ಮಹಿಳೆಯರ 100 ಮೀ. ಬಟರ್‌'ಫ್ಲೈ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಚೆನ್, 50 ಮೀ. ಫ್ರೀಸ್ಟೈಲ್ ಹೀಟ್ಸ್‌ನಲ್ಲಿ ಭಾಗವಹಿಸಿರಲಿಲ್ಲ.
ಬೀಜಿಂಗ್(ಡಿ.10): ರಿಯೊ ಒಲಿಂಪಿಕ್ಸ್ ವೇಳೆ ಡೋಪಿಂಗ್ ಪರೀಕ್ಷೆಯಲ್ಲಿ ನಪಾಸಾಗಿದ್ದ ಚೀನಿ ಈಜುಗಾರ್ತಿ ಚೆನ್ ಕ್ಸಿನ್ಯಿಗೆ ಅಂತಾರಾಷ್ಟ್ರೀಯ ಈಜು ಮಂಡಳಿ (ಫಿನಾ) ಎರಡು ವರ್ಷ ನಿಷೇಧ ಹೇರಿದೆ.
ಮಹಿಳೆಯರ 100 ಮೀ. ಬಟರ್'ಫ್ಲೈ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಚೆನ್, 50 ಮೀ. ಫ್ರೀಸ್ಟೈಲ್ ಹೀಟ್ಸ್ನಲ್ಲಿ ಭಾಗವಹಿಸಿರಲಿಲ್ಲ.
ಚೀನಿ ಮಾಧ್ಯಮಗಳಲ್ಲಿ ಆಕೆ ನಿಷೇಧಿತ ಉದ್ದೀಪನಾ ಮದ್ದು ಸೇವಿಸಿದ್ದಾರೆಂಬ ವರದಿ ಕಂಡುಬಂದ ಹಿನ್ನೆಲೆಯಲ್ಲಿ ಆಕೆ ಸ್ಪರ್ಧಿಸದಂತೆ ನಿರ್ಬಂಧ ಹೇರಲಾಗಿತ್ತು.
ಇದೀಗ ಆಕೆಗೆ ಎರಡು ವರ್ಷಗಳ ನಿಷೇಧ ಹೇರಲಾಗಿದೆ ಎಂಬುದನ್ನು ಸ್ವತಃ ಫಿನಾ ಖಚಿತಪಡಿಸಿದೆ.
