ಸುರೇಶ್ ರೈನಾ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದರು. ಭರ್ಜರಿ ಪ್ರದರ್ಶನದ ಮೂಲಕ ಟೀಂ ಇಂಡಿಯಾಗೆ ಕಮ್'ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದ ರೈನಾ ಮತ್ತೆ ನಿರಾಸೆ ಅನುಭವಿಸಿದರು. ರೈನಾ ಬ್ಯಾಟಿಂಗ್ ಗಮನಿಸಿದರೆ ಅವರ ಕ್ರಿಕೆಟ್ ಭವಿಷ್ಯ ಮುಗಿಯಿತಾ ಅನುಮಾನ ಕೂಡಾ ಮೂಡಲಾರಂಭಿಸಿದೆ.

ಕಾನ್ಪುರ(ನ.19): ಕರ್ನಾಟಕ ನೀಡಿದ ಬೃಹತ್ ರನ್ ಗುರಿ ಬೆನ್ನತ್ತಿದ ಉತ್ತರಪ್ರದೇಶ ಎಚ್ಚರಿಕೆ ಬ್ಯಾಟಿಂಗ್'ಗೆ ಮೊರೆ ಹೋಯಿತಾದರೂ ಮೂರನೇ ದಿನದಂತ್ಯಕ್ಕೆ 243 ರನ್ ಕಲೆ ಹಾಕಿದ್ದು, ಇನ್ನೂ 412 ರನ್'ಗಳ ಹಿನ್ನಡೆಯಲ್ಲಿದೆ. ಒಟ್ಟಾರೆ ಪಂದ್ಯವು ಡ್ರಾ ಆಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

ಕರ್ನಾಟಕ ಮೊದಲ ಇನಿಂಗ್ಸ್'ನಲ್ಲಿ ಕಲೆಹಾಕಿದ್ದ 655 ರನ್'ಗಳ ಭರ್ಜರಿ ಗುರಿ ಬೆನ್ನತ್ತಿದ ಉತ್ತರಪ್ರದೇಶ ಭರ್ಜರಿ ಆರಂಭವನ್ನೇ ಪಡೆಯಿತು. ಆರಂಭಿಕರಾದ ಉಮಾಂಗ್ ಶರ್ಮಾ (89) ಹಾಗೂ ಶಿವಂ ಚೌಧರಿ (57) ತಲಾ ಅರ್ಧಶತಕ ಸಿಡಿಸುವುದರೊಂದಿಗೆ ಮೊದಲ ವಿಕೆಟ್'ಗೆ 106 ರನ್'ಗಳ ಜತೆಯಾಟವಾಯಿತು. ಮೊದಲ ವಿಕೆಟ್ ಜತೆಯಾಟವನ್ನು ಮುರಿಯುವಲ್ಲಿ ಗೌತಮ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಸುರೇಶ್ ರೈನಾ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದರು. ಭರ್ಜರಿ ಪ್ರದರ್ಶನದ ಮೂಲಕ ಟೀಂ ಇಂಡಿಯಾಗೆ ಕಮ್'ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದ ರೈನಾ ಮತ್ತೆ ನಿರಾಸೆ ಅನುಭವಿಸಿದರು. ರೈನಾ ಬ್ಯಾಟಿಂಗ್ ಗಮನಿಸಿದರೆ ಅವರ ಕ್ರಿಕೆಟ್ ಭವಿಷ್ಯ ಮುಗಿಯಿತಾ ಅನುಮಾನ ಕೂಡಾ ಮೂಡಲಾರಂಭಿಸಿದೆ.

ಇನ್ನು 89 ರನ್ ಸಿಡಿಸಿ ಶತಕದತ್ತ ದಾಪುಗಾಲಿಡುತ್ತಿದ್ದ ಉಮಾಂಗ್ ಶರ್ಮಾ ಯುವ ಸ್ಪಿನ್ನರ್ ಶ್ರೇಯಸ್ ಗೋಪಾಲ್'ಗೆ ವಿಕೆಟ್ ಒಪ್ಪಿಸಿದರು. ಒಂದು ಹಂತದಲ್ಲಿ 173/4 ವಿಕೆಟ್ ಕಳೆದುಕೊಂಡಿದ್ದ ಯುಪಿಗೆ ರಿಂಕು ಸಿಂಗ್(57*) ಆಸರೆಯಾಗಿದ್ದಾರೆ. ಪಂದ್ಯ ಮುಕ್ತಾಯಕ್ಕೆ ಇನ್ನೊಂದು ದಿನ ಬಾಕಿಯಿದ್ದು ಫಲಿತಾಂಶ ಬಹುತೇಕ ಡ್ರಾದತ್ತ ಸಾಗುತ್ತಿದೆ. ಇದಕ್ಕೂ ಮೊದಲು ಕರ್ನಾಟಕ ಮೊದಲ ಇನಿಂಗ್ಸ್'ನ ಮೊದಲ ಸೆಷನ್ಸ್'ನಲ್ಲೇ ಆಲೌಟ್ ಆಯಿತು.

ಕರ್ನಾಟಕ ಮೊದಲ ಇನಿಂಗ್ಸ್: 655/10

ಮನೀಶ್ ಪಾಂಡೆ: 238

ಡಿ. ನಿಶ್ಚಲ್: 195

ಉತ್ತರಪ್ರದೇಶ ಮೊದಲ ಇನಿಂಗ್ಸ್: 243/5

ಉಮಾಂಗ್ ಶರ್ಮಾ : 89

ರಿಂಕು ಸಿಂಗ್ : 57*

(ಮೂರನೇ ದಿನದಂತ್ಯಕ್ಕೆ)