ರವಿಶಾಸ್ತ್ರಿ 2014-16ರ ಅವಧಿಯಲ್ಲಿ ಟೀಂ ಇಂಡಿಯಾ ನಿರ್ದೆಶಕರಾಗಿದ್ದಾಗ ತಂಡವು 2015ರ ಏಕದಿನ ವಿಶ್ವಕಪ್ ಮತ್ತು 2016ರ ಟಿ20 ವಿಶ್ವಕಪ್'ನಲ್ಲಿ ಸೆಮಿಫೈನಲ್ ಹಂತ ಪ್ರವೇಶಿಸಿತ್ತು.
ನವದೆಹಲಿ(ಜು.12): ಟೀಂ ಇಂಡಿಯಾ ಮುಖ್ಯ ಕೋಚ್ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ.
ವಿರೇಂದ್ರ ಸೆಹ್ವಾಗ್, ಟಾಮ್ ಮೂಡಿ ಮುಂತಾದವರ ಸ್ಪರ್ಧೆಯ ನಡುವೆ ರವಿಶಾಸ್ತ್ರಿ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ.
ನಾಯಕ ವಿರಾಟ್ ಕೊಹ್ಲಿಯೊಂದಿಗೆ ಉತ್ತಮ ಸಂಬಂಧ ಹೊಂದಿರುವ ರವಿಶಾಸ್ತ್ರಿ ಆಯ್ಕೆ ಅಷ್ಟೇನು ಅಚ್ಚರಿ ಮೂಡಿಸದಿದ್ದರೂ, ವಿದೇಶಿ ಪ್ರವಾಸದ ಸಂದರ್ಭದಲ್ಲಿ ಬೌಲಿಂಗ್ ಸಲಹೆಗಾರರಾಗಿ ಜಹೀರ್ ಖಾನ್(ಜ್ಯಾಕ್) ಹಾಗೂ ಟೆಸ್ಟ್ ಪಂದ್ಯಗಳಿಗೆ ಬ್ಯಾಟಿಂಗ್ ಸಲಹೆಗಾರರಾಗಿ ರಾಹುಲ್ ದ್ರಾವಿಡ್(ಜ್ಯಾಮಿ) ಅವರನ್ನು ಕ್ರಿಕೆಟ್ ಸಲಹಾ ಸಮಿತಿ ನೇಮಿಸಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಈ ಮೂವರಿಗೂ ಟೀಂ ಇಂಡಿಯಾ ಕ್ರಿಕೆಟಿಗ ಸುರೇಶ್ ರೈನಾ ಶುಭಕೋರಿದ್ದು ಹೀಗೆ...
ರವಿಶಾಸ್ತ್ರಿ 2014-16ರ ಅವಧಿಯಲ್ಲಿ ಟೀಂ ಇಂಡಿಯಾ ನಿರ್ದೆಶಕರಾಗಿದ್ದಾಗ ತಂಡವು 2015ರ ಏಕದಿನ ವಿಶ್ವಕಪ್ ಮತ್ತು 2016ರ ಟಿ20 ವಿಶ್ವಕಪ್'ನಲ್ಲಿ ಸೆಮಿಫೈನಲ್ ಹಂತ ಪ್ರವೇಶಿಸಿತ್ತು.