ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ತಂಡ ಪ್ರಕಟಿಸಿದೆ. ಮೊದಲ ಚುಟುಕು ಪಂದ್ಯಕ್ಕೆ ಸ್ಥಾನ ಪಡೆದ ಆಟಗಾರರು ಯಾರು? ಇಲ್ಲಿದೆ ಹೆಚ್ಚಿನ ವಿವರ.
ಬ್ರಿಸ್ಪೇನ್(ನ.20): ಆಸ್ಟ್ರೇಲಿಯಾ ವಿರುದ್ದ ಟಿ20 ಸರಣಿ ನಾಳೆ(ನ.21)ರಿಂದ ಆರಂಭಗೊಳ್ಳಲಿದೆ. ಬ್ರಿಸ್ಬೇನ್ ಮೈದಾನದಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ 12 ಮಂದಿ ಸದಸ್ಯರ ತಂಡ ಪ್ರಕಟಿಸಿದೆ.
ಕನ್ನಡಿಗ ಕೆಎಲ್ ರಾಹುಲ್ ಸ್ಥಾನ ಪಡೆದಿದ್ದರೆ, ಮತ್ತೊರ್ವ ಕನ್ನಡಿಗ ಮನೀಶ್ ಪಾಂಡೆ ಸ್ಥಾನ ಗಿಟ್ಟಿಸಿಕೊಂಡಿಲ್ಲ. ಇನ್ನು ಆಲ್ರೌಂಡರ್ ಕೋಟಾದಲ್ಲಿ ಕ್ರುನಾಲ್ ಪಾಂಡ್ಯ ಸ್ಥಾನ ಪಡೆದಿದ್ದಾರೆ. ಇಷ್ಟೇ ಅಲ್ಲ ದಿನೇಶ್ ಕಾರ್ತಿಕ್ ಹಾಗೂ ರಿಷಬ್ ಪಂತ್ ಇಬ್ಬರೂ ವಿಕೆಟ್ ಕೀಪರ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ತಂಡ ಪ್ರಕಟಿಸಿದ ಭಾರತ
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆಎಲ್ ರಾಹುಲ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಕ್ರುನಾಲ್ ಪಾಂಡ್ಯ, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಖಲೀಲ್ ಅಹಮ್ಮದ್, ಯಜುವೇಂದ್ರ ಚಹಾಲ್
