ಭಾರತದ ಅಂತಾರಾಷ್ಟ್ರೀಯ ಕ್ರಿಕೆಟ್​​​​ ಪಂದ್ಯಗಳ ಸಿಗ್ನಲ್ಸ್‌ಗಳನ್ನು ಪ್ರಸಾರ ಮಾಡುವ ಎಲ್ಲ ಖಾಸಗಿ ಚಾನೆಲ್‌ಗಳು ದೂರದರ್ಶನದ ಜೊತೆ ಹಂಚಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ.

ಮುಂಬೈ(ಅ.28): ಭಾರತದ ಅಂತಾರಾಷ್ಟ್ರೀಯ ಕ್ರಿಕೆಟ್​​​​ ಪಂದ್ಯಗಳ ಸಿಗ್ನಲ್ಸ್‌ಗಳನ್ನು ಪ್ರಸಾರ ಮಾಡುವ ಎಲ್ಲ ಖಾಸಗಿ ಚಾನೆಲ್‌ಗಳು ದೂರದರ್ಶನದ ಜೊತೆ ಹಂಚಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ.

 ಇದರಲ್ಲಿ ವಿಶ್ವಕಪ್‌ ಮತ್ತು ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಂತಹ ಟೂರ್ನಿಗಳಲ್ಲಿನ ಸೆಮಿಫೈನಲ್ಸ್‌ ಮತ್ತು ಫೈನಲ್ಸ್‌ ಪಂದ್ಯಗಳು ಒಳಗೊಂಡಿವೆ.

ಈ ಹಿಂದೆ ದೂರದರ್ಶನದಲ್ಲಿ ಕ್ರಿಕೆಟ್‌ ಪ್ರಸಾರವಾಗದಿದ್ದಾಗ ಹಲವು ನ್ಯಾಯಾಲಯಗಳಲ್ಲಿ ದಾವೆಗಳನ್ನು ಅನೇಕರು ಹೂಡಿದ್ದರು. ಆದ್ದರಿಂದ ದೂರದರ್ಶನ ಮತ್ತು ಆಲ್‌ ಇಂಡಿಯಾ ರೇಡಿಯೋ ಜೊತೆ ಕ್ರಿಕೆಟ್‌ ಸಿಗ್ನಲ್‌ಗಳನ್ನು ಹಂಚಿಕೊಂಡು ಇಂತಹ ಪ್ರಕರಣಗಳನ್ನು ತಪ್ಪಿಸಬೇಕು ಎಂದು ಸಲಹೆ ಮಾಡಿದೆ.