ಮೀಡಿಯಾ ಪ್ರೆಂಡ್ಸ್ ಆಯೋಜಿಸಿದ್ದ ಟೆನಿಸ್ ಬಾಲ್ ಟೂರ್ನಿಯಲ್ಲಿ ಸುವರ್ಣ ನ್ಯೂಸ್ ತಂಡ ಟಿವಿ-9 ತಂಡದೆದುರು ಫೈನಲ್'ನಲ್ಲಿ ಎಡವಿ ರನ್ನರ್ಸ್ ಅಪ್'ಗೆ ತೃಪ್ತಿಪಟ್ಟುಕೊಂಡಿತು.
ಬೆಂಗಳೂರು(ನ.28): ತೀವ್ರ ಕುತೂಹಲ ಕೆರಳಿಸಿದ್ದ ಎರಡು ಬೇರೆ-ಬೇರೆ ಕ್ರಿಕೆಟ್ ಟೂರ್ನಮೆಂಟ್'ನಲ್ಲಿ ಸುವರ್ಣ ನ್ಯೂಸ್'ಗೆ ಮಿಶ್ರ ಪ್ರತಿಫಲ ಲಭಿಸಿದೆ. ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಸುವರ್ಣ ನ್ಯೂಸ್'ನ ಒಂದು ತಂಡ ರನ್ನರ್ಸ್ ಆಪ್ ಪ್ರಶ್ತಿ ಬಾಚಿಕೊಂಡರೆ, ಇನ್ನೊಂದು ಟಿ20 ಲೆದರ್ ಬಾಲ್ ಟೂರ್ನಿಯಲ್ಲಿ ಸುವರ್ಣ ನ್ಯೂಸ್'ನ ಮತ್ತೊಂದು ತಂಡ ರೋಚಕ ಸೋಲು ಕಂಡಿತು.
ಮೀಡಿಯಾ ಪ್ರೆಂಡ್ಸ್ ಆಯೋಜಿಸಿದ್ದ ಟೆನಿಸ್ ಬಾಲ್ ಟೂರ್ನಿಯಲ್ಲಿ ಸುವರ್ಣ ನ್ಯೂಸ್ ತಂಡ ಟಿವಿ-9 ತಂಡದೆದುರು ಫೈನಲ್'ನಲ್ಲಿ ಎಡವಿ ರನ್ನರ್ಸ್ ಅಪ್'ಗೆ ತೃಪ್ತಿಪಟ್ಟುಕೊಂಡಿತು. ಭಾನುವಾರ ನಡೆದ ಫೈನಲ್ ಪಂದ್ಯಕ್ಕೂ ಮುನ್ನ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಾ ಫೈನಲ್ ತಲುಪಿದ್ದ ಸುವರ್ಣ ನ್ಯೂಸ್ ತಂಡ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಕೊನೆಯ ಕ್ಷಣದಲ್ಲಿ ಮಾಡಿದ ಎಡವಟ್ಟಿನಿಂದಾಗಿ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಕಾರ್ಪೋರೇಟ್ ಟೂರ್ನಿಯಲ್ಲಿ ರೋಚಕ ಸೋಲು:

ಇನ್ನೊಂದೆಡೆ ನಗರದ ಹೊರವಲಯದಲ್ಲಿರುವ ಆದಿತ್ಯ ಗ್ಲೂಬಲ್ ಗ್ರೌಂಡ್'ನಲ್ಲಿ ಇದೇ ದಿನ ನಡೆದ ಸ್ಟಾರ್ ಕಿಂಗ್ ಫಿಶರ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸುವರ್ಣ ನ್ಯೂಸ್ ತಂಡ ಕೋಲ್ಸ್ ತಂಡದೆದುರು ರೋಚಕ ಸೋಲು ಕಂಡಿತು.
ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ಸುವರ್ಣ ನ್ಯೂಸ್ ತಂಡ ಗೆಲುವಿಗಾಗಿ ಕೊನೆ ಕ್ಷಣದವರೆಗೂ ಹೋರಾಟ ನಡೆಸಿತಾದರೂ ಅಂತಿಮವಾಗಿ ನಿರಾಸೆ ಅನುಭವಿಸಿತು.
ಒಟ್ಟಾರೆ ಸುವರ್ಣ ನ್ಯೂಸ್ ತಂಡಕ್ಕೆ ಒಂದೇ ದಿನ ಮಿಶ್ರ ಫಲ ಅನುಭವಿಸಿತು.
