂ ಮಯಾಂಕ್ ಅಗರ್‌ವಾಲ್ 112 ರನ್ ಬಾರಿಸಿದ್ದಾರೆ.

ದಾಖಲೆಗಳು:

* ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಬಾರಿಸಿದ 86ನೇ ಭಾರತೀಯ ಕ್ರಿಕೆಟಿಗ ಮಯಾಂಕ್

* 33 ನೇ ಭಾರತೀಯ ಆರಂಭಿಕ ಬ್ಯಾಟ್ಸ್’ಮನ್ ಬಾರಿಸಿದ ಶತಕ

* ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಮಯಾಂಕ್ ಬಾರಿಸಿದ 9ನೇ ಟೆಸ್ಟ್ ಶತಕ