ಈಗಾಗಲೇ ಶಟ್ಲರ್ ಪಿ.ವಿ. ಸಿಂಧು ಹಾಗೂ ಕ್ರಿಕೆಟಿಗ ಎಂ.ಎಸ್ ಧೋನಿ ಅವರ ಕ್ರೀಡಾ ಸಾಧನೆಯನ್ನು ಪರಿಗಣಿಸಿ ಪದ್ಮಭೂಷಣಕ್ಕೆ ಶಿಫಾರಸು ಮಾಡಲಾಗಿದೆ.
ನವದೆಹಲಿ(ಸೆ.27): ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್’ರ ಹೆಸರನ್ನು ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಭೂಷಣ’ಕ್ಕೆ ಪರಿಗಣಿಸಬೇಕೆಂದು ಅವರ ಕೋಚ್ ಯಶ್’ವೀರ್ ಅರ್ಜಿ ಸಲ್ಲಿಸಿದ್ದಾರೆ.
‘ನನಗೆ ಪದ್ಮವಿಭೂಷಣ ನೀಡಬೇಕೆಂದು ನನ್ನ ಕೋಚ್ ಯಶ್ ವೀರ್ ಅರ್ಜಿ ಸಲ್ಲಿಸಿದ್ದಾರೆ’ ಎಂದು ಸ್ವತಃ ಸುಶೀಲ್ ಕುಮಾರ್ ತಿಳಿಸಿದ್ದಾರೆ. ಈ ಮೊದಲು ಸುಶೀಲ್’ಗೆ 2011ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಒಲಿಂಪಿಕ್ಸ್’ನಲ್ಲಿ ಸುಶೀಲ್ ಕ್ರಮವಾಗಿ ಕಂಚು ಹಾಗೂ ಬೆಳ್ಳಿ ಪದಕ ಜಯಿಸಿದ್ದು, ಇದುವರೆಗೂ ಒಲಿಂಪಿಕ್ಸ್’ನಲ್ಲಿ 2 ಪದಕ ಗೆದ್ದಿರುವ ಏಕೈಕ ಭಾರತೀಯ ಕ್ರೀಡಾಪಟು ಎನ್ನುವ ಹಿರಿಮೆ ಸುಶೀಲ್ ಕುಮಾರ್ ಅವರದ್ದು.
ಈಗಾಗಲೇ ಶಟ್ಲರ್ ಪಿ.ವಿ. ಸಿಂಧು ಹಾಗೂ ಕ್ರಿಕೆಟಿಗ ಎಂ.ಎಸ್ ಧೋನಿ ಅವರ ಕ್ರೀಡಾ ಸಾಧನೆಯನ್ನು ಪರಿಗಣಿಸಿ ಪದ್ಮಭೂಷಣಕ್ಕೆ ಶಿಫಾರಸು ಮಾಡಲಾಗಿದೆ.