ಇಸ್ರೋ ವಿಜ್ಞಾನಿಗಳ ಚಂದ್ರಯಾನ್ 2 ಯಶಸ್ವಿ ಉಡಾವಣೆಯನ್ನು ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ಜು.23]: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ISRO)ದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ್ 2 ಉಡಾವಣೆ ಯಶಸ್ವಿಯಾಗಿದೆ. ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಇದೇ ಸಂದರ್ಭದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್ ಪಾಕಿಸ್ತಾನವನ್ನು ಪರೋಕ್ಷವಾಗಿ ಕಾಲೆಳೆದ ಟ್ವೀಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಸ್ರೋ ಇತಿಹಾಸ: ಚಂದ್ರನೂರಿಗೆ ಹೊರಟ ಭಾರತದ 'ಬಾಹುಬಲಿ'!
ಕೆಲವು ದೇಶಗಳು ತಮ್ಮ ರಾಷ್ಟ್ರ ಧ್ವಜದಲ್ಲಿ ಚಂದ್ರನನ್ನು ಹೊಂದಿವೆ, ಮತ್ತೆ ಕೆಲವು ದೇಶಗಳು ಚಂದ್ರನ ಮೇಲೆ ತಮ್ಮ ದೇಶದ ಧ್ವಜವನ್ನು ನೆಟ್ಟಿವೆ ಎಂದು ಟ್ವೀಟ್ ಮಾಡಿದ್ದಾರೆ.
ಭಾರತ, ಅಮೆರಿಕ, ಚೀನಾ, ರಷ್ಯಾ ದೇಶಗಳು ಚಂದ್ರಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಇನ್ನು ಪಾಕಿಸ್ತಾನ, ಅಲ್ಜೇರಿಯಾ, ಟರ್ಕಿ, ಮಾಲ್ಡೀವ್ಸ್, ಮೌರಿಟೇನಿಯಾ, ತ್ಯುನೇಶಿಯಾ, ಲಿಬಿಯಾ, ಮಲೇಷಿಯಾ ಮತ್ತು ಅಜೆರ್ಬಿನ್ ದೇಶಗಳು ತಮ್ಮ ರಾಷ್ಟ್ರ ಧ್ವಜದಲ್ಲಿ ಚಂದ್ರನ ಗುರುತು ಹೊಂದಿದ್ದಾವೆಯೇ ಹೊರತು ಚಂದ್ರಯಾನ ಮಾಡಿಲ್ಲ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
ಭಜ್ಜಿ ಟ್ವೀಟ್’ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ ವಿರೋಧಗಳು ವ್ಯಕ್ತವಾಗಿವೆ.
