ಮೂರನೇ ದಿನದಾಟ ಆರಂಭದಲ್ಲೇ ಚೇತೇಶ್ವರ ಪೂಜಾರ ಅರ್ಧಶತಕ ಪೂರೈಸಿ ಪೆವಿಲಿಯನ್ ಸೇರಿದರು. ಆ ಬಳಿಕ ವೃದ್ದಿಮಾನ್ ಸಾಹಾ(29) ಹಾಗೂ ರವೀಂದ್ರ ಜಡೇಜಾ(22) ಟೀಂ ಇಂಡಿಯಾಗೆ ಸ್ವಲ್ಪ ಆಸರೆಯಾದರು.

ಕೋಲ್ಕತಾ(ನ.18): ಶ್ರೀಲಂಕಾ ಮಾರಕ ವೇಗಿಗಳ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಮೊದಲ ಟೆಸ್ಟ್'ನ ಮೊದಲ ಇನಿಂಗ್ಸ್'ನಲ್ಲಿ 172 ರನ್'ಗಳಿಗೆ ಸರ್ವಪತನ ಕಂಡಿದೆ.

ಎರಡನೇ ದಿನದಲ್ಲಿಯೂ ಮಳೆಯ ಅವಾಂತರದಿಂದ ಕೇವಲ 20 ಓವರ್'ಗಳ ಆಟ ನಡೆದಿತ್ತು. ಎರಡನೇ ದಿನದಾಟದ ಮುಕ್ತಾಯದ ವೇಳೆಗೆ ಟೀಂ ಇಂಡಿಯಾ 74/5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಮೂರನೇ ದಿನದಾಟ ಆರಂಭದಲ್ಲೇ ಚೇತೇಶ್ವರ ಪೂಜಾರ ಅರ್ಧಶತಕ ಪೂರೈಸಿ ಪೆವಿಲಿಯನ್ ಸೇರಿದರು. ಆ ಬಳಿಕ ವೃದ್ದಿಮಾನ್ ಸಾಹಾ(29) ಹಾಗೂ ರವೀಂದ್ರ ಜಡೇಜಾ(22) ಟೀಂ ಇಂಡಿಯಾಗೆ ಸ್ವಲ್ಪ ಆಸರೆಯಾದರು. ಕೊನೆಗೆ ಮೊಹಮ್ಮದ್ ಶಮಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ಲಂಕಾ ಪರ ಸುರಂಗಾ ಲಕ್ಮಲ್ 4 ವಿಕೆಟ್ ಪಡೆದರೆ, ಲಹೀರು ಗಮಾಗೆ, ಶನಕಾ ಮತ್ತು ದಿಲ್ವಾನಾ ಪೆರೆರಾ ತಲಾ 2 ವಿಕೆಟ್ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್:

ಭಾರತ: 172/10

ಚೇತೇಶ್ವರ ಪೂಜಾರ: 52

ವೃದ್ದಿಮಾನ್ ಸಾಹಾ: 29

ಸುರಂಗಾ ಲಕ್ಮಲ್ : 26/4