ಕ್ರಿಕೆಟ್ ಸೀಕ್ರೇಟ್ಸ್: ಜೂ.20: ಟೀಂ ಇಂಡಿಯಾಗೆ ಮೂರು ಮುತ್ತುಗಳು ಸಿಕ್ಕಿದ ದಿನ..!

Team India 3 Star Player Debut Test Cricket In June 20
Highlights

ಕಾಕತಾಳೀಯವೆಂದರೆ ಈ ಮೂರೂ ಕ್ರಿಕೆಟಿಗರೂ ಟೀಂ ಇಂಡಿಯಾ ನಾಯಕರಾಗಿದ್ದರು. ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು.

ಬೆಂಗಳೂರು[ಜೂ.20]: ಭಾರತ ಕ್ರಿಕೆಟ್ ಕಂಡ ಅಸಾಮಾನ್ಯ ಕ್ರಿಕೆಟಿಗರು ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಅಪರೂಪದ ದಿನ ಜೂನ್ 20. ಟೀಂ ಇಂಡಿಯಾದ ಯಶಸ್ವಿ ನಾಯಕರಾದ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್[1996] ಹಾಗೂ ಹಾಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ[2011] ಟೆಸ್ಟ್ ಕ್ರಿಕೆಟ್’ಗೆ ಜೂನ್ 20ರಂದೇ ಪದಾರ್ಪಣೆ ಮಾಡಿದ್ದರು.

ಕಾಕತಾಳೀಯವೆಂದರೆ ಈ ಮೂರೂ ಕ್ರಿಕೆಟಿಗರೂ ಟೀಂ ಇಂಡಿಯಾ ನಾಯಕರಾಗಿದ್ದರು. ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಆಡಿದ ಚೊಚ್ಚಲ ಪಂದ್ಯದಲ್ಲಿಯೇ ದಾದಾ [131] ಶತಕ ಸಿಡಿಸಿ ಸಂಭ್ರಮಿಸಿದರೆ, ದ ವಾಲ್ ಖ್ಯಾತಿಯ ದ್ರಾವಿಡ್[95] ಕೇವಲ 5 ರನ್’ಗಳಿಂದ ಶತಕ ವಂಚಿತರಾಗಿದ್ದರು. ಈ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಇನ್ನು ವಿರಾಟ್ ಕೊಹ್ಲಿ ವೆಸ್ಟ್ಇಂಡಿಸ್ ವಿರುದ್ಧ ಸಬೀನಾ ಪಾರ್ಕ್ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯವನ್ನು ಕೊಹ್ಲಿ[4 ಹಾಗೂ 15] ಸ್ಮರಣೀಯವಾಗಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಆದರೆ ಆ ಪಂದ್ಯವನ್ನು ಭಾರತ 63 ರನ್’ಗಳ ಭರ್ಜರಿ ಜಯ ಸಾಧಿಸಿತ್ತು.

ಇನ್ನು ಅಂಕಿ ಅಂಶಗಳ ವಿಚಾರಕ್ಕೆ ಬರುವುದಾದರೆ, ಈ ಮೂವರು ಆಟಗಾರರು ಸೇರಿ ಟೀಂ ಇಂಡಿಯಾ ಆಟಗಾರರು ಬಾರಿಸಿರುವ ಒಟ್ಟು ರನ್’ಗಳ ಶೇ.10.48[26031/248320] ಬಾರಿಸಿದ್ದಾರೆ. ಹಾಗೆಯೇ ಇದುವರೆಗೆ ಟೀಂ ಇಂಡಿಯಾ ಬಾರಿಸಿರುವ ಒಟ್ಟು ಶತಕಗಳ ಪೈಕಿ ಈ ಮೂವರು ದಿಗ್ಗಜರು ಶೇ.14.81%[73/493] ಶತಕ ಕಲೆಹಾಕಿದ್ದಾರೆ. 

ಸೌರವ್ ಗಂಗೂಲಿ[113 ಟೆಸ್ಟ್, 7.212 ರನ್], ರಾಹುಲ್ ದ್ರಾವಿಡ್[164 ಪಂದ್ಯ, 13,288 ರನ್] ಹಾಗೂ ವಿರಾಟ್ ಕೊಹ್ಲಿ[66 ಪಂದ್ಯ, 5554*] ರನ್ ಬಾರಿಸಿದ್ದಾರೆ. ದ್ರಾವಿಡ್ ಹಾಗೂ ಗಂಗೂಲಿ ಕ್ರಿಕೆಟ್’ಗೆ ವಿದಾಯ ಹೇಳಿದ್ದು, ವಿರಾಟ್ ಕೊಹ್ಲಿ ನಿವೃತ್ತರಾಗುವವರೆಗೂ ಈ ಅಂಕೆ-ಸಂಖ್ಯೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಬಹುದು.

loader