ಲಖನೌ(ನ.23): ಹಾಲಿ ಚಾಂಪಿಯನ್‌ ಸಮೀರ್‌ ವರ್ಮಾ, ಸೈನಾ ನೆಹ್ವಾಲ್‌ ಮತ್ತು ಪಾರುಪಳ್ಳಿ ಕಶ್ಯಪ್‌, ಇಲ್ಲಿ ನಡೆಯುತ್ತಿರುವ ಸಯ್ಯದ್‌ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ವಿಶ್ವ ಸೂಪರ್‌ ಟೂರ್‌ನಲ್ಲಿ ಕ್ವಾರ್ಟರ್‌ಫೈನಲ್‌ ಪ್ರವೆಶಿಸಿದ್ದಾರೆ. 

 

 

ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್‌-ಅಶ್ವಿನಿ ಜೋಡಿ ಎಂಟರಘಟ್ಟಕ್ಕೆ ಲಗ್ಗೆ ಇಟ್ಟಿದೆ. ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ, ತಮ್ಮವರೇ ಆದ ಅಮೋಲಿಕಾ ವಿರುದ್ಧ 21-14, 21-9 ಗೇಮ್‌ಗಳಲ್ಲಿ ಗೆದ್ದರು. ಪುರುಷರ ಸಿಂಗಲ್ಸ್‌ನಲ್ಲಿ ಕಶ್ಯಪ್‌, ಇಂಡೋನೇಷ್ಯಾದ ಫಿರ್ಮನ್‌ ವಿರುದ್ಧ 9-21, 22-20, 21-8 ಗೇಮ್‌ಗಳಲ್ಲಿ ಜಯಿಸಿದರು. 

ಸಮೀರ್‌ ವರ್ಮಾ, ಚೀನಾದ ಜಾವೊ ಜನ್ಪೆಂಗ್‌ ವಿರುದ್ಧ 22-20, 21-17 ಗೇಮ್‌ಗಳಲ್ಲಿ ಗೆದ್ದರು. ಪುರುಷರ ಹಾಗೂ ಮಹಿಳಾ ಸಿಂಗಲ್ಸ್‌ನಲ್ಲಿ ತಲಾ ಮೂವರು ಭಾರತೀಯರು ಅಂತಿಮ 8ರ ಘಟ್ಟಪ್ರವೇಶಿಸಿದ್ದಾರೆ.