ಪ್ರೊ ಕಬಡ್ಡಿ: ಗುಜರಾತ್ ಗೆಲುವು ಕಸಿದ ಅಜಯ್ ಠಾಕೂರ್
ಪ್ರೊ ಕಬಡ್ಡಿ ಲೀಗ್ ಟೂರ್ನಿಯ 34ನೇ ಪಂದ್ಯದಲ್ಲಿ ಆತಿಥೇಯ ಬಲಿಷ್ಠ ಗುಜರಾತ್ ಫಾರ್ಚ್ಯೂನ್‌ಜೈಂಟ್ಸ್ ತಂಡಕ್ಕೆ ಆಘಾತ ನೀಡುವಲ್ಲಿ ಯಶಸ್ವಿಯಾಗಿದೆ. ತಮಿಳ್ ನಾಯಕ ಅಜಯ್ ಠಾಕೂರ್ ಮಿಂಚಿನ ಸೂಪರ್ ರೇಡ್ ನಡೆಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಅಹಮದಾಬಾದ್[ಆ.10]: ನಾಯಕ ಅಜಯ್ ಠಾಕೂರ್ ಮಿಂಚಿನ ಸೂಪರ್ ರೇಡ್ ನೆರವಿನಿಂದ ತಮಿಳ್ ತಲೈವಾಸ್ 34-28 ಅಂತರದಲ್ಲಿ ಆತಿಥೇಯ ಗುಜರಾತ್ ಫಾರ್ಚೂನ್’ಜೈಂಟ್ಸ್ ತಂಡವನ್ನು ಮಣಿಸಿದೆ. ಇದರೊಂದಿಗೆ ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ 34ನೇ ಪಂದ್ಯದಲ್ಲಿ ತಲೈವಾಸ್ ತಂಡ ಜಯಭೇರಿ ಬಾರಿಸುವುದರೊಂದಿಗೆ ತವರಿನಲ್ಲೇ ಬಲಿಷ್ಠ ಗುಜರಾತ್ ತಂಡಕ್ಕೆ ಆಘಾತ ನೀಡುವಲ್ಲಿ ಸಫಲವಾಗಿದೆ
ಇಲ್ಲಿನ ಏಕಾನ ಒಳಾಂಗಣ ಕ್ರೀಡಾಂಗಣದಲ್ಲಿ ಆತಿಥೇಯ ಗುಜರಾತ್ ಫಾರ್ಚೂನ್’ಜೈಂಟ್ಸ್ ಮೊದಲ ರೇಡ್’ನಲ್ಲೇ ಪದಕದ ಖಾತೆ ತೆರೆಯಿತು. ಆದರೆ 9ನೇ ನಿಮಿಷದಲ್ಲಿ 5-5 ಅಂಕಗಳ ಸಮಬಲ ಸಾಧಿಸಿತು. ಆ ಬಳಿಕ ರೇಡಿಂಗ್ ಹಾಗೂ ಡಿಫೆಂಡಿಂಗ್’ನಲ್ಲಿ ಮಿಂಚಿನ ಪ್ರದರ್ಶನ ತೋರಿದ ತಮಿಳ್ ತಲೈವಾಸ್ ಆತಿಥೇಯ ತಂಡದ ಮೇಲೆ ಒತ್ತಡ ಹೇರುವುದರ ಜತೆ ಅಂಕ ಗಳಿಸುತ್ತಾ ಸಾಗಿತು. ಪರಿಣಾಮ ಮೊದಲಾರ್ಧ ಮುಕ್ತಾಯದ ವೇಳೆಗೆ ತಮಿಳ್ ತಲೈವಾಸ್ 15-10 ಅಂಕಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿತು.
ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!
ಇನ್ನು ದ್ವಿತಿಯಾರ್ಧಲ್ಲಿ ಗುಜರಾತ್ ಕೂಡಾ ಕಮ್’ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಯಿತು. ರೋಹಿತ್ ಗುಲಿಯಾ, ಸುನಿಲ್ ಕುಮಾರ್ ಆಕ್ರಮಣಕಾರಿ ಆಟದ ನೆರವಿನಿಂದ ಗುಜರಾತ್ ತಂಡವು ಕೊನೆಯ ನಾಲ್ಕು ನಿಮಿಷವಿದ್ದಾಗ ತಲೈವಾಸ್ ತಂಡವನ್ನು ಆಲೌಟ್ ಮಾಡುವ ಮೂಲಕ 26-25 ಅಂಕಗಳ ಮುನ್ನಡೆ ಸಾಧಿಸಿತು.
PKL7:ಯುಪಿ ಯೋಧ ವಿರುದ್ಧ ಪಾಟ್ನಾ ಜಯಭೇರಿ!
ಟರ್ನಿಂಗ್ ಕೊಟ್ಟ ಸೂಪರ್ ರೈಡ್: ಆಲೌಟ್ ಬಳಿಕ ಎಚ್ಚೆತ್ತುಕೊಂಡ ತಮಿಳ್ ತಲೈವಾಸ್, ನಾಯಕ ಅಜಯ್ ಠಾಕೂರ್ ಸೂಪರ್ ರೇಡ್ ನಡೆಸುವ ಮೂಲಕ ಮತ್ತೆ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಕೊನೆಯ ನಿಮಿಷದಲ್ಲಿ ಗುಜರಾತ್ ತಂಡವನ್ನು ಮತ್ತೊಮ್ಮೆ ಆಲೌಟ್ ಮಾಡುವುದರೊಂದಿಗೆ ತಮಿಳ್ ತಲೈವಾಸ್ ಗೆಲುವನ್ನು ಮತ್ತಷ್ಟು ಖಚಿತ ಪಡಿಸಿಕೊಂಡಿತು.