ಟೀಂ ಇಂಡಿಯಾ ಮುಖ್ಯ ಕೋಚ್ ಹಾಗೂ ಸಹಾಯಕ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಬೌಲಿಂಗ್ ಕೋಚ್ ಭರತ್ ಅರುಣ್ ಅವರೇ ಮತ್ತೆ ಬೌಲಿಂಗ್ ಕೋಚ್ ಆಗಿ ಮುಂದುವರೆಯುವ ಸಾಧ್ಯತೆಯಿದೆ. ಆದರೆ ಬ್ಯಾಟಿಂಗ್ ಕೋಚ್‌ ಸಂಜಯ್ ಬಾಂಗರ್‌ ಅವರಿಗೆ ಗೇಟ್ ಪಾಸ್ ನೀಡಲಿದೆ ಎಂದು ವರದಿಯಾಗಿದೆ. ಈ ಬಗೆಗಿನ ಹೆಚ್ಚಿನ ವಿವರ ಇಲ್ಲಿದೆ ನೋಡಿ... 

ನವದೆಹಲಿ(ಜು.27): ಭಾರತ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಜತೆ ಸಹಾಯಕ ಸಿಬ್ಬಂದಿಯನ್ನು ಆಯ್ಕೆ ಮಾಡಲಿರುವ ಬಿಸಿಸಿಐ, ಹೊಸದಾಗಿ ಅರ್ಜಿ ಆಹ್ವಾನಿಸಿದೆ. ಆದರೆ ತಂಡದ ಬೌಲಿಂಗ್‌ ಕೋಚ್‌ ಆಗಿ ಭರತ್‌ ಅರುಣ್‌ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. 

ಟೀಂ ಇಂಡಿಯಾ ಫೀಲ್ಡಿಂಗ್‌ ಕೋಚ್‌ ರೇಸಲ್ಲಿ ಜಾಂಟಿ ರೋಡ್ಸ್

ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ತಂಡದ ವೇಗಿಗಳ ಪ್ರದರ್ಶನ ಬಿಸಿಸಿಐಗೆ ಸಮಾಧಾನ ತಂದಿದೆ ಎನ್ನಲಾಗಿದೆ. ಮೊಹಮದ್‌ ಶಮಿ, ಜಸ್ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌ ಮೂರೂ ಮಾದರಿಯಲ್ಲಿ ಯಶಸ್ಸು ಸಾಧಿಸುತ್ತಿದ್ದು, ತಮ್ಮ ಪ್ರದರ್ಶನಕ್ಕೆ ಅರುಣ್‌ರ ಮಾರ್ಗದರ್ಶನ ಕಾರಣ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಕಳೆದ 4 ವರ್ಷಗಳಿಂದಲೂ ಭಾರತ ತಂಡದ ಮಧ್ಯಮ ಕ್ರಮಾಂಕದ ಸಮಸ್ಯೆ ಮುಂದುವರಿದಿರುವ ಕಾರಣ, ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌ರನ್ನು ಬದಲಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.

ಕೋಚ್ ಆಯ್ಕೆ: ಕೊಹ್ಲಿ ಮಾತಿಗಿಲ್ಲ ಮನ್ನಣೆ..?

ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಮುಕ್ತಾಯವಾದ ಬಳಿಕ ಹೊಸ ಕೋಚ್ ಆಗಲಿದ್ದಾರೆ. ಹೀಗಾಗಿ ಮುಖ್ಯ ಕೋಚ್ ಸೇರಿದಂತೆ ಎಲ್ಲಾ ಹುದ್ದೆಗಳಿಗೆ ಬಿಸಿಸಿಐ ಅರ್ಜಿ ಆಹ್ವಾನಿದೆ. ರವಿಶಾಸ್ತ್ರಿ ಮುಖ್ಯ ಕೋಚ್ ಆಗಿ ಮುಂದುವರೆಯುತ್ತಾರೋ ಇಲ್ಲವೇ ಹೊಸ ಕೋಚ್ ಆಯ್ಕೆಯಾಗುತ್ತಾರೋ ಎನ್ನುವುದು ಇನ್ನು ಕೆಲವೇ ದಿನಗಳಲ್ಲಿ ತಿಳಿಯಲಿದೆ.