ಇಲ್ಲಿನ ಈಡನ್ ಗಾರ್ಡನ್ಸ್‌'ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದೆಹಲಿ 154 ರನ್‌'ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ 112 ರನ್‌'ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 41 ರನ್'ಗಳ ಜಯಭೇರಿ ಬಾರಿಸಿ ಚಾಂಪಿಯನ್ ಆಯಿತು.

ಕೋಲ್ಕತಾ(ಜ.26): ವೇಗಿ ಪ್ರದೀಪ್ ಸಾಂಗ್ವಾನ್ ಮತ್ತು ಕುಲ್ವಂತ್ ಕೇಜ್ರೋಲಿಯಾರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ದೆಹಲಿ ತಂಡ, ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯ ಫೈನಲ್‌'ನಲ್ಲಿ ರಾಜಸ್ಥಾನ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟಕ್ಕೇರಿತು.

ದೆಹಲಿಗಿದು ಚೊಚ್ಚಲ ಪ್ರಶಸ್ತಿ. ಇಲ್ಲಿನ ಈಡನ್ ಗಾರ್ಡನ್ಸ್‌'ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದೆಹಲಿ 154 ರನ್‌'ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ 112 ರನ್‌'ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 41 ರನ್'ಗಳ ಜಯಭೇರಿ ಬಾರಿಸಿ ಚಾಂಪಿಯನ್ ಆಯಿತು.

ಸಂಕ್ಷಿಪ್ತ ಸ್ಕೋರ್:

ದೆಹಲಿ: 153/6

ಉನ್ಮುಕ್ತ್: 53, ಅಹ್ಮದ್ 23/2

ರಾಜಸ್ಥಾನ 112/10

ಆದಿತ್ಯ: 52, ಸಾಂಗ್ವಾನ್ 14/2