ನವದೆಹಲಿ(ಅ.27): ಟೀಮ್​ ಇಂಡಿಯಾ ಚೇಸಿಂಗ್​ನಲ್ಲಿ ವಿಫಲವಾಗುತ್ತಿದೆ. ವಿರಾಟ್​ ಕೊಹ್ಲಿ ಪ್ರದರ್ಶನದ ಮೇಲೆಯೇ ಭಾರತ ತಂಡದ ಹಣೆಬರಹ ನಿರ್ಧಾರವಾಗುತ್ತಿದೆ. ಕೊಹ್ಲಿ ಆಡಿದ 2 ಪಂದ್ಯಗಳಲ್ಲಿ ಭಾರತ ಜಯಸಾಧಿಸಿದೆ. ಅವರಾಡದ ಎರಡು ಪಂದ್ಯಗಳಲ್ಲಿ ಭಾರತ ಕೈಯಲಲ್ಲಿದ್ದ ಪಂದ್ಯವನ್ನು ಸೋತಿದೆ.

ರೋಹಿತ್ ಶರ್ಮಾ ಸತತ ವೈಫಲ್ಯ: ಟೀಂ ಇಂಡಿಯಾದ ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಕಳೆದ 4 ಪಂದ್ಯಗಳಿಂದ ಸತತ ವೈಫಲ್ಯ ಅನುಭವಿಸಿದ್ದಾರೆ. ಉತ್ತಮ ಆರಂಭ ಒದಗಿಸಬೇಕಿದ್ದ ರೋಹಿತ್​ ಈ ಸರಣಿ ಪೂರ್ತಿ ಫ್ಲಾಪ್​ ಆಗಿದ್ದಾರೆ. 4 ಪಂದ್ಯಗಳಿಂದ ಅವರು ಕೇವಲ 53 ರನ್​ಗಳಿಸಿದ್ದು, ಭಾರತಕ್ಕೆ ಸಿಗಬೇಕಾದ ಆರಂಭ ದೊರಕಿಸಿಕೊಡುವಲ್ಲಿ  ಎಡವಿದ್ದಾರೆ.

ಹಾರ್ದಿಕ್​-ಮನೀಶ್​ ಫ್ಲಾಪ್:​ ಭಾರತ ತಂಡದಲ್ಲಿ ಹೆಚ್ಚು ಭರವಸೆ ಮೂಡಿಸಿರುವ ಆಟಗಾರರಾದ ಹಾರ್ದಿಕ್​ ಪಾಂಡ್ಯ ಮತ್ತು ಮನೀಶ್​ ಪಾಂಡೆ ಕೂಡ ತಮ್ಮ ಸಾಮರ್ಥ್ಯಕ್ಕೆ ತಕ್ಕಂತ ಪ್ರದರ್ಶನ ನೀಡುವಲ್ಲಿ  ವಿಫಲವಾಗಿದ್ದಾರೆ. ಮನೀಶ್​ 4 ಪಂದ್ಯಗಳಿಂದ 76 ರನ್​ಗಳಿಸಿದ್ರೆ, ಹಾರ್ದಿಕ್​ 4 ಪಂದ್ಯಗಳಿಂದ 45 ರನ್​ ಬಾರಿಸಿದ್ದಾರೆ ಅಷ್ಟೆ.

ಮಿಂಚದ ಜಾಧವ್​​-ರಹಾನೆ: ಇನ್ನೂ ಆರಂಭಿಕ ಅಜಿಂಕ್ಯಾ ರಹಾನೆ ಕೂಡ ತಮ್ಮ ಘನತೆಗೆ ತಕ್ಕಂತೆ ಆಡುವಲ್ಲಿ ವಿಫಲವಾಗಿದ್ದಾರೆ. 4 ಪಂದ್ಯಗಳಲ್ಲಿ ಏಕೈಕ ಅರ್ಧಶತಕ ದಾಖಲಿಸಿರುವ ರಹಾನೆ 123 ರನ್​ಗಳಿಸಿದ್ದಾರೆ. ಕೇದರ್​ ಜಾಧವ್​ 4 ಪಂದ್ಯಗಳಿಂದ 51 ರನ್​ಗಳಿಸಿದ್ದು, ಭಾರತಕ್ಕೆ ಸೂಕ್ತ ಸಮಯದಲ್ಲಿ  ಆಸರೆಯಾಗುವಲ್ಲಿ  ವಿಫಲವಾಗಿದ್ದಾರೆ.

ಬದಲಾದ ಧೋನಿ ಬ್ಯಾಟಿಂಗ್ ಕ್ರಮಾಂಕ: V/O: ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್​ ಧೋನಿ 4ನೇ ಕ್ರಮಾಂಕದಲ್ಲಿ ಆಡುತ್ತಿರುವುದು ಕೆಳಕ್ರಮಾಂಕದ ಆಟಗಾರರ ಒತ್ತಡವನ್ನು ಹೆಚ್ಚಿಸಿದೆ. ಧೋನಿ ನಿಭಾಯಿಸುತ್ತಿದ್ದ ಉತ್ತಮ ಫಿನಿಶರ್​ ಸ್ಥಾನವನ್ನು ಕೆಳಗಿನ ಬ್ಯಾಟ್ಸ್​ಮನ್​​ಗಳಿಂದ ತುಂಬಲು ಸಾಧ್ಯವಾಗುತ್ತಿಲ್ಲ. ಧೋನಿ ಸ್ಥಾನ ತುಂಬುವುದೇ ಈಗ ಎಲ್ಲರಿಗೂ ಕಷ್ಟದ ಕೆಲಸವಾಗಿದೆ. ಅಕ್ಷರ್ ಪಟೇಲ್​ ಅಬ್ಬರಿಸಿದ್ರೂ ನಿರೀಕ್ಷೆಯ ಮಟ್ಟದ ಪ್ರದರ್ಶನ ನೀಡುವಲ್ಲಿ ಫೇಲ್​ ಆಗಿದ್ದಾರೆ.

ವಿರಾಟ್​ ಕೊಹ್ಲಿ ಇಲ್ಲದೆ ಟೀಮ್ ಇಂಡಿಯಾ ಆಟಗಾರರು ಚೇಸಿಂಗ್​ ಮಾಡಲು ಅಸಾಧ್ಯವೇನೋ ಎನ್ನುವಂತಹ ಪರಿಸ್ಥಿತಿ ಉಂಟಾಗಿದೆ. ಸುರೇಶ್​ ರೈನಾ, ಯುವರಾಜ್​ ಸಿಂಗ್​ರಂತಹ ಅನುಭವಿ ಫಿನಿಶರ್​ಗಳ ಕೊರತೆ ಕೂಡ ಭಾರತದ ತೆಲೆನೋವು ಹೆಚ್ಚಿಸಿದೆ. ಚೇಸಿಂಗ್ ವೇಳೆ ವಿರಾಟ್ ಮೇಲೆ ಭಾರತ ತಂಡ ಹೆಚ್ಚು ಅವಲಂಬಿತವಾಗುತ್ತಿರುವುದು ಭಾರತಕ್ಕೆ ಮಾರಕವಾಗುತ್ತಿದೆ. ಟೀಮ್ ಗೇಮ್​ನಲ್ಲಿ ಟೀಮ್​ ಆಗಿ ಆಡಿದ್ರೆ ಮಾತ್ರ ಗೆಲುವು ಎಂಬುದನ್ನು ಭಾರತ ಮರೆತಂತಿದೆ.