Asianet Suvarna News Asianet Suvarna News

ಮೊದಲ ಟಿ20: ಲಂಕಾ ವಿರುದ್ಧ ಕಿವೀಸ್‌ಗೆ ಜಯ

ಕಿವೀಸ್ ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್ ಹಾಗೂ ಆಲ್ರೌಂಡರ್ ಕಾಲಿನ್ ಡಿ ಗ್ರ್ಯಾಂಡ್‌ಹೋಂ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ತಂಡವು ರೋಚಕ ಗೆಲುವು ದಾಖಲಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

T20I Ross Taylor shines as New Zealand beat Sri Lanka by 5 wickets
Author
Kandy, First Published Sep 2, 2019, 12:43 PM IST

ಕ್ಯಾಂಡಿ[ಸೆ.02]: ಆರಂಭಿಕ ಬ್ಯಾಟ್ಸ್‌ಮನ್ ಕುಸಾಲ್ ಮೆಂಡಿಸ್ (79) ಆಕರ್ಷಕ ಅರ್ಧಶತಕದ ಹೊರತಾಗಿಯೂ ಶ್ರೀಲಂಕಾ ತಂಡ, ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 5 ವಿಕೆಟ್ ಸೋಲು ಕಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಮುನ್ನಡೆ ಸಾಧಿಸಿದೆ.

ಲಂಕಾ ವಿರುದ್ಧ ಕಿವೀಸ್‌ಗೆ ಇನ್ನಿಂಗ್ಸ್‌, 65 ರನ್‌ ಜಯ

ಲಂಕಾ ನೀಡಿದ್ದ ಸ್ಫರ್ಧಾತ್ಮಕ ಗುರಿ ಬೆನ್ನಟ್ಟಿದ ಕಿವೀಸ್ 18 ರನ್ ಗಳಿಸುವಷ್ಟರಲ್ಲೇ ಆರಂಭಿಕ ಬ್ಯಾಟ್ಸ್’ಮನ್’ಗಳು ಪೆವಿಲಿಯನ್ ಸೇರಿದ್ದರು. ಆದರೆ ಆ ಬಳಿಕ ರಾಸ್ ಟೇಲರ್[48], ಕಾಲಿನ್ ಡಿ ಗ್ರ್ಯಾಂಡ್’ಹೋಂ[44] ಹಾಗೂ ಮಿಚೆಲ್ ಸ್ಯಾಂಟ್ನರ್[14] ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇನ್ನೂ ಮೂರು ಎಸೆತ ಬಾಕಿ ಇರುವಂತೆಯೇ ಕಿವೀಸ್ ಗೆಲುವಿನ ನಗೆ ಬೀರಿತು.

ಬುಮ್ರಾ ಭಯಕ್ಕೆ ನಿದ್ರೆಯೇ ಮಾಡಿರಲಿಲ್ವಂತೆ ಕಿವೀಸ್‌ನ ಈ ಬ್ಯಾಟ್ಸ್‌ಮನ್..!

ಮಾಲಿಂಗ ದಾಖಲೆ:

ಶ್ರೀಲಂಕಾದ ವೇಗಿ ಲಸಿತ್ ಮಲಿಂಗ, ಅಂ.ರಾ. ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದರು. ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 2 ವಿಕೆಟ್ ಪಡೆದ ಮಾಲಿಂಗ, ಟಿ20 ಕ್ರಿಕೆಟ್‌ನಲ್ಲಿ 99 ವಿಕೆಟ್ ಕಿತ್ತ ಸಾಧನೆ ಮಾಡಿದರು. ಈ ಮೂಲಕ ಮಾಲಿಂಗ, ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಆಫ್ರಿದಿ (98)
ದಾಖಲೆಯನ್ನು ಹಿಂದಿಕ್ಕಿದರು. 

ಸ್ಕೋರ್: 
ಶ್ರೀಲಂಕಾ 174/4, 
ನ್ಯೂಜಿಲೆಂಡ್ 175/5
 

Follow Us:
Download App:
  • android
  • ios