ದೆಹಲಿ(ಸೆ.30): ಟೀಮ್​ ಇಂಡಿಯಾದಲ್ಲಿ ಮೂರು ವರ್ಷಗಳ ನಂತರ ಗೌತಮ್​ ಗಂಭಿರ್​ ಕಮ್​ಬ್ಯಾಕ್​ ಮಾಡುತ್ತಿದ್ದಾರೆ. ಆದರೆ ಇದಕ್ಕೂ ಮೊದಲು ಭಾರತ ಅನೇಕ ಸ್ಟಾರ್​ ಆಟಗಾರರು 3 ರಿಂದ 5 ವರ್ಷದ ನಂತರ ತಂಡಕ್ಕೆ ವಾಪಸ್ಸಾಗಿದ್ದಾರೆ. ಮಿಂಚಿ ಮರೆಯಾಗಿ ತಂಡಕ್ಕೆ ಮರಳಿದ ಟಾಪ್​ ಆಟಗಾರರ ವಿವರ ಇಲ್ಲಿದೆ ನೋಡಿ..

Add Asianetnews Kannada as a Preferred SourcegooglePreferred

ಭಾರತ ತಂಡದಲ್ಲಿ ಮೊಳೆ ಹೊಡೆದುಕೊಂಡು ಕೂರುವುದು ತುಂಬಾ ಕಷ್ಟ. ಒಮ್ಮೆ ತಂಡದಿಂದ ಹೊರ ಬಿದ್ರೆ ಸಾಕು, ಮರಳಿ ಬರುವುದಕ್ಕೆ ತುಂಬಾ ವರ್ಷಗಳೇ ಬೇಕು. ಯಾಕಂದರೆ ಭಾರತ ತಂಡದಲ್ಲಿ ಮರಳಬೇಕಾದರೆ ತುಂಬಾ ಕಷ್ಟಪಡಬೇಕು. ಕೆಲ ಆಟಗಾರರು ಕಳಪೆ ಫಾರ್ಮ್​ನಿಂದ ಹೊರಬಿದವರು, ಕೆಲವರು ಗಾಯದ ಸಮಸ್ಯೆ, ಅನಾರೋಗ್ಯದಿಂದ ಹೊರಿಬಿದ್ದು ತಂಡಕ್ಕೆ ಮರಳಲು 3ರಿಂದ 5 ವರ್ಷ ತೆಗೆದುಕೊಂಡಿದ್ದಾರೆ. 

6 ವರ್ಷಗಳ ನಂತರ ಮರಳಿದ ನೆಹ್ರಾ
ಟೀಮ್ ಇಂಡಿಯಾ ಕಂಡ ಅತ್ಯಂತ ಯಶಸ್ವಿ ಎಡಗೈ ವೇಗಿಯಲ್ಲೋರ್ವ ಆಶೀಶ್​​ ನೆಹ್ರಾ. ನೆಹ್ರಾ ತಮ್ಮ ಲೈನ್​ ಎಂಡ್​ ಲೆಂಗ್ತ್​ ಜೊತೆಗೆ ಸ್ವಿಂಗ್​ನಿಂದ ಗಮನ ಸೆಳೆದವರು. ಆದರೆ 2011ರಲ್ಲಿ ಗಾಯದ ಸಮಸ್ಯೆಯಿಂದ ಟೀಮ್​ ಇಂಡಿಯಾದಿಂದ ಹೊರಬಿದ್ದ ಅವರು, 2016ರಲ್ಲಿ ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯಕ್ಕೆ ಆಯ್ಕೆಯಾದರು.

5 ವರ್ಷಗಳ ನಂತರ ಮಿಶ್ರಾ ಕಮ್​ಬ್ಯಾಕ್​
ಲೆಗ್​ ಸ್ಪಿನ್ನರ್​ ಅಮಿತ್​ ಮಿಶ್ರಾ ಕೂಡ ಭಾರತ ತಂಡಕ್ಕೆ ಮರಳಲು 5 ವರ್ಷ ತೆಗೆದುಕೊಂಡರು. ಐಪಿಎಲ್​ನಲ್ಲಿ ಸತತ ಯಶಸ್ಸು ಕಂಡರು ಮಿಶ್ರಾ ಕಮ್​​ಬ್ಯಾಕ್​ ಮಾಡಲು ಹರಸಾಹಸ ಪಡಬೇಕಾಯ್ತು. 2011ರಲ್ಲಿ ಹೊರಬಿದ್ದ ಮಿಶ್ರಾ, 5 ವರ್ಷಗಳ ಕಾಲ ಭಾರತ ತಂಡಕ್ಕೆ ಕಮ್​ಬ್ಯಾಕ್​ ಮಾಡಲು ಶ್ರಮ ಪಡಬೇಕಾಯ್ತು. 2015ರಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ನಲ್ಲಿ ಮಿಶ್ರಾ ಭಾರತ ತಂಡಕ್ಕೆ ಮರಳಿದರು.

ಟೀಮ್​ ಇಂಡಿಯಾ ಅತಿಥಿ ಯುವಿ
2011ರ ಏಕದಿನ ವಿಶ್ವಕಪ್​ ಗೆಲುವಿಗೆ ಕಾರಣರಾದ ಯುವರಾಜ್​ ಸಿಂಗ್​​ ಕ್ಯಾನ್ಸರ್​ನಿಂದಾಗಿ ಟೀಮ್​ ಇಂಡಿಯಾದಿಂದ ಹೊರಬಿದ್ದರು. ಆದರೆ ಯುವಿ​ ಗುಣಮುಖರಾಗಿ ವರ್ಷಗಳ ಅಂತರದಲ್ಲಿ ತಂಡಕ್ಕೆ ಮರಳಿದ್ರು. ಕಳಪೆ ಫಾರ್ಮ್​ನಿಂದಾಗಿ ತಂಡದ ಅತಿಥಿಯಾಗಿರುವ ಯುವಿ, ಮೂರು ಮಾದರಿಯಲ್ಲೂ ಖಾಯಂ ಸದಸ್ಯನಾಗುವ ಪಯತ್ನ ನಡೆಸಿದರೂ ಎಲ್ಲೂ ಅವರಿಗೆ ಖಾಯಂ ಸ್ಥಾನ ಸಿಗುತ್ತಿಲ್ಲ.

2 ವರ್ಷ ನಂತರ ಭಜ್ಜಿ ವಾಪಸ್​
ಒಂದು ಕಾಲದಲ್ಲಿ ಭಾರತ ತಂಡದ ಸ್ಪಿನ್​ ತಜ್ಙರಾಗಿದ್ದ ಹರ್ಭಜನ್​​ ಸಿಂಗ್​ ಕೂಡ ಭಾರತ ತಂಡಕ್ಕೆ ಮರಳಲು ಸಖತ್​ ಸರ್ಕಸ್​ ಮಾಡಿದ್ದಾರೆ. 2011ರಲ್ಲಿ ಕೊನೆ ಏಕದಿನ ಪಂದ್ಯವಾಡಿದ ಅವರು, 2015ಕ್ಕೆ ಮರಳಿದರು. ಟೆಸ್ಟ್​, ಟಿ20 ಕ್ರಿಕೆಟ್​​ನಲ್ಲೂ ಹರ್ಭಜನ್​ ವರ್ಷಕ್ಕೊಂದು ಪಂದ್ಯವಾಡುತ್ತಿದ್ರು. ಒಂದು ಪಂದ್ಯವಾಡಿದ್ರೆ ಒಂದು ವರ್ಷ ತಂಡದಿಂದ ಹೊರಗುಳಿಯುತ್ತಿದ್ದಾರೆ. ಕಳೆದ 6 ವರ್ಷದಿಂದ ಭಜ್ಜಿ ಹಲವು ಸಲ ಕಮ್​ ಬ್ಯಾಕ್​ ಮಾಡಿದ್ದಾರೆ.

2 ವರ್ಷ ಹೊರಗುಳಿದಿದ್ದ ಜಹೀರ್​​ 
ಜಹೀರ್​ ಕಾನ್​ ಕೂಡ 2004ರಲ್ಲಿ ಟೀಮ್ ಇಂಡಿಯಾದಿಂದ ಹೊರಬಿದಿದ್ದರು. 2006ರಲ್ಲಿ ಭಾರತ-ಇಂಗ್ಲೆಂಡ್​ ಟೆಸ್ಟ್​ ಸರಣಿಗೆ ಜಹೀರ್​ ಮರಳಿದರು. ಭಾರತ ಕಂಡ ಯಶಸ್ವಿ ಬೌಲರ್​ ಆದ್ರೂ ಜಹೀರ್​​ ಕೂಡ ಕಳಪೆ ಫಾರ್ಮ್​ ಗಾಯದ ಸಮಸ್ಯೆಯಿಂದಾಗಿ ತಂಡಕ್ಕೆ ಮರಳಲು ಒದ್ದಾಡಿ ಕೊನೆಗೆ ನಿವೃತ್ತಿ ಘೊಷಿಸಿದರು.

ಕೇವಲ ಇವರಷ್ಟೇ ಅಲ್ಲ ಟೀಮ್​ ಇಂಡಿಯಾದ ಅನೇಕ ಭರವಸೆಯ ಬೌಲರ್​ಗಳು ಕೂಡ 2-3 ವರ್ಷಗಳ ಕಾಲ ಸೈಕಲ್​ ತುಳಿದ ನಂತರವೇ ತಂಡಕ್ಕೆ ಮರಳಿದ್ದಾರೆ. 2007ರಲ್ಲಿ ಮುನಾಫ್​ ಪಟೇಲ್​ ತಂಡಕ್ಕೆ ಮರಳಲು ಮೂರು ವರ್ಷ ತೆಗೆದುಕೊಂರು, 2010ರ ನಂತರ ಇಶಾಂತ್​ ಶರ್ಮಾ ಕೂಡ ಎರಡು ವರ್ಷ ತಂಡದಿಂದ ಹೊರಗುಳಿದಿದ್ದರು. ಹಾಗಾಗಿ ಎಂತಹ ದೊಡ್ಡ ಆಟಗಾರನಾಗಿರಲಿ. ಒಮ್ಮೆ ತಂಡದಿಂದ ಹೊರಗುಳಿದ್ರೆ ತಂಡಕ್ಕೆ ಮರಳುವುದು ಕಷ್ಟ ಎಂಬುವುದಂತು ಸತ್ಯ.