ಕೊಲ್ಕತ್ತಾ(ಅ.03): ಬ್ಯಾಟ್ - ಬಾಲ್ ಹಿಡಿಯುವ ಕೈಯಲ್ಲಿ ಪೊರಕೆ, ಕಸದ ಬುಟ್ಟಿ ಹಿಡಿದ ಟೀಮ್ ಇಂಡಿಯಾ ಆಟಗಾರರು ಸ್ವಚ್ಛ ಭಾರತ ಅಭಿಯಾನದ ಹಿನ್ನಲೆಯಲ್ಲಿ ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನವನ್ನು ಸ್ವಚ್ಚಗೊಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಸಿಸಿಐ ಅಧ್ಯಕ್ಷ ಅನುರಾಗ್​ ಠಾಕೂರ್​ ಮತ್ತು ನಾಯಕ ಕ್ಯಾಪ್ಟನ್​ ಕೊಹ್ಲಿ ಅವರ ಸಾರಥ್ಯದಲ್ಲಿ ಸಂಪೂರ್ಣ ತಂಡ ಮೈದಾನಕ್ಕಿಳಿದು ಸಂಪೂರ್ಣ ಮೈದಾನವನ್ನು ಸ್ವಚ್ಚಗೊಳಿಸಿದರು. 

ಭಾರತ-ನ್ಯೂಜಿಲೆಂಡ್​ ಟೆಸ್ಟ್​ ಮೂರನೇ ದಿನದಾಟ ಮುಗಿದ ನಂತರ, ಟೀಮ್ ಇಂಡಿಯಾ ಆಟಗಾರರು ಕೈಯಲ್ಲಿ ಪೊರಕೆ, ಕಸದ ಬುಟ್ಟಿ ಹಿಡಿದು. ಮೈದಾನವನ್ನು ಸ್ವಚ್ಚಗೊಳಿಸಲು ಮುಂದಾದರು. 

ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಚ ಭಾರತ ಅಭಿಯಾನಕ್ಕೆ ಸಂಪೂರ್ಣ ಬೆಂಬಲು ನೀಡುವ ಜೊತೆಗೆ, ಭಾರತವನ್ನು ಸ್ವಚ್ಚವಾಗಿಡುವ ಸಂದೇಶ ರವಾನಿಸಿದರು.