ಒಲ್ಡ್ ಟ್ರಾಫೋರ್ಡ್(ಜು.01): ಐರ್ಲೆಂಡ್ ವಿರುದ್ಧದ ಟಿ20 ಸರಣಿ ಗೆದ್ದ ಟೀಂ ಇಂಡಿಯಾ ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಜ್ಜಾಗುತ್ತಿದೆ. ಹೀಗಾಗಿ ಇಂಗ್ಲೆಂಡ್‌ನ ಒಲ್ಡ್ ಟ್ರಾಫೋರ್ಡ್‌ನಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಸರಣಿಗೆ ಸಜ್ಜಾಗುತ್ತಿದೆ.

ಆಂಗ್ಲರ ನಾಡಿನಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರ ಡ್ರೆಸ್ಸಿಂಗ್ ರೂಮ್ ಹೇಗಿದೆ ಅನ್ನೋ ಕುತೂಹಲಕ್ಕೆ ಕೆಎಲ್ ರಾಹುಲ್ ಉತ್ತರ ನೀಡಿದ್ದಾರೆ. ಅಭ್ಯಾಸಕ್ಕೆ ತೆರಳೋ ಮುನ್ನ ಕ್ರಿಕೆಟಿಗರ ತಯಾರಿ ಹೇಗಿರುತ್ತೆ? ಡ್ರೆಸ್ಸಿಂಗ್ ರೂಮ್‌ನಲ್ಲಿ ಏನೆಲ್ಲಾ ಇರುತ್ತೆ ಅನ್ನೋದನ್ನ ರಾಹುಲ್ ವಿಡೀಯೋ ಮೂಲಕ ಹೇಳಿದ್ದಾರೆ.

 

 

Take a look at what our dressing looks like here at Old Trafford. #InstaTakeOver #ENGvIND

A post shared by Team India (@indiancricketteam) on Jul 1, 2018 at 1:27am PDT

 

ಜುಲೈ 3 ರಂದು ಭಾರತ ಓಲ್ಡ್ ಟ್ರಾಫೋರ್ಡ್‌ನಲ್ಲಿ, ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ ಆಡಲಿದೆ. ಆಂಗ್ಲರ ವಿರುದ್ದ ಓಟ್ಟು 3 ಟಿ20, 3 ಏಕದಿನ ಹಾಗೂ 5 ಟೆಸ್ಟ್ ಪಂದ್ಯ ಆಡಲಿರುವ ಟೀಂ ಇಂಡಿಯಾ ಸರಣಿ ಗೆಲುವಿನ ವಿಶ್ವಾಸದಲ್ಲಿದೆ.