ಅಗ್ನೀಸ್ಕಾ ರಾಡ್ವಾಂಸ್ಕಾ ವಿರುದ್ಧ ಆಡಿದ ಅವರು,  ಮೊದಲ ಸೆಟ್ ಗೆದ್ದು ಎರಡನೇ ಸೆಟ್ ಸೋತು ಸಾಕಷ್ಟು ಕಿರಿಕಿರಿ ಅನುಭವಿಸಿದರು. ನಂತರ ಕೂದಲು ಕತ್ತರಿಸಿಕೊಂಡರು. ದುಃಖದಲ್ಲೇ 3ನೇ ಸೆಟ್​ ಆಡಿದ ಅವರು  7-5 ಅಂತರದಲ್ಲಿ ಗೆದ್ದು ಚಾಂಪಿಯನ್ ಪಟ್ಟ ಗಳಿಸಿದರು.

ಸಿಂಗಾಪುರ(ಅ.25): ಆಡುವಾಗ ಗೆಲುವಿನ ಮೇಲಷ್ಟೇ ನಿಗಾ ಇರುತ್ತದೆ ಎಂಬುದು ಸಾಮಾನ್ಯ ನಂಬುಗೆ. ಇದರ ಮಧ್ಯೆ ಹೇರ್ ಕಟಿಂಗ್ ಮಾಡಿಕೊಂಡು ಗೆಲುವು ಸಾಧಿಸುವುದು ಮತ್ತೊಂದು ಕಲೆಗಾರಿಕೆ ಎಂಬುದನ್ನು ಹಿರಿಯ ಆಟಗಾರ್ತಿ ಸ್ವೆಟ್ಲಾನ ಕುಜ್ನೆಟ್ಸೋವಾ ನಿರೂಪಿಸಿದ್ದಾರೆ.

ಸಿಂಗಪುರದಲ್ಲಿ ನಡೆಯುತ್ತಿರುವ ಡಬ್ಲ್ಯೂಓಪನ್ ಟೆನಿಸ್ ಟೂರ್ನಿಯಲ್ಲಿ ಪೋಲೆಂಡ್ ಆಟಗಾರ್ತಿ ಆಗ್ನೀಸ್ಕಾ ರಾಡ್ವಾಂಸ್ಕಾ ವಿರುದ್ಧ ಆಡುವಾಗ ಪೋನಿಟೇಲ್ ಮಾದರಿಯ ಹೇರ್‌ಸ್ಟೈಲ್ ಕಣ್ಣಿಗೆ ತಾಕುತ್ತಿದ್ದರಿಂದ ಬೇಸರಗೊಂಡ ಆಕೆ, ಪಂದ್ಯದ ನಡುವೆಯೇ ತಲೆಗೂದಲು ಕತ್ತರಿಸಿ ನೆರೆದಿದ್ದವರನ್ನು ಚಕಿತಗೊಳಿಸಿದರು.

ಅಗ್ನೀಸ್ಕಾ ರಾಡ್ವಾಂಸ್ಕಾ ವಿರುದ್ಧ ಆಡಿದ ಅವರು, ಮೊದಲ ಸೆಟ್ ಗೆದ್ದು ಎರಡನೇ ಸೆಟ್ ಸೋತು ಸಾಕಷ್ಟು ಕಿರಿಕಿರಿ ಅನುಭವಿಸಿದರು. ನಂತರ ಕೂದಲು ಕತ್ತರಿಸಿಕೊಂಡರು. ದುಃಖದಲ್ಲೇ 3ನೇ ಸೆಟ್​ ಆಡಿದ ಅವರು 7-5 ಅಂತರದಲ್ಲಿ ಗೆದ್ದು ಚಾಂಪಿಯನ್ ಪಟ್ಟ ಗಳಿಸಿದರು.

ಹೇರ್'ಕಟ್ ಮಾಡುತ್ತಿರುವ ದೃಶ್ಯ ನಿಮಗಾಗಿ: