ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದ ಗಟ್ಟಿಗಿತ್ತಿ ಮಹಿಳೆಗೆ ಟೀಂ ಇಂಡಿಯಾ ಕ್ರಿಕೆಟಿಗ ಸುರೇಶ್ ರೈನಾ ಸಲ್ಯೂಟ್ ಹೊಡೆಯುವ ಮೂಲಕ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಶ್ರೀನಗರ(ಆ.16): ಸದಾ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಾಗುವ ಕಾಶ್ಮೀರದಲ್ಲಿ ಇದೀಗ ಮತ್ತೊಂದು ಸುದ್ದಿ ವೈರಲ್ ಆಗುತ್ತಿದೆ.
ಹೌದು ಸದಾ ಪ್ರತ್ಯೇಕತೆಯ ಕೂಗು, ಭಯೋತ್ಪಾದನೆ, ಗುಂಡಿನ ಚಕಮಕಿಗಳ ನಡುವೆ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಶ್ರೀನಗರದ ಲಾಲ್ ಚೌಕ್'ನಲ್ಲಿ ಕಾಶ್ಮೀರಿ ಮಹಿಳೆಯೊಬ್ಬರು ಗಟ್ಟಿಯಾಗಿ 'ಭಾರತ್ ಮಾತಾ ಕೀ ಜೈ' ಘೋಷಣೆ ಕೂಗಿರುವ ವಿಡಿಯೋವೀಗ ಸಾಕಷ್ಟು ವೈರಲ್ ಆಗುತ್ತಿದೆ.
ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದ ಗಟ್ಟಿಗಿತ್ತಿ ಮಹಿಳೆಗೆ ಟೀಂ ಇಂಡಿಯಾ ಕ್ರಿಕೆಟಿಗ ಸುರೇಶ್ ರೈನಾ ಸಲ್ಯೂಟ್ ಹೊಡೆಯುವ ಮೂಲಕ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಹೀಗಿದೆ ರೈನಾ ಮಾಡಿರುವ ಟ್ವೀಟ್..