ರಶೀದ್ ಖಾನ್ ಅದ್ಭುತ ಪ್ರದರ್ಶನವನ್ನು ಕೊಂಡಾಡಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಫ್ಘಾನ್ ಕ್ರಿಕೆಟಿಗನಿಗೆ ಭಾರತದ ಪೌರತ್ವ ನೀಡಿ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್’ಗೆ ದುಂಬಾಲು ಬಿದ್ದಿದ್ದಾರೆ.
ಬೆಂಗಳೂರು[ಮೇ.26]: ರಶೀದ್ ಖಾನ್ ಹಾಲಿ ಐಪಿಎಲ್’ನಲ್ಲಿ ಎದುರಾಳಿ ಬ್ಯಾಟ್ಸ್’ಮನ್’ಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಬೌಲರ್. ಯುದ್ದಪೀಡಿತ ಆಫ್ಘಾನಿಸ್ತಾನದ ಸ್ಪಿನ್ ಪ್ರತಿಭೆ ರಶೀದ್ ಖಾನ್ ತಮ್ಮ ಅಧ್ಬುತ ಬೌಲಿಂಗ್ ಪ್ರದರ್ಶನದ ಮೂಲಕ ಭಾರತೀಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಲಿ ಸನ್’ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿರುವ ರಶೀದ್ ಖಾನ್, ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತ ನೈಟ್’ರೈಡರ್ಸ್ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಗಮನಾರ್ಹ ಪ್ರದರ್ಶನ ತೋರುವುದರೊಂದಿಗೆ ತಂಡವನ್ನು ಫೈನಲ್’ಗೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ರಶೀದ್ ಖಾನ್ ಅದ್ಭುತ ಪ್ರದರ್ಶನವನ್ನು ಕೊಂಡಾಡಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಫ್ಘಾನ್ ಕ್ರಿಕೆಟಿಗನಿಗೆ ಭಾರತದ ಪೌರತ್ವ ನೀಡಿ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್’ಗೆ ದುಂಬಾಲು ಬಿದ್ದಿದ್ದಾರೆ.
ಟ್ವಿಟರಿಗರ ಕೋರಿಕೆಗೆ ಪ್ರತಿಕ್ರಿಯಿಸಿರುವ ಸುಷ್ಮಾ, ನಾನು ಈ ಎಲ್ಲಾ ಟ್ವೀಟ್’ಗಳನ್ನು ನೋಡುತ್ತಿದ್ದೇನೆ. ಪೌರತ್ವಕ್ಕೆ ಸಂಬಂಧಿಸಿದ ವಿಚಾರಗಳು ಗೃಹ ಸಚಿವಾಲಯ ನಿಭಾಯಿಸುತ್ತದೆ ಎಂದು ಟ್ವೀಟ್ ಮಾಡಿದ್ದರು. ಇದಾದ ಬಳಿಕ ಕೆಲಹೊತ್ತಿನಲ್ಲೇ ಆ ಟ್ವೀಟ್ ಅಳಿಸಿಹಾಕಿದ್ದಾರೆ.