ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೋಲ್ಕತಾ ಆರಂಭದಲ್ಲೇ ನರೈನ್[2] ವಿಕೆಟ್ ಕಳೆದುಕೊಂಡಿತು. ರಾಣಾ ಜತೆ ಇನ್ನಿಂಗ್ಸ್ ಕಟ್ಟಿದ ಲಿನ್ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಟ್ಟರು. 

ಕೋಲ್ಕತಾ[ಏ.14]: ಕ್ರಿಸ್ ಲಿನ್[82] ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್’ರೈಡರ್ಸ್ ತಂಡವು 161 ರನ್ ಬಾರಿಸಿದ್ದು, ಹಾಲಿ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್’ಗೆ ಸವಾಲಿನ ಗುರಿ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೋಲ್ಕತಾ ಆರಂಭದಲ್ಲೇ ನರೈನ್[2] ವಿಕೆಟ್ ಕಳೆದುಕೊಂಡಿತು. ರಾಣಾ ಜತೆ ಇನ್ನಿಂಗ್ಸ್ ಕಟ್ಟಿದ ಲಿನ್ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಉತ್ತಮವಾಗಿ ಆಡುವ ಮುನ್ಸೂಚನೆ ನೀಡಿದ ರಾಣಾ 21 ರನ್ ಬಾರಿಸಿ ತಾಹಿರ್’ಗೆ ವಿಕೆಟ್ ಒಪ್ಪಿಸಿದರು. ಉತ್ತಪ್ಪ ಶೂನ್ಯ ಸುತ್ತಿ ಬಂದ ದಾರಿಯಲ್ಲೇ ಪೆವಿಲಿಯನ್ ಸೇರಿದರು. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ನಿರ್ಭಯವಾಗಿ ಬ್ಯಾಟ್ ಬೀಸಿದ ಕ್ರಿಸ್ ಲಿನ್ 51 ಎಸೆತಗಳಲ್ಲಿ 7 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 82 ರನ್ ಬಾರಿಸಿ ತಾಹಿರ್’ಗೆ ಮೂರನೇ ಬಲಿಯಾದರು. ಆಂಡ್ರೆ ರಸೆಲ್ ಬ್ಯಾಟಿಂಗ್ ಕೇವಲ 10 ರನ್’ಗಳಿಗೆ ಸೀಮಿತವಾದರೆ, ನಾಯಕ ಕಾರ್ತಿಕ್[18] ಹಾಗೂ ಶುಭ್’ಮಾನ್ ಗಿಲ್[15] ತಂಡದ ಮೊತ್ತವನ್ನು 160ರ ಗಡಿ ದಾಟಿಸುವಲ್ಲಿ ನೆರವಾದರು.

Scroll to load tweet…

ಚೆನ್ನೈ ಪರ ಇಮ್ರಾನ್ ತಾಹಿರ್ 27 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರೆ, ಶಾರ್ದೂಲ್ ಠಾಕೂರ್ 2 ಹಾಗೂ ಮಿಚೆಲ್ ಸ್ಯಾಂಟ್ನರ್ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:
KKR:161/8
ಲಿನ್: 82
ತಾಹಿರ್: 27/4
[ವಿವರ ಅಪೂರ್ಣ]