ಡಬ್ಲ್ಯೂಡಬ್ಲ್ಯೂಇ ಅನ್ನು ಅಷ್ಟೊಂದು ಸುಲಭವಾಗಿ ಪರಿಗಣಿಸಬೇಡಿ ಎಂದು ಡಬ್ಲ್ಯೂಡಬ್ಲ್ಯೂಇ ವರ್ಲ್ಡ್ ಹೆವಿವೈಟ್ ಚಾಂಪಿಯನ್ ಆಗಿರುವ ಖಲಿ ಸುಶೀಲ್'ಗೆ ಎಚ್ಚರಿಸಿದ್ದಾರೆ. ಸುಶೀಲ್ ಡಬ್ಲ್ಯೂಡಬ್ಲ್ಯೂಇ ಸೇರುವುದು ಸಂತೋಷದ ವಿಷಯವೇ ಸರಿ. ಆದರೆ 33 ವರ್ಷದ ಸುಶೀಲ್ ಡಬ್ಲ್ಯೂಡಬ್ಲ್ಯೂಇ ಯಶಸ್ವಿಯಾಗಲು ಸಾಕಷ್ಟು ಕಷ್ಟಪಡಬೇಕು ಎಂದಿದ್ದಾರೆ.
ನವದೆಹಲಿ(ಅ.16): ಭಾರತದ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಡಬ್ಲ್ಯೂಡಬ್ಲ್ಯೂಇ ಸೇರಲಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿರುವ ಬೆನ್ನಲ್ಲೇ, ದೇಶದ ಏಕೈಕ ಡಬ್ಲ್ಯೂಡಬ್ಲ್ಯೂಇ ಪಟು ಗ್ರೇಟ್ ಖಲಿ ಸುಶೀಲ್'ಗೆ ಎಚ್ಚರಿಕೆ ನೀಡಿದ್ದಾರೆ.
ಡಬ್ಲ್ಯೂಡಬ್ಲ್ಯೂಇ ಅನ್ನು ಅಷ್ಟೊಂದು ಸುಲಭವಾಗಿ ಪರಿಗಣಿಸಬೇಡಿ ಎಂದು ಡಬ್ಲ್ಯೂಡಬ್ಲ್ಯೂಇ ವರ್ಲ್ಡ್ ಹೆವಿವೈಟ್ ಚಾಂಪಿಯನ್ ಆಗಿರುವ ಖಲಿ ಸುಶೀಲ್'ಗೆ ಎಚ್ಚರಿಸಿದ್ದಾರೆ. ಸುಶೀಲ್ ಡಬ್ಲ್ಯೂಡಬ್ಲ್ಯೂಇ ಸೇರುವುದು ಸಂತೋಷದ ವಿಷಯವೇ ಸರಿ. ಆದರೆ 33 ವರ್ಷದ ಸುಶೀಲ್ ಡಬ್ಲ್ಯೂಡಬ್ಲ್ಯೂಇ ಯಶಸ್ವಿಯಾಗಲು ಸಾಕಷ್ಟು ಕಷ್ಟಪಡಬೇಕು ಎಂದಿದ್ದಾರೆ.
ಆರಂಭದ ವಯಸ್ಸಿನಲ್ಲೇ ಡಬ್ಲ್ಯೂಡಬ್ಲ್ಯೂಇ ಸೇರಿದರೆ ಯಶಸ್ಸು ಗಳಿಸುವ ಸಾಧ್ಯತೆಯಿರುತ್ತದೆ. ಹಾಗಾಗಿ ಸುಶೀಲ್ ಸೀಮಿತ ಯಶಸ್ಸು ಗಳಿಸಲಷ್ಟೇ ಸಾಧ್ಯವಾಗಬಹುದು ಎಂದು ಖಲಿ ಅಭಿಪ್ರಾಯಪಟ್ಟಿದ್ದಾರೆ.
ಡಬ್ಲ್ಯೂಡಬ್ಲ್ಯೂಇ ಸ್ವಲ್ಪ ಕಷ್ಟ, ಸುಶೀಲ್ ಸ್ವಲ್ಪ ತಡವಾಗಿ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ ಎಂದೆನಿಸುತ್ತದೆ. ವೈಯಕ್ತಿಕವಾಗಿ ಹೇಳಬೇಕೆಂದರೆ ನನ್ನ ನಂತರ ಇನ್ನೊಬ್ಬ ಭಾರತೀಯನನ್ನು ಡಬ್ಲ್ಯೂಡಬ್ಲ್ಯೂಇ ರಿಂಗ್'ನಲ್ಲಿ ನೋಡಬಯಸುತ್ತೇನೆ ಎಂದು ಖಲಿ ಹೇಳಿದ್ದಾರೆ.
ಖಲಿಯ ನಿಜವಾದ ಹೆಸರು ದಿಲೀಪ್ ಸಿಂಗ್ ರಾಣಾ. 2006ರಲ್ಲಿ ಡಬ್ಲ್ಯೂಡಬ್ಲ್ಯೂಇ ರಿಂಗಿಗಿಳಿದು ಅಂಡರ್'ಟೇಕರ್, ಜಾನ್ ಸೆನಾ ಅವರಂತ ದಿಗ್ಗಜರನ್ನು ಬಗ್ಗುಬಡಿದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.